ಪೊಲೀಸರ ಮೇಲೆ ಹಲ್ಲೆ ನಡೆಸಿದ ಟೆಂಪೋ ಡ್ರೈವರ್ VIDEO ವೈರಲ್

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಂಜೆ ಗ್ರಾಮೀಣ ಸೇವಾ ಟೆಂಪೋ ಮತ್ತು ಪೊಲೀಸ್ ವಾಹನ ನಡುವೆ ಡಿಕ್ಕಿ ಸಂಭವಿಸಿದೆ. ಇದರ ನಂತರ ಇಬ್ಬರ ನಡುವೆ ಚರ್ಚೆ ನಡೆದಿದ್ದು, ನಂತರ ಟೆಂಪೋ ಚಾಲಕ ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಿದ್ದಾನೆ.

Last Updated : Jun 17, 2019, 10:08 AM IST
ಪೊಲೀಸರ ಮೇಲೆ ಹಲ್ಲೆ ನಡೆಸಿದ ಟೆಂಪೋ ಡ್ರೈವರ್ VIDEO ವೈರಲ್ title=
Pic Courtesy: Facebook@Vijay Patel

ನವದೆಹಲಿ: ವಾಯುವ್ಯ ದೆಹಲಿಯಲ್ಲಿ ಟೆಂಪೋ ಚಾಲಕನೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ಸಂಹವಿಸಿದೆ. ಪೊಲೀಸ್ ವಾಹನ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಬಳಿಕ ಈ ಹಲ್ಲೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಪೋ ಮತ್ತು ಪೊಲೀಸ್ ವಾಹನ ನಡುವೆ ಡಿಕ್ಕಿ:
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಸಂಜೆ ಗ್ರಾಮೀಣ ಸೇವಾ ಟೆಂಪೋ ಮತ್ತು ಪೊಲೀಸ್ ವಾಹನ ನಡುವೆ ಡಿಕ್ಕಿ ಸಂಭವಿಸಿದೆ. ಇದರ ನಂತರ ಇಬ್ಬರ ನಡುವೆ ಚರ್ಚೆ ನಡೆದಿದ್ದು, ನಂತರ ಟೆಂಪೋ ಚಾಲಕ ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

VIDEO ನೋಡಿ...

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟೆಂಪೋ ಡ್ರೈವರ್ ಪೊಲೀಸರಿಗೆ ಹೊಡೆಯುವ ಈ ವಿಡಿಯೋ ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 

Trending News