ಕಾಶ್ಮೀರ ನಿರ್ಧಾರ ಪ್ರಶ್ನಿಸಿ ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆಹೋಗುತ್ತಿದ್ದ ಶಾ ಫೈಸಲ್

ಜೆ & ಕೆ ಪೀಪಲ್ಸ್ ಮೂವ್ಮೆಂಟ್ (ಜೆಕೆಪಿಎಂ) ಅಧ್ಯಕ್ಷ ಶಾ ಫಾಸಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ಕಾಶ್ಮೀರಕ್ಕೆ ವಾಪಸ್ ಕಳುಹಿಸಿದಾಗ, ಅವರು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ತೆರಳುತ್ತಿದ್ದರು ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.

Last Updated : Aug 17, 2019, 04:21 PM IST
ಕಾಶ್ಮೀರ ನಿರ್ಧಾರ ಪ್ರಶ್ನಿಸಿ ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆಹೋಗುತ್ತಿದ್ದ ಶಾ ಫೈಸಲ್  title=

ನವದೆಹಲಿ: ಜೆ & ಕೆ ಪೀಪಲ್ಸ್ ಮೂವ್ಮೆಂಟ್ (ಜೆಕೆಪಿಎಂ) ಅಧ್ಯಕ್ಷ ಶಾ ಫಾಸಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ಕಾಶ್ಮೀರಕ್ಕೆ ವಾಪಸ್ ಕಳುಹಿಸಿದಾಗ, ಅವರು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ತೆರಳುತ್ತಿದ್ದರು ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.

ಬುಧವಾರ ಬೆಳಿಗ್ಗೆ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಬಂಧಿಸಿದಾಗ, ಅವರು ಇಸ್ತಾಂಬುಲ್ಗೆ ಹಾರಲು ಸಿದ್ದತೆ ನಡೆಸಿದ್ದರು, ಅಲ್ಲಿಂದ ಅವರು ನೆದರ್ಲ್ಯಾಂಡ್ ನಲ್ಲಿನ ಹೇಗ್ನಲ್ಲಿರುವ ಐಸಿಜೆಯಲ್ಲಿ ವಿಧಿ 370 ನ್ನು ರದ್ದು ಪಡಿಸಿರುವ ಕ್ರಮ ಪ್ರಶ್ನಿಸಲು ಮುಂದಾಗಿದ್ದರು ಎನ್ನಲಾಗಿದೆ.ಆದರೆ ಇದಕ್ಕೆ ಪೊಲೀಸರು ತಡೆ ನೀಡಿ ಅವರನ್ನು ಶ್ರೀನಗರದ ಶೆರಿ ಕಾಶ್ಮೀರ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿರಿಸಿದ್ದರು. ಆದರೆ ಫೈಸಲ್ ಅವರ ತಾಯಿ ಮುಬೀನಾ ಬನೂ ಅವರು ವೈಯಕ್ತಿಕ ಭೇಟಿಗಾಗಿ ಯುಎಸ್ಗೆ ಹೋಗಲು ಯೋಜಿಸುತ್ತಿದ್ದಾರೆಂದು ಹೇಳಿದ್ದಾರೆ ಎನ್ನಲಾಗಿದೆ.

'ನಾನು ಅವರ ಬಂಧನದ ಬಗ್ಗೆ ಟಿವಿ ಮೂಲಕ ಮಾತ್ರ ತಿಳಿದಿದ್ದೇನೆ' ಎಂದು ಮುಬೀನಾ ಬನೂ ಹೇಳಿದರು.ಅವರು ತಮ್ಮ ಶೈಕ್ಷಣಿಕ ಅನ್ವೇಷಣೆಗಳಿಗೆ ಸಂಬಂಧಿಸಿದಂತೆ ಯುಎಸ್ ಗೆ ಹೋಗಲು ದೆಹಲಿಗೆ ತೆರಳಿದ್ದರು.ಜೊತೆಗೆ ಟರ್ಕಿಗೂ ಸಹ ಭೇಟಿ ನೀಡಲು ಯೋಜಿಸಿದ್ದರು ಎಂದು ಹೇಳಿದರು. ಆತನ ಬಂಧನದ ಬಗ್ಗೆ ಸುದ್ದಿ ವರದಿಗಳ ಮೂಲಕ ಮಾತ್ರ ತಿಳಿದಿದೆ ಮತ್ತು ಆತನ ಬಂಧನದ ನಂತರ ಆತನ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಶಾ ಫಾಸಲ್  ಬಂಧನದ ನಂತರ ಕುಟುಂಬದ ಮಹಿಳಾ ಸದಸ್ಯರಿಗೆ ಮಾತ್ರ ಫೈಸಲ್ ಅವರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

Trending News