ನವ ದೆಹಲಿ: ದೆಹಲಿಯಲ್ಲಿ ವಾತಾವರಣ ಹದಗೆಟ್ಟಿರುವ ಕಾರಣ ಮಕ್ಕಳ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ದೆಹಲಿಯ ಎಲ್ಲಾ ಶಾಲಾಗಳಿಗೆ ಭಾನುವಾರದವರೆಗೆ ರಜೆ ಘೋಷಿಸಿದ್ದಾರೆ.
दिल्ली में हवा की स्थिति बिगड़ रही है। ऐसे में बच्चों के स्वास्थ्य से समझौता नहीं किया जा सकता। रविवार तक दिल्ली के सभी स्कूल बंद रखने के निर्देश दिए हैं।
— Manish Sisodia (@msisodia) November 8, 2017
ಉನ್ನತ ಮಟ್ಟದ ಗಾಳಿಯ ಗುಣಮಟ್ಟ ಮತ್ತು ಗಂಭೀರ ಮಟ್ಟದ ಮಂಜಿನಿಂದಾಗಿ, ನಗರದ ಎಲ್ಲಾ ಶಾಲೆಗಳು ಭಾನುವಾರ ತನಕ ಮುಚ್ಚಲಾಗುವುದು ಎಂದು ದೆಹಲಿ ಸರ್ಕಾರ ನಿರ್ಧರಿಸಿದೆ.
ಭಾನುವಾರದವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿರುವ ದೆಹಲಿ ಸರ್ಕಾರ, ಬುಧವಾರ ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿತ್ತು.