ಈ ಭಾಗಕ್ಕೆ ಅಪ್ಪಳಿಸಲಿದೆ ತೇಜ್ ಚಂಡಮಾರುತ! ಗುಡುಗು-ಮಿಂಚಿನ ಆರ್ಭಟದ ಜೊತೆ ಜಲಪ್ರಳಯದ ಮುನ್ನೆಚ್ಚರಿಕೆ

Tej Cyclone Effect On India: ಹವಾಮಾನ ಇಲಾಖೆಯ ಪ್ರಕಾರ, 'ತೇಜ್' ಅಕ್ಟೋಬರ್ 25 ರ ಬೆಳಿಗ್ಗೆ ಸುಮಾರು ಯೆಮೆನ್‌’ನ ಅಲ್ ಗೈದಾ ಮತ್ತು ಓಮನ್‌’ನ ಸಲಾಲಾ ಕರಾವಳಿಯನ್ನು ದಾಟಿದೆ.

Written by - Bhavishya Shetty | Last Updated : Oct 22, 2023, 03:39 PM IST
    • ಆಗ್ನೇಯ ಮತ್ತು ನೈಋತ್ಯ ಅರೇಬಿಯನ್ ಸಮುದ್ರದ ಮೇಲೆ ವಾಯುಭಾರ ಕುಸಿತ
    • ಮಧ್ಯಾಹ್ನದ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ
    • ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ ಎರಡನೇ ಚಂಡಮಾರುತವಿದು
ಈ ಭಾಗಕ್ಕೆ ಅಪ್ಪಳಿಸಲಿದೆ ತೇಜ್ ಚಂಡಮಾರುತ! ಗುಡುಗು-ಮಿಂಚಿನ ಆರ್ಭಟದ ಜೊತೆ ಜಲಪ್ರಳಯದ ಮುನ್ನೆಚ್ಚರಿಕೆ  title=
Karnataka Rain

Tej Cyclone Effect On India: ಅರೇಬಿಯನ್ ಸಮುದ್ರದ ನೈಋತ್ಯದಲ್ಲಿ ಹರಿಯುತ್ತಿರುವ 'ತೇಜ್' ಚಂಡಮಾರುತವು ಇಂದು ಅಂದರೆ ಭಾನುವಾರ ಮಧ್ಯಾಹ್ನದ ವೇಳೆಗೆ ಅತ್ಯಂತ ತೀವ್ರವಾದ ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ (ಐಎಂಡಿ) ಇಲಾಖೆ ಹೇಳಿದೆ.

ಇದನ್ನೂ ಓದಿ: “ನನಗೆ ನಾಚಿಕೆಯಾಗುತ್ತಿದೆ...!” ಪಾಕಿಸ್ತಾನ ತಂಡದ ಕಳಪೆ ಆಟದ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದೇನು?

ಹವಾಮಾನ ಇಲಾಖೆಯ ಪ್ರಕಾರ, 'ತೇಜ್' ಅಕ್ಟೋಬರ್ 25 ರ ಬೆಳಿಗ್ಗೆ ಸುಮಾರು ಯೆಮೆನ್‌’ನ ಅಲ್ ಗೈದಾ ಮತ್ತು ಓಮನ್‌’ನ ಸಲಾಲಾ ಕರಾವಳಿಯನ್ನು ದಾಟಿದೆ. ಆಗ್ನೇಯ ಮತ್ತು ನೈಋತ್ಯ ಅರೇಬಿಯನ್ ಸಮುದ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದ್ದು, ಅಕ್ಟೋಬರ್ 22 ರ ಮಧ್ಯಾಹ್ನದ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಈ ವರ್ಷ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದ ಎರಡನೇ ಚಂಡಮಾರುತವಿದು. ಹಿಂದೂ ಮಹಾಸಾಗರದಲ್ಲಿ ಚಂಡಮಾರುತಗಳನ್ನು ಹೆಸರಿಸುವ ಸೂತ್ರದ ಪ್ರಕಾರ, ಈ ಬಾರಿ ಚಂಡಮಾರುತಕ್ಕೆ 'ತೇಜ್' ಎಂದು ಹೆಸರಿಸಲಾಗಿದೆ.

ಜೂನ್‌ನಲ್ಲಿ ಅರೇಬಿಯನ್ ಸಮುದ್ರದಲ್ಲಿ ಸಂಭವಿಸಿದ್ದ ‘ಬಿಪ್ಪರ್‌ಜಾಯ್’ ಚಂಡಮಾರುತ. ಆರಂಭದಲ್ಲಿ, ವಾಯುವ್ಯ ದಿಕ್ಕಿನಲ್ಲಿ ಚಲಿಸಿತ್ತು, ಆದರೆ ಆ ಬಳಿಕ ಅದು ಗುಜರಾತ್‌’ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ಮೂಲಕ ಹಾದುಹೋಯಿತು. ಸದ್ಯ ತೇಜ್’ನಿಂದ ಯಾವುದೇ ಅಪಾಯವಿಲ್ಲ ಎಂದು ಗುಜರಾತ್ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಹೇಳಿದ್ದಾರೆ.

ಆದರೆ ಜೂನ್‌’ನಲ್ಲಿ ಅರಬ್ಬಿ ಸಮುದ್ರದಲ್ಲಿ ಉಂಟಾದ ಬಿಪರ್‌ಜಾಯ್ ಚಂಡಮಾರುತವು ಗುಜರಾತ್‌’ನ ಕಚ್ ಮತ್ತು ಸೌರಾಷ್ಟ್ರದ ಹಲವು ಪ್ರದೇಶಗಳಲ್ಲಿ ತೀವ್ರ ಹಾನಿಯನ್ನುಂಟು ಮಾಡಿತ್ತು.

ಇದನ್ನೂ ಓದಿ: ಅನುಷ್ಕಾ ಶರ್ಮಾನ ಮದುವೆ ಆಗ್ಬೇಕು ಅಂದುಕೊಂಡಿದ್ದೆ ಆದ್ರೆ, ಕೊಹ್ಲಿ..! ನಟ ರಣಬೀರ್‌ ಹೀಗಂದಿದ್ಯಾಕೆ

ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?

ಸ್ಕೈಮೆಟ್ ಹವಾಮಾನದ ಪ್ರಕಾರ, ಚಂಡಮಾರುತವು ಯೆಮೆನ್-ಓಮನ್ ಕರಾವಳಿಯತ್ತ ಚಲಿಸುತ್ತಿದೆ. ಆದರೆ, ಭಾರತದ ರಾಜ್ಯಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಏಕೆಂದರೆ ಚಂಡಮಾರುತವು ಪಶ್ಚಿಮ-ಉತ್ತರ ಮತ್ತು ಪಶ್ಚಿಮಕ್ಕೆ ವೇಗವಾಗಿ ಚಲಿಸುತ್ತದೆ. ಅಂದಹಾಗೆ ಯೆಮೆನ್-ಓಮನ್ ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಂಭವವಿದ್ದು, ಜಲಪ್ರಳಯದ ಸೂಚನೆ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News