Shiv Sena Party: 'ರಾಹುಲ್​ನ್ನು ಕಂಡರೆ ಕೇಂದ್ರದ ನಾಯಕರು ಹೆದರುತ್ತಾರೆ'

'ಬಿಜೆಪಿಯಲ್ಲಿ ಮೋದಿ ಹೇಗೋ, ಕಾಂಗ್ರೆಸ್​ನಲ್ಲಿ ರಾಹುಲ್​ ಗಾಂಧಿ ಹಾಗೇ. ಅವರು ಕೇಂದ್ರ ಸರ್ಕಾರದ ವಿರುದ್ಧದ ನಿಜವಾದ ಹೋರಾಟಗಾರ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಒಬ್ಬ ವ್ಯಕ್ತಿ ಹೋರಾಟಡಿದರೂ ಭಯ ಪಡುತ್ತಾರೆ.

Last Updated : Jan 7, 2021, 05:47 PM IST
  • ಶಿವಸೇನೆಯು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧೀಗೆ ಹೊಗಳಿಕೆಯ ಸರಮಾಲೆಯನ್ನೇ ತೊಡಿಸಿದ್ದು, ಅವರೇ ಅಧ್ಯಕ್ಷರಾಗಬೇಕೆಂಬ ಇಂಗಿತ ತೋಡಿಕೊಂಡಿದೆ.
  • 'ಬಿಜೆಪಿಯಲ್ಲಿ ಮೋದಿ ಹೇಗೋ, ಕಾಂಗ್ರೆಸ್​ನಲ್ಲಿ ರಾಹುಲ್​ ಗಾಂಧಿ ಹಾಗೇ. ಅವರು ಕೇಂದ್ರ ಸರ್ಕಾರದ ವಿರುದ್ಧದ ನಿಜವಾದ ಹೋರಾಟಗಾರ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಒಬ್ಬ ವ್ಯಕ್ತಿ ಹೋರಾಟಡಿದರೂ ಭಯ ಪಡುತ್ತಾರೆ.
  • ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕಿನ್ನೂ ತೆರೆ ಬಿದ್ದಿಲ್ಲ. ರಾಹುಲ್​ ಗಾಂಧಿ ಅಥವಾ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.
Shiv Sena Party: 'ರಾಹುಲ್​ನ್ನು ಕಂಡರೆ ಕೇಂದ್ರದ ನಾಯಕರು ಹೆದರುತ್ತಾರೆ' title=

ಮುಂಬೈ: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕಿನ್ನೂ ತೆರೆ ಬಿದ್ದಿಲ್ಲ. ರಾಹುಲ್​ ಗಾಂಧಿ ಅಥವಾ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಹಾಗಿರುವಾಗಲೇ ಶಿವಸೇನೆಯು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧೀಗೆ ಹೊಗಳಿಕೆಯ ಸರಮಾಲೆಯನ್ನೇ ತೊಡಿಸಿದ್ದು, ಅವರೇ ಅಧ್ಯಕ್ಷರಾಗಬೇಕೆಂಬ ಇಂಗಿತ ತೋಡಿಕೊಂಡಿದೆ.

ಶಿವಸೇನೆಯ ಸಮನಾ ಪತ್ರಿಕೆಯ ಸಂಪಾದಕೀಯ ಅಂಕಣವನ್ನು ರಾಹುಲ್​ ಗಾಂಧಿ(Rahul Gandh) ಹೊಗಳಿಕೆಗೇ ಮೀಸಲಿಡಲಾಗಿದೆ. 'ಬಿಜೆಪಿಯಲ್ಲಿ ಮೋದಿ ಹೇಗೋ, ಕಾಂಗ್ರೆಸ್​ನಲ್ಲಿ ರಾಹುಲ್​ ಗಾಂಧಿ ಹಾಗೇ. ಅವರು ಕೇಂದ್ರ ಸರ್ಕಾರದ ವಿರುದ್ಧದ ನಿಜವಾದ ಹೋರಾಟಗಾರ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಒಬ್ಬ ವ್ಯಕ್ತಿ ಹೋರಾಟಡಿದರೂ ಭಯ ಪಡುತ್ತಾರೆ. ಅದರಲ್ಲೂ ಹೋರಾಡುತ್ತಿರುವ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ ಭಯ ನೂರು ಪಟ್ಟಾಗುತ್ತದೆ. ಅಂತದ್ದೇ ಒಬ್ಬ ಹೋರಾಟಗಾರ ರಾಹುಲ್​ ಗಾಂಧಿ. ದೆಹಲಿಯಲ್ಲಿರುವ ನಾಯಕರಿಗೆ ರಾಹುಲ್​ ಗಾಂಧಿ ಕಂಡರೆ ಹೆಚ್ಚು ಭಯವಿದೆ' ಎಂದು ಸಂಪಾದಕೀಯ ಅಂಕಣದಲ್ಲಿ ಹೇಳಲಾಗಿದೆ.

ಖ್ಯಾತ ಫ್ಯಾಶನ್ ಡಿಸೈನರ್ ಸತ್ಯಪಾಲ್ ನಿಧನ

ಕಾಂಗ್ರೆಸ್​ಗೆ ರಾಹುಲ್​ ಗಾಂಧಿ ಬಿಟ್ಟರೆ ಬೇರೊಬ್ಬ ಪರ್ಯಾಯ ವ್ಯಕ್ತಿ ಇಲ್ಲವೇ ಇಲ್ಲ. ಅವರನ್ನು ಅಪಹಾಸ್ಯ ಮಾಡಲಾಗುತ್ತದೆ. ಆದರೆ ಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ತಿರುಗಿ ಬೀಳುವುದು ಅವರು ಮಾತ್ರ. ಪಕ್ಷಕ್ಕೆ ಅಧ್ಯಕ್ಷ ಸ್ಥಾನಕ್ಕೆ ಅವರು ಏರಿದರೆ ಒಳಿತಾಗಲಿದೆ ಎಂದು ಶಿವಸೇನೆ ಹೇಳಿದೆ.

Insurance ಕಂಪನಿ ನಿಯಮದಲ್ಲಿ ಬದಲಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News