Petrol at Rs 1 per Litre : 'ಯಾರಿಗುಂಟು ಯಾರಿಗಿಲ್ಲಾ' : 1 ರೂ.ಗೆ 1 ಲೀಟರ್ 'ಪೆಟ್ರೋಲ್'!

ಉದ್ಧವ್​ ಠಾಕ್ರೆ ಜನ್ಮದಿನ ಪ್ರಯುಕ್ತ ಕೇವಲ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಾಟ

Last Updated : Jun 14, 2021, 10:38 AM IST
  • ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರುತ್ತಿದೆ
  • ಬೆಂಗಳೂರು, ಮುಂಬೈ ಮತ್ತು ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿ ಲೀಟರ್‌ʼಗೆ 100 ರೂ.ಗಳ ಗಡಿ ದಾಟಿದೆ.
  • ಉದ್ಧವ್​ ಠಾಕ್ರೆ ಜನ್ಮದಿನ ಪ್ರಯುಕ್ತ ಕೇವಲ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಾಟ
Petrol at Rs 1 per Litre : 'ಯಾರಿಗುಂಟು ಯಾರಿಗಿಲ್ಲಾ' : 1 ರೂ.ಗೆ 1 ಲೀಟರ್ 'ಪೆಟ್ರೋಲ್'! title=

ನವದೆಹಲಿ : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಕೆಲವು ತಿಂಗಳುಗಳಿಂದ ಗಗನಕ್ಕೇರುತ್ತಿದೆ. ಬೆಂಗಳೂರು, ಮುಂಬೈ ಮತ್ತು ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಪ್ರತಿ ಲೀಟರ್‌ʼಗೆ 100 ರೂ.ಗಳ ಗಡಿ ದಾಟಿದೆ. ಇದರ ನಡುವೆ 1 ಲೀಟರ್ ಪೆಟ್ರೋಲ್ ಗೆ 1 ರೂ.ಗೆ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.

ಹೌದು, ಮಹಾರಾಷ್ಟ್ರದಲ್ಲಿ ಶಿವಸೇನೆ ವತಿಯಿಂದ ಆದಿತ್ಯ​ ಠಾಕ್ರೆ(Aditya Thackeray's Birthday) ಜನ್ಮದಿನ ಪ್ರಯುಕ್ತ ಕೇವಲ 1 ರೂಪಾಯಿಗೆ 1 ಲೀಟರ್ ಪೆಟ್ರೋಲ್ ಮಾರಾಟ ಮಾಡಲಾಗಿದೆ.

ಇದನ್ನೂ ಓದಿ : Poco M3 Pro 5G ಮೊದಲ ಸೇಲ್ , ರಿಯಾಯಿತಿಯೊಂದಿಗೆ ಎಷ್ಟಿರಲಿದೆ ದರ ತಿಳಿಯಿರಿ

ಯೆಸ್, ಮಹಾರಾಷ್ಟ್ರದ ಡೊಂಬಿವಲಿ ಯುವ ಸೇನೆ(Shiv Sena) ಅಲ್ಲಿನ ಉಸ್ಮಾ ಪೆಟ್ರೋಲ್​ ಬಂಕ್​ನಲ್ಲಿ ಭಾನುವಾರ ಬೆಳಗ್ಗೆಯಿಂದ ಕೇವಲ ಒಂದು ರೂಪಾಯಿಗೆ 1 ಲೀಟರ್​ ಪೆಟ್ರೋಲ್ ಮಾರಾಟ ಮಾಡಿದೆ. ಇಷ್ಟೊಂದು ಕಡಿಮೆ ಬೆಲೆಗೆ ಪೆಟ್ರೋಲ್ ಸಿಗುತ್ತಿದೆ ಅಂದರೆ ಜನ ಬಿಡ್ತಾರಾ? ಕಡಿಮೆ ಬೆಲೆಗೆ ಪೆಟ್ರೋಲ್​ ಸಿಗುತ್ತಿರುವ ವಿಚಾರ ತಿಳಿದ ಜನರು ಬೆಳಗ್ಗೆಯಿಂದಲೂ ಕ್ಯೂ ನಿಂತು ಪೆಟ್ರೋಲ್ ಹಾಕಿಸಿಕೊಂಡು ಹೋಗಿದ್ದಾರೆ. 

ಇದನ್ನೂ ಓದಿ : Oxygen Plant:ಕರೋನಾ ಮೂರನೇ ತರಂಗದಲ್ಲಿ ಎದುರಾಗಲ್ಲ ಆಮ್ಲಜನಕದ ಕೊರತೆ

ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಈ ರೀತಿ 1 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್(Petrol) ಮಾರಾಟ ಮಾಡಲಾಗಿದೆ. ಮುಂಬೈನಲ್ಲಿ ಪೆಟ್ರೋಲ್​ ದರ 102 ರೂಪಾಯಿ ತಲುಪಿದ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದ ಶಿವಸೇನೆ ಗ್ರಾಹಕರಿಗೆ ಬಂಪರ್ ಪೆಟ್ರೋಲ್ ಕೊಡುಗೆ ನೀಡಿದೆ. 

ಇದನ್ನೂ ಓದಿ : petrol diesel rate today: ಧಾರಣೆಯಲ್ಲಿ ನೂರರ ಗಡಿ ದಾಟಿದ ಡಿಸೇಲ್ , ಇಂದಿನ ಪೆಟ್ರೋಲ್ , ಡಿಸೇಲ್ ಬೆಲೆ ಎಷ್ಟು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News