ವಿ.ಕೆ. ಶಶಿಕಲಾಗೆ ಸೇರಿದ 1600 ಕೋಟಿ ರೂ. ಬೇನಾಮಿ ಆಸ್ತಿ ಮುಟ್ಟುಗೋಲು

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿ. ಜಯಲಲಿತಾ ಅವರ ಪರಮಾಪ್ತೆ ವಿ.ಕೆ. ಶಶಿಕಲಾ ಅವರಿಗೆ ಸೇರಿದ 1600 ಕೋಟಿ ರೂ. ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

Last Updated : Nov 6, 2019, 08:01 AM IST
ವಿ.ಕೆ. ಶಶಿಕಲಾಗೆ ಸೇರಿದ 1600 ಕೋಟಿ ರೂ. ಬೇನಾಮಿ ಆಸ್ತಿ ಮುಟ್ಟುಗೋಲು title=

ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿ. ಜಯಲಲಿತಾ ಅವರ ಪರಮಾಪ್ತೆ ವಿ.ಕೆ. ಶಶಿಕಲಾ ಅವರಿಗೆ ಸೇರಿದ 1600 ಕೋಟಿ ರೂ. ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ 1600 ಕೋಟಿ ರೂ.ಗಳ ಮೌಲ್ಯದ ಬಿನಾಮಿ ಆಸ್ತಿಯನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ನವೆಂಬರ್ 2016 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಶಶಿಕಲಾ ಅವರು ಚೆನ್ನೈ, ಪುದುಚೇರಿ ಮತ್ತು ಕೊಯಮತ್ತೂರಿನಲ್ಲಿ ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಶಶಿಕಲಾ ಈ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಶಶಿಕಲ ಹಲವು ಜನರ ಹೆಸರಿನಲ್ಲಿ ಸುಮಾರು 1500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿರುವುದಾಗಿ ಆರೋಪಿಸಲಾಗಿದೆ. 2017 ರಲ್ಲಿ, ಆದಾಯ ತೆರಿಗೆ ಇಲಾಖೆ ಆಪರೇಷನ್ ಕ್ಲೀನ್ ಮನಿ ಅಡಿಯಲ್ಲಿ ಶಶಿಕಲಾ ಮತ್ತು ಇತರರ ವಿರುದ್ಧ ತನ್ನ ಅಡಗುತಾಣಗಳ ಮೇಲೆ ದಾಳಿ ನಡೆಸಿತು. ಈ ಸಮಯದಲ್ಲಿ ಅನಾಮಧೇಯ ಆಸ್ತಿಯನ್ನು ಪತ್ತೆಹಚ್ಚಲಾಗಿತ್ತು.

ದಿ. ಜಯಲಲಿತಾ ಅವರ ಪರಮಾಪ್ತೆ ವಿ.ಕೆ. ಶಶಿಕಲಾ:
5 ಡಿಸೆಂಬರ್ 2016 ರಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜೆ. ಜಯಲಲಿತಾ ನಿಧನರಾದರು. ತಮಿಳುನಾಡಿನಲ್ಲಿ 'ಅಮ್ಮ' ಎಂದೇ ಗೌರವಿಸಲ್ಪಡುತ್ತಿದ್ದ ಜಯಲಲಿತಾ ಅವರಿಗೆ ವಿ.ಕೆ. ಶಶಿಕಲಾ ಪರಮಾಪ್ತೆಯಾಗಿದ್ದರು. ಜಯಲಲಿತಾ ಅವರ ಮರಣದ ನಂತರ ಎಐಎಡಿಎಂಕೆ ಆಡಳಿತವನ್ನು ಶಶಿಕಲಾ ಅವರೇ ವಹಿಸಿಕೊಂಡರು. ಜಯಲಲಿತಾ ಅವರ ಸಾವಿನ ನಂತರ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸಲಾಯಿತು. ಇದಕ್ಕೂ ಮೊದಲು ಜಯಲಲಿತಾ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು 27 ವರ್ಷಗಳ ಕಾಲ ನಿರ್ವಹಿಸಿದ್ದರು. 

Trending News