ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ?

ಯಾವ  ರಾಜ್ಯಗಳಲ್ಲಿ ಎಷ್ಟು ಮಂದಿ ಕೊರೋನಾ ರೋಗಿಗಳಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ‌ ಪ್ರಸ್ತುತ ಪಡಿಸಲಾಗುತ್ತಿದೆ.

Last Updated : May 21, 2020, 07:45 AM IST
ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ? title=

ನವದೆಹಲಿ: ಕಂಡುಕೇಳರಿಯದ ‌ಕೊರೋನಾ ವೈರಸ್ ಅನ್ನು ನಿರ್ನಾಮ ಮಾಡಬೇಕೆಂದು  ಲಾಕ್‌ಡೌನ್‌ (Lockdown) ಜಾರಿಗೊಳಿಸಲಾಗಿದೆ. ಆದರೆ ದಿನದಿಂದ ದಿನಕ್ಕೆ ಸೋಂಕು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಈಗಾಗಲೇ ಸೋಂಕು ಪೀಡಿತರ ಸಂಖ್ಯೆ 1 ಲಕ್ಷದ ಗಡಿಯನ್ನೂ ದಾಟಿದೆ. ಜೊತೆಗೆ ಮೃತರ ಸಂಖ್ಯೆಯೂ 3 ಸಾವಿರದ ದಾಟಿ ಮುಂದೆ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವ  ರಾಜ್ಯಗಳಲ್ಲಿ ಎಷ್ಟು ಮಂದಿ ಕೊರೋನಾ ರೋಗಿಗಳಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ‌ ಪ್ರಸ್ತುತ ಪಡಿಸಲಾಗುತ್ತಿದೆ.

ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿನ ‌ಕೊರೊನಾವೈರಸ್ (Coronavirus)  ಪೀಡಿತರ ಸಂಖ್ಯೆ ‌ಇಡೀ ದೇಶದ ಕೋವಿಡ್ -19 (Covid-19)   ಪೀಡಿತರ ಸಂಖ್ಯೆಯ ಮೂರನೇ ಒಂದರಷ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ತಮಿಳುನಾಡು ಇದೆ. ರಾಷ್ಟ್ರ ರಾಜಧಾನಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯಗಳ ವಿವರ ಈ‌ ಕೆಳಗಿನಂತಿದೆ.

  1. ಮಹಾರಾಷ್ಟ್ರ: 2,250 ಹೊಸ ಪ್ರಕರಣಗಳು; ಒಟ್ಟು 39,297 
  2. ತಮಿಳುನಾಡು: 743 ಹೊಸ ಪ್ರಕರಣಗಳು; ಒಟ್ಟು 13,191 
  3. ಗುಜರಾತ್: 398 ಹೊಸ ಪ್ರಕರಣಗಳು; ಒಟ್ಟು 12,539
  4. ದೆಹಲಿ: 534 ಹೊಸ ಪ್ರಕರಣಗಳು; ಒಟ್ಟು 11,088
  5. ರಾಜಸ್ಥಾನ: 170 ಹೊಸ ಪ್ರಕರಣಗಳು; ಒಟ್ಟು 6,015
  6. ಮಧ್ಯಪ್ರದೇಶ: 270 ಹೊಸ ಪ್ರಕರಣಗಳು; ಒಟ್ಟು 5,735
  7. ಪಶ್ಚಿಮ ಬಂಗಾಳ: 142 ಹೊಸ ಪ್ರಕರಣಗಳು; ಒಟ್ಟು 3,103 
  8. ಪಂಜಾಬ್: 3 ಹೊಸ ಪ್ರಕರಣಗಳು; ಒಟ್ಟು 2,005
  9. ತೆಲಂಗಾಣ: 27 ಹೊಸ ಪ್ರಕರಣಗಳು; ಒಟ್ಟು 1,661
  10. ಕರ್ನಾಟಕ: 67 ಹೊಸ ಪ್ರಕರಣಗಳು;  ಒಟ್ಟು1,462
  11. ಜಮ್ಮು ಕಾಶ್ಮೀರ: 73 ಹೊಸ ಪ್ರಕರಣಗಳು; ಒಟ್ಟು 1,390 
  12. ಹರಿಯಾಣ: 29 ಹೊಸ ಪ್ರಕರಣಗಳು; ಒಟ್ಟು 993
  13. ಕೇರಳ: 24 ಹೊಸ ಪ್ರಕರಣಗಳು; ಒಟ್ಟು 666
  14. ಜಾರ್ಖಂಡ್: 30 ಹೊಸ ಪ್ರಕರಣಗಳು; ಒಟ್ಟು 278
  15. ಚಂಡೀಗಢ: 2 ಹೊಸ ಪ್ರಕರಣಗಳು; ಒಟ್ಟು 202
  16. ಅಸ್ಸಾಂ: 14 ಹೊಸ ಪ್ರಕರಣಗಳು; ಒಟ್ಟು 185
  17. ಉತ್ತರಾಖಂಡ: 2 ಹೊಸ ಪ್ರಕರಣಗಳು; ಒಟ್ಟು 122
  18. ಹಿಮಾಚಲಪ್ರದೇಶ: 49 ಸಕ್ರಿಯ ಪ್ರಕರಣಗಳು; ಒಟ್ಟು 104 
  19. ಗೋವಾ: 4 ಹೊಸ ಪ್ರಕರಣಗಳು; ಒಟ್ಟು 50 
  20. ಮಣಿಪುರ: 11 ಹೊಸ ಪ್ರಕರಣಗಳು; ಒಟ್ಟು 20

Trending News