Poco M3 Pro 5G ಮೊದಲ ಸೇಲ್ , ರಿಯಾಯಿತಿಯೊಂದಿಗೆ ಎಷ್ಟಿರಲಿದೆ ದರ ತಿಳಿಯಿರಿ

ಪೊಕೊದ ಕಂಪನಿಯ ಲೆಟೆಸ್ಟ್ ಫೋನ್ Poco M3 Pro 5G ಯ ಮೊದಲ ಸೇಲ್ ಇಂದಿನಿಂದ ಆರಂಭವಾಗಲಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ರಿಂದ ಸೇಲ್ ಪ್ರಾರಂಭಿಸಲಾಗುವುದು. ಫೋನ್‌ ಮೇಲೆ ಉತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ. 

Written by - Ranjitha R K | Last Updated : Jun 14, 2021, 10:00 AM IST
  • Poco M3 Pro 5G ಯ ಮೊದಲ ಸೇಲ್ ಇಂದಿನಿಂದ ಆರಂಭ
  • ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ರಿಂದ ಸೇಲ್ ಪ್ರಾರಂಭ
  • ಫೋನ್ ಬೆಲೆ ಮತ್ತು ಫೀಚರ್ ತಿಳಿಯಿರಿ
Poco M3 Pro 5G ಮೊದಲ ಸೇಲ್ , ರಿಯಾಯಿತಿಯೊಂದಿಗೆ ಎಷ್ಟಿರಲಿದೆ ದರ ತಿಳಿಯಿರಿ title=
Poco M3 Pro 5G ಯ ಮೊದಲ ಸೇಲ್ (photo zee news)

ನವದೆಹಲಿ : ಪೊಕೊದ (Poco) ಕಂಪನಿಯ ಲೆಟೆಸ್ಟ್ ಫೋನ್ Poco M3 Pro 5G ಯ ಮೊದಲ ಸೇಲ್ ಇಂದಿನಿಂದ ಆರಂಭವಾಗಲಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ರಿಂದ ಸೇಲ್ ಪ್ರಾರಂಭಿಸಲಾಗುವುದು. ಫೋನ್‌ ಮೇಲೆ ಉತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ. ಫೋನ್ ಕೂಲ್ ಬ್ಲೂ, ಪವರ್ ಬ್ಲ್ಯಾಕ್ ಮತ್ತು ಹಳದಿ ಹೀಗೆ ಮೂರು ಬಣ್ಣಗಳಲ್ಲಿ ಪೋನ್ ಲಭ್ಯವಿರುತ್ತದೆ.  ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಫೋನ್ ಅನ್ನು ಪರಿಚಯಿಸಲಾಗುತ್ತಿದೆ. 5000mAh ಬ್ಯಾಟರಿಯೊಂದಿಗೆ ಫೋನ್ 48mAh ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 

ಬೆಲೆ ಮತ್ತು ಆಫರ್ (Price & Offer) : 
4 GB  RAM 64 GB ಇಂಟರ್ ನೆಲ್ ಸ್ಟೋರೆಜ್ ಹೊಂದಿರುವ Poco M3 Pro 5G ವೇರಿಯೆಂಟ್ ನ ಬೆಲೆ 13,999 ರೂ., ಅದರ 6 GB  RAM ಮತ್ತು 128 GB ಇಂಟರ್ ನೆಲ್ ಸ್ಟೋರೆಜ್  ಹೊಂದಿರುವ ಫೋನ್ ಬೆಲೆ 15,999 ರೂ. ಈ ಸೇಲ್ ನಲ್ಲಿ ಗ್ರಾಹಕರಿಗೆ (Customers) 500 ರೂ.ಗಳ ರಿಯಾಯಿತಿ (Discount) ನೀಡಲಾಗುವುದು.

ಇದನ್ನೂ ಓದಿ : Flipkart Big Saving Days Sale : ಸ್ಮಾರ್ಟ್ ಫೋನ್, ಗೆಜೆಟ್ ಗಳ ಮೇಲೆ ಸಿಗಲಿದೆ 80 ಶೇ. ರಷ್ಟು ರಿಯಾಯಿತಿ

ವೈಶಿಷ್ಟ್ಯಗಳು (Specifications) : 
Poco M3 Pro 5G  6.50 ಇಂಚಿನ ಡಿಸ್ಪ್ಲೇ ಹೊಂದಿದ್ದು, ಇದು 1080x2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಇದೆ. ಫೋನ್ ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6 GB  RAM ಮತ್ತು 128 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದನ್ನು 1 ಟಿಬಿ ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ (Camera): 
ಪೊಕೊ ಎಂ 3 ಪ್ರೊ 5 ಜಿ ಯಲ್ಲಿ ಫೋಟೋಗ್ರಾಫಿಗಾಗಿ  ಟ್ರಿಪಲ್ ರಿಯರ್ ಕ್ಯಾಮೆರಾ (camera) ಸೆಟಪ್ ನೀಡಲಾಗಿದೆ, 48 ಮೆಗಾಪಿಕ್ಸೆಲ್‌ಗಳ ಪ್ರೈಮೆರಿ ಕ್ಯಾಮರಾವನ್ನು ಒಳಗೊಂಡಿದೆ. ಇದಲ್ಲದೆ ಫೋನ್‌ನಲ್ಲಿ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಲಭ್ಯವಿದೆ. ಫೋನ್ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ : WhatsApp Upcoming Features: ಬಳಕೆದಾರರ ಚಾಟಿಂಗ್ ಅನುಭವ ಬದಲಿಸಲು ಮುಂದಾದ WhatsApp? ಬಳಕೆದಾರರಿಗೇನು ಲಾಭ?

ಬ್ಯಾಟರಿ ಮತ್ತು ಕನೆಕ್ಟಿವಿಟಿ :
ಪೊಕೊ ಎಂ 3 ಪ್ರೊ 5 ಜಿ ಯಲ್ಲಿ 5000mAh ಬ್ಯಾಟರಿ ನೀಡಲಾಗಿದೆ. ಫೋನ್‌ನಲ್ಲಿ ಸುರಕ್ಷತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಲಭ್ಯವಿದೆ. ಸಂಪರ್ಕಕ್ಕಾಗಿ, ಇದರಲ್ಲಿ WiFi ಬ್ಲೂಟೂತ್, GPS, ಯುಎಸ್ಬಿ ಟೈಪ್ ಸಿ ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News