INX ಹಗರಣ: ಪಿ.ಚಿದಂಬರಂ ಜಾಮೀನು ಅರ್ಜಿ ಪರಿಗಣಿಸಲು ಕೆಳ ನ್ಯಾಯಾಲಯಕ್ಕೆ ಸುಪ್ರೀಂ ಸೂಚನೆ

ನ್ಯಾಯಾಂಗ ಕಸ್ಟಡಿಯಲ್ಲಿರುವಾಗ ತಮ್ಮನ್ನು ತಿಹಾರ್‌ ಜೈಲಿಗೆ ಕಳುಹಿಸಬಾರದು, ಬೇಕಿದ್ದರೆ ಗೃಹ ಬಂಧನದಲ್ಲಿರಿಸಿ ಎಂದು ಪಿ. ಚಿದಂಬರಂ ಮನವಿ ಮಾಡಿದ ಬಳಿಕ ಕೋರ್ಟ್ ಈ ಸೂಚನೆ ನೀಡಿದೆ.

Edited by - Divyashree K | Last Updated : Sep 2, 2019, 08:07 PM IST
INX ಹಗರಣ: ಪಿ.ಚಿದಂಬರಂ ಜಾಮೀನು ಅರ್ಜಿ ಪರಿಗಣಿಸಲು ಕೆಳ ನ್ಯಾಯಾಲಯಕ್ಕೆ ಸುಪ್ರೀಂ ಸೂಚನೆ title=
File Image

ನವದೆಹಲಿ: ಸಿಬಿಐ ರಿಮಾಂಡ್ ನಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅರ್ಜಿಯ ಕುರಿತು ನ್ಯಾಯಾಲಯ ಇಂದು ತನ್ನ ನಿರ್ಧಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ಕಸ್ಟಡಿಯಲ್ಲಿರುವಾಗ ತಮ್ಮನ್ನು ತಿಹಾರ್‌ ಜೈಲಿಗೆ ಕಳುಹಿಸಬಾರದು, ಬೇಕಿದ್ದರೆ ಗೃಹ ಬಂಧನದಲ್ಲಿರಿಸಿ ಎಂದು ಪಿ. ಚಿದಂಬರಂ ಮನವಿ ಮಾಡಿದ ಬಳಿಕ ಕೋರ್ಟ್ ಈ ಸೂಚನೆ ನೀಡಿದೆ.

ಚಿದಂಬರಂಗೆ ಕೆಳ ನ್ಯಾಯಾಲಯದಿಂದ ಜಾಮೀನು ಸಿಗದಿದ್ದರೆ, ಅವರು ಇನ್ನೂ ಮೂರು ದಿನಗಳ ಕಾಲ ಸಿಬಿಐ ವಶದಲ್ಲಿರುತ್ತಾರೆ. ಅಂದರೆ ಚಿದಂಬರಂ ಅವರನ್ನು 5 ನೇ ತಾರೀಖಿನವರೆಗೆ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಆದರೆ, ಸುಪ್ರೀಂ ಕೋರ್ಟ್‌ನ ಆದೇಶವನ್ನು ಮರುಪರಿಶೀಲಿಸುವಂತೆ ಸಿಬಿಐ ವಕೀಲ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ನಿಮ್ಮ(ಸುಪ್ರೀಂಕೋರ್ಟ್) ಆದೇಶವು ಚಿದಂಬರಂಗೆ ಒಂದು ರೀತಿಯಲ್ಲಿ ಜಾಮೀನು ನೀಡಿದೆ ಎಂದು ಮೆಹ್ತಾ ಹೇಳಿದ್ದಾರೆ. ಇದಾದ ನಂತರ, ಚಿದಂಬರಂ ಅವರ ಸಿಬಿಐ ರಿಮಾಂಡ್ ಅನ್ನು ಬುಧವಾರದವರೆಗೆ ಮಾತ್ರ ವಿಸ್ತರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಇದಕ್ಕೂ ಮುನ್ನ ಶುಕ್ರವಾರ (ಆಗಸ್ಟ್ 30) ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ನ್ಯಾಯಾಲಯ ಸೋಮವಾರದವರೆಗೆ ವಿಸ್ತರಿಸಿದೆ.

ಚಿದಂಬರಂಗೆ ಆರ್ಥಿಕ ಅಕ್ರಮಗಳ ಆರೋಪ ಹೊರಿಸಿ ಸಿಬಿಐ 2017 ರಲ್ಲಿ ಪ್ರಕರಣ ದಾಖಲಿಸಿದೆ ಎಂದು ವಿವರಿಸಿ. 2007 ರಲ್ಲಿ ಐಎನ್‌ಎಕ್ಸ್ ಮೀಡಿಯಾಕ್ಕೆ ನೀಡಿರುವ ವಿದೇಶಿ ಹೂಡಿಕೆ ಪ್ರಚಾರ ಮಂಡಳಿ (ಎಫ್‌ಐಪಿಬಿ) ಅನುಮೋದನೆಯಲ್ಲಿನ ಅಕ್ರಮಗಳ ಆರೋಪ ಅವರ ಮೇಲಿದೆ. ಆ ಸಮಯದಲ್ಲಿ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದರು. ಸಿಬಿಐ ನೋಂದಾಯಿಸಿದ ಎಫ್‌ಐಆರ್ ಹೊರತಾಗಿ, ಜಾರಿ ನಿರ್ದೇಶನಾಲಯ (ಇಡಿ) ಕೂಡ ಚಿದಂಬರಂ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದೆ.

Trending News