ಮೇಕೆದಾಟು ಯೋಜನೆ: ಕರ್ನಾಟಕದೊಂದಿಗೆ ಮಾತುಕತೆ ನಿರಾಕರಿಸಿದ ತಮಿಳುನಾಡು

ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕದೊಂದಿಗೆ ಯಾವುದೇ ಮಾತುಕತೆ ಇಲ್ಲವೆಂದು ತಮಿಳುನಾಡು ಕಾನೂನು ಸಚಿವ ಸಿವಿ ಷಣ್ಮುಗಂ ತಿಳಿಸಿದ್ದಾರೆ.

Last Updated : Dec 10, 2018, 07:46 PM IST
ಮೇಕೆದಾಟು ಯೋಜನೆ: ಕರ್ನಾಟಕದೊಂದಿಗೆ ಮಾತುಕತೆ ನಿರಾಕರಿಸಿದ ತಮಿಳುನಾಡು title=

ನವದೆಹಲಿ: ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕದೊಂದಿಗೆ ಯಾವುದೇ ಮಾತುಕತೆ ಇಲ್ಲವೆಂದು ತಮಿಳುನಾಡು ಕಾನೂನು ಸಚಿವ ಸಿವಿ ಷಣ್ಮುಗಂ ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಈ ಯೋಜನೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ಎಡಪಾಡಿ ಕೆ ಪಳನಿಸ್ವಾಮಿಯೊಂದಿಗೆ ಚರ್ಚಿಸಲು ಕೋರಿ ಪತ್ರ ಬರೆದಿದ್ದರು.ಈಗ ಅದಕ್ಕೆ ಪತ್ರದ ಮೂಲಕ ಪ್ರತಿಕ್ರಿಯಿಸಿರುವ ಷಣ್ಮುಗಂ "ಮೇಕೆದಾಟು ಯೋಜನೆಯ ಕುರಿತಾಗಿ ಚರ್ಚಿಸಲು ಕೇಳಿರುವ ಕರ್ನಾಟಕದ ಸರ್ಕಾರದ ಕೋರಿಕೆ...ತಮಿಳುನಾಡು 30.11.2018 ರಂದು ಸಲ್ಲಿಸಿದ ಅರ್ಜಿಯಲ್ಲಿ ಬಾಕಿ ಉಳಿದಿರುವ ವಿಚಾರಣೆಯನ್ನು ತಡೆಯೊಡ್ಡುವ ಪ್ರಯತ್ನ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಈ ನಡೆಯು ಅಂತರರಾಜ್ಯ ನದಿ ನೀರಿನ ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಅಂತಿಮ ತೀರ್ಪಿನ ಉಲ್ಲಂಘನೆಯಾಗಿದೆ.ಆದ್ದರಿಂದ ಕರ್ನಾಟಕವು ತಮಿಳುನಾಡಿನ ಒಪ್ಪಿಗೆ ಇಲ್ಲದೆ ಅಂತಹ ಯಾವುದೇ ಯೋಜನೆಯನ್ನು  ಕಾವೇರಿ ಪ್ರದೇಶದಲ್ಲಿ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದ್ದಾರೆ. 

ಇತ್ತಿಚೆಗಷ್ಟೇ ತಮಿಳುನಾಡು ವಿಧಾನಸಭೆಯು ಕೇಂದ್ರ ಸರ್ಕಾರವು ಮೇಕೆದಾಟು ಯೋಜನೆ ವಿಚಾರವಾಗಿ ನೀಡಿರುವ ಅನುಮತಿಯನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ನಿರ್ಣಯವನ್ನು ಪಾಸ್ ಮಾಡಿತ್ತು. ಕಾವೇರಿ ನದಿ ವ್ಯಾಪ್ತಿಯಲ್ಲಿ ಇನ್ನೊಂದು ಅಣೆಕಟ್ಟನ್ನು ನಿರ್ಮಾಣ ಮಾಡುವುದರಿಂದ ಅದು ತಮಿಳುನಾಡಿನ ನೀರಿನ ಹರಿವಿನ ಪ್ರಮಾಣದ ಮೇಲೆ ಪರಿಣಾಮ ಬೀರಲಿದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ

Trending News