ಬಿಜೆಪಿಗೆ 915 ಕೋಟಿ ರೂ ಕಾರ್ಪೊರೇಟ್ ದೇಣಿಗೆ, ಕಾಂಗ್ರೆಸ್ ಗೆ 55.36 ಕೋಟಿ -ಎಡಿಆರ್ ವರದಿ

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ, ಬಿಜೆಪಿ 2016-17 ರಿಂದ 2017-18ರ ನಡುವೆ ಕಾರ್ಪೊರೇಟ್ ದೇಣಿಗೆಯಾಗಿ 915.596 ಕೋಟಿ ರೂ ಸ್ವೀಕರಿಸಿದರೆ. ಮತ್ತೊಂದೆಡೆ, ಕಾಂಗ್ರೆಸ್ ಇದೇ ಅವಧಿಯಲ್ಲಿ ಕೇವಲ 55.36 ಕೋಟಿ ರೂ.ದೇಣಿಗೆಯಾಗಿ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.

Last Updated : Jul 9, 2019, 05:37 PM IST
ಬಿಜೆಪಿಗೆ 915 ಕೋಟಿ ರೂ ಕಾರ್ಪೊರೇಟ್ ದೇಣಿಗೆ, ಕಾಂಗ್ರೆಸ್ ಗೆ 55.36 ಕೋಟಿ -ಎಡಿಆರ್ ವರದಿ   title=
ಸಾಂದರ್ಭಿಕ ಚಿತ್ರ

ನವದೆಹಲಿ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ, ಬಿಜೆಪಿ 2016-17 ರಿಂದ 2017-18ರ ನಡುವೆ ಕಾರ್ಪೊರೇಟ್ ದೇಣಿಗೆಯಾಗಿ 915.596 ಕೋಟಿ ರೂ ಸ್ವೀಕರಿಸಿದರೆ. ಮತ್ತೊಂದೆಡೆ, ಕಾಂಗ್ರೆಸ್ ಇದೇ ಅವಧಿಯಲ್ಲಿ ಕೇವಲ 55.36 ಕೋಟಿ ರೂ.ದೇಣಿಗೆಯಾಗಿ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.

ಚುನಾವಣಾ ಆಯೋಗದ ಅಂಕಿ ಅಂಶಗಳ ಆಧಾರದ ಮೇಲೆ ವರದಿಯು 20,000 ರೂ ಮತ್ತು ಅದಕ್ಕಿಂತ ಹೆಚ್ಚಿನ ರೂ. 2016-17 ಮತ್ತು 2017-18ರ ಹಣಕಾಸು ವರ್ಷದಲ್ಲಿ ದಾನಿಗಳಿಂದ ಪಡೆದ ದೇಣಿಗೆ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ. ಇದರಲ್ಲಿ ಆರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ (ಐಎನ್‌ಸಿ), ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಸೇರಿವೆ ಎನ್ನಲಾಗಿದೆ. ಇನ್ನೊಂದೆಡೆ ಬಿಎಸ್ಪಿ ಯಾವುದೇ ದಾನಿಗಳಿಂದ 20,000 ರೂ.ಗಿಂತ ಹೆಚ್ಚಿನ ದೇಣಿಗೆ ಪಡೆದಿಲ್ಲ ಎಂದು ಹೇಳಿದೆ. ಆದ್ದರಿಂದ ಅದನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎನ್ನಲಾಗಿದೆ.

ಈ ವರದಿ ಪ್ರಕಾರ 1731 ಕಾರ್ಪೊರೇಟ್ ದಾನಿಗಳಿಂದ ಬಿಜೆಪಿ ಗರಿಷ್ಠ 915.596 ಕೋಟಿ ರೂ.ದೇಣಿಗೆ ಪಡೆದಿದೆ, ಇದು ಒಟ್ಟು ದೇಣಿಗೆಗಳಲ್ಲಿ ಶೇಕಡಾ 94 ರಷ್ಟಿದೆ. ಅದರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ 151 ಕಾರ್ಪೊರೇಟ್ ಸಂಸ್ಥೆಗಳಿಂದ 55.36 ಕೋಟಿ ರೂ. ಎನ್‌ಸಿಪಿಗೆ ರೂ. 7.73 ಕೋಟಿ, ಸಿಪಿಎಂ 4.42 ಕೋಟಿ ರೂ., ಮತ್ತು ತೃಣಮೂಲ 2.03 ಕೋಟಿ ರೂ.ಗಳನ್ನು ಪಡೆದಿದೆ. ಸಿಪಿಐ ಕಾರ್ಪೊರೇಟ್ ದೇಣಿಗೆಗಳಲ್ಲಿ ಶೇಕಡಾ 2 ರಷ್ಟು ಕಡಿಮೆ ಪಾಲನ್ನು ಹೊಂದಿದೆ ಎನ್ನಲಾಗಿದೆ. 

ಕಾರ್ಪೊರೇಟ್ ದೇಣಿಗೆ ನೀಡಿದ ಒಟ್ಟು 985.18 ಕೋಟಿ ರೂ.ಗಳಲ್ಲಿ 22.59 ಕೋಟಿ ರೂ.ಗಳನ್ನು ವಿಂಗಡಿಸದ ವರ್ಗದಿಂದ ಪಡೆಯಲಾಗಿದೆ, ಇದರಲ್ಲಿ ಆನ್‌ಲೈನ್‌ನಲ್ಲಿ ಯಾವುದೇ ವಿವರಗಳಿಲ್ಲದ ಕಂಪನಿಗಳು ಅಥವಾ ಅವರ ಕೆಲಸದ ಸ್ವರೂಪದ ಬಗ್ಗೆ ಸ್ಪಷ್ಟತೆ ಇಲ್ಲದ ಕಂಪನಿಗಳು ಸೇರಿವೆ ಎನ್ನಲಾಗಿದೆ

2013 ರ ಸುಪ್ರೀಂಕೋರ್ಟ್ ತೀರ್ಪಿನ ನಂತರ, 20,000 ರೂ.ಗಿಂತ ಹೆಚ್ಚಿನ ದೇಣಿಗೆ ಪಡೆಯುವ ಯಾವುದೇ ಪಕ್ಷವು ದಾನಿಗಳ ವಿವರಗಳನ್ನು ಒದಗಿಸಬೇಕಾಗುತ್ತದೆ. ಈ ವರ್ಷದ ಏಪ್ರಿಲ್‌ನಲ್ಲಿ, ಸುಪ್ರೀಂಕೋರ್ಟ್, ಎಡಿಆರ್ ಸಲ್ಲಿಸಿದ ಮನವಿಯ ಮೇರೆಗೆ, ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ರಶೀದಿಗಳ ಜೊತೆಗೆ ದಾನಿಗಳ ಗುರುತು ಮತ್ತು ಬ್ಯಾಂಕ್ ಖಾತೆ ವಿವರಗಳು ಮತ್ತು ಮೊಹರು ಮಾಡಿದ ಕವರ್‌ನಲ್ಲಿ ಪಡೆದ ಮೊತ್ತವನ್ನು ಮೇ ವೇಳೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಕೇಳಿಕೊಂಡಿತ್ತು. 

 

Trending News