ನವದೆಹಲಿ: ಡಿಸೆಂಬರ್ 26ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಬೆಳಗ್ಗೆ 8ಗಂಟೆಗೆ ಆರಂಭಗೊಳ್ಳಲಿದ್ದು, 10.57ರವರೆಗೆ ಇದು ಪ್ರಭಾವದಲ್ಲಿರಲಿದೆ. ಇದೊಂದು ಖಗ್ರಾಸ್ ಸೂರ್ಯಗ್ರಹಣವಾಗಿದ್ದು, ಭಾರತ ಸೇರಿದಂತೆ ಆಸ್ಟ್ರೇಲಿಯಾ, ಫಿಲಿಪೈನ್ಸ್, ಸೌದಿ ಅರೇಬಿಯಾ ಹಾಗೂ ಸಿಂಗಾಪುರ್ ಗಳಲ್ಲಿ ಗೋಚರಿಸಲಿದೆ. ಇದಕ್ಕೂ ಮೊದಲು ಈ ವರ್ಷ ಜನವರಿ 6 ಹಾಗೂ ಜುಲೈ 2 ರಂದು ಆಂಶಿಕ ಸೂರ್ಯಗ್ರಹಣ ಗೋಚರಿಸಿತ್ತು. ಆದರೆ, ಇದು ಈ ವರ್ಷದ ಖಗ್ರಾಸ್ ಸೂರ್ಯಗ್ರಹಣವಾಗಿದೆ. ಭಾರತದಲ್ಲಿ ಸೂರ್ಯೋದಯದ ಬಳಿಕ ಆರಂಭಗೊಳ್ಳಲಿರುವ ಈ ವಲಯಾಕಾರ ಸೂರ್ಯಗ್ರಹಣ ದೇಶದ ದಕ್ಷಿಣದ ರಾಜ್ಯಗಳಾಗಿರುವ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಗೋಚರಿಸಲಿದೆ. ಇನ್ನೊಂದೆಡೆ ದೇಶದ ಇತರೆ ಭಾಗಗಳಲ್ಲಿ ಆಂಶಿಕ ಸೂರ್ಯಗ್ರಹಣ ಗೋಚರಿಸಲಿದೆ.
ಸೂರ್ಯಗ್ರಹಣದ ಅವಧಿ
ಭಾರತೀಯ ಕಾಲಮಾನದ ಪ್ರಕಾರ, ಆಂಶಿಕ ಸೂರ್ಯ ಗ್ರಹಣ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಸಂಪೂರ್ಣ ಸೂರ್ಯಗ್ರಹಣ ಬೆಳಗ್ಗೆ 9.06ಕ್ಕೆ ಆರಂಭವಾಗಲಿದೆ. ಸೂರ್ಯಗ್ರಹಣ ಮಧ್ಯಾಹ್ನ 12:29ಕ್ಕೆ ಈ ಸಂಪೂರ್ಣ ವಲಯಾಕಾರ ಸೂರ್ಯಗ್ರಹಣದ ಅವಧಿ ಮುಕ್ತಾಯಗೊಳ್ಳಲಿದೆ. ಈ ಗ್ರಹಣದ ಆಂಶಿಕ ಅವಸ್ಥೆ ಮಧ್ಯಾಹ್ನ 1:36ಕ್ಕೆ ಮುಕ್ತಾಯಗೊಳ್ಳಲಿದೆ.
ಭಾರತದಲ್ಲಿ ಯಾವ ಯಾವ ನಗರಗಳಲ್ಲಿ ಈ ಗ್ರಹಣವನ್ನು ನೋಡಬಹುದು
ಈ ಗ್ರಹಣದ ವಲಯಾಕಾರದ ಸಂಕೀರ್ಣ ಅವಸ್ಥೆ ದೇಶದ ದಕ್ಷಿಣದ ನಗರಗಳಾದ ಕನ್ನಾನೂರ್, ಕೊಯಮತ್ತೂರು, ಕೋಝೀಕೋಡ್, ಮಧುರೈ, ಮಗಳೂರು, ಊಟಿ, ತಿರುಚಿನಾಪಳ್ಳಿಗಳನ್ನು ಹಾಯ್ದುಹೋಗಲಿದೆ. ಭಾರತದಲ್ಲಿನ ಈ ವಲಯಾಕಾರ ಸೂರ್ಯಗ್ರಹಣದ ವೇಳೆ ಸೂರ್ಯನ ಶೇ.93ರಷ್ಟು ಭಾಗ ಚಂದ್ರನಿಂದ ಮುಚ್ಚಿಹೋಗಲಿದೆ.
ಸೂರ್ಯ ಗ್ರಹಣದ ವೇಳೆ ಏನು ಮಾಡಬೇಕು ಮತ್ತು ಏನು ಮಾಡಬಾರದು
- ಗ್ರಹಣದ ಕಾಲಾವಧಿಯಲ್ಲಿ ಆಹಾರ ಸೇವನೆ, ಗದ್ದಲ ಅಥವಾ ಯಾವುದೇ ಶುಭ ಕಾರ್ಯಗಳು, ಪೂಜಾಪಾಠ ಇತ್ಯಾದಿ ಮಾಡಬಾರದು.
- ಗ್ರಹಣದ ಕಾಲಾವಧಿಯಲ್ಲಿ ನೀವು ಗುರು ಮಂತ್ರ ಜಪಿಸಬಹುದಾಗಿದೆ, ಯಾವುದೇ ಮಂತ್ರದ ಸಿದ್ದಿ, ರಾಮಾಯಣ, ಸುಂದರಕಾಂಡ ಪಠಣ, ತಂತ್ರ ಸಿದ್ಧಿ ಇತ್ಯಾದಿಗಳನ್ನು ಮಾಡಬಹುದಾಗಿದೆ.
- ಗ್ರಹಣದ ಸೂತಕ ಅವಧಿ ಆರಂಭವಾಗುತ್ತಲೇ ಗರ್ಭವತಿ ಮಹಿಳೆಯರು ಮನೆಯಿಂದ ಹೊರಗೆ ಬೀಳಬಾರದು. ಗ್ರಹಣದ ಕಾಲಾವಧಿಯಲ್ಲಿ ಸೂರ್ಯನಿಂದ ನೆರಲಾತೀತ ಕಿರಣಗಳು ಪಸರಿಸುತ್ತವೆ. ಇವು ಗರ್ಭದಲ್ಲಿರುವ ಮಗುವಿಗೆ ಹಾನಿಯುಂಟು ಮಾಡುತ್ತವೆ.
- ಗ್ರಹಣದ ಕಾಲಾವಧಿ ಮುಗಿಯುತ್ತಿದ್ದಂತೆ ಪವ್ರಿತ್ರ ನದಿಯಲ್ಲಿ ಮಿಂದೆದ್ದು, ಶರೀರದ ಶುದ್ಧೀಕರಣ ಮಾಡಿಕೊಳ್ಳಬೇಕು.
- ಸೂತಕ ಕಾಲಾವಧಿಯ ಆರಂಭಕ್ಕೂ ಮುನ್ನವೇ ಮನೆಯಲ್ಲಿರುವ ಆಹಾರ ಪದಾರ್ಥಗಳಲ್ಲಿ ತುಳಸಿ ಎಲೆಗಳನ್ನು ಹಾಕಿಡಬೇಕು.
- ಒಂದು ವೇಳೆ ನಿಮ್ಮ ಮನೆಯಲ್ಲಿ ದೇವಸ್ಥಾನವಿದ್ದರೆ ಸೂತಕದ ಅವಧಿ ಆರಂಭಕ್ಕೂ ಮುನ್ನವೆ ದೇವಸ್ಥಾನದ ಕಪಾಟ ಮುಚ್ಚಬೇಕು.
- ಗ್ರಹಣದ ಕಾಲಾವಧಿಯ ಬಳಿಕ ಮನಸ್ಸಿನ ಶುದ್ಧೀಕರಣಕ್ಕಾಗಿ ದಾನ-ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದೂ ಹೇಳಲಾಗುತ್ತದೆ.
ವರ್ಷ 2020ರ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ
ಮುಂದಿನ ಸೂರ್ಯಗ್ರಹಣ ಭಾರತದಲ್ಲಿ 21 ಜೂನ್, 2020ಕ್ಕೆ ಗೋಚರಿಸಲಿದೆ. ಇದೂ ಕೂಡ ಖಗ್ರಾಸ್ ಸೂರ್ಯಗ್ರಹಣ ವಾಗಿದ್ದು. ಈ ವಲಯಾಕಾರದ ಸಂಕೀರ್ಣ ಪಥ ಉತ್ತರ ಭಾರತದ ಮೂಲಕ ಹಾಯ್ದುಹೋಗಲಿದೆ. ದೇಶದ ಇತರೆ ಭಾಗಗಳಲ್ಲಿ ಇದು ಆಂಶಿಕ ಸೂರ್ಯಗ್ರಹಣದ ರೂಪದಲ್ಲಿ ಗೋಚರಿಸಲಿದೆ.