ನವದೆಹಲಿ: COVID-19 ಸಾಂಕ್ರಾಮಿಕದ ಮಧ್ಯೆ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಾಗಿ ನಿರ್ಮಾಣ ಕಾರ್ಯಗಳನ್ನು ಮುಂದುವರೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ.ದೇಶಕ್ಕೆ ಶ್ವಾಸ ಬೇಕಾಗಿರುವುದು ಹೊರತು ಪ್ರಧಾನ ಮಂತ್ರಿಯ ನಿವಾಸವಲ್ಲ ಎಂದು ಹೇಳಿದರು.
ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸ ತ್ರಿಕೋನ ಸಂಸತ್ತಿನ ಕಟ್ಟಡ, ಸಾಮಾನ್ಯ ಕೇಂದ್ರ ಸಚಿವಾಲಯ, ಉಪರಾಷ್ಟ್ರಪತಿ ನಿವಾಸ,ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ಗೆ ಮೂರು ಕಿ.ಮೀ ಉದ್ದದ ರಾಜ್‌ಪಾತ್ ಅನ್ನು ನವೀಕರಿಸುವುದು ಇದರಲ್ಲಿ ಸೇರಿವೆ.
ಇದನ್ನೂ ಓದಿ: ಆಮ್ಲಜನಕ ಹಂಚಿಕೆಗೆ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ
ಇದೆ ವೇಳೆ ಕೇಂದ್ರ ಸರ್ಕಾರದ ಈ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ "ದೇಶಕ್ಕೆ ಶ್ವಾಸ ಬೇಕು, ಪ್ರಧಾನ ಮಂತ್ರಿಯ ನಿವಾಸವಲ್ಲ" ಎಂದು ಟ್ವೀಟ್ ಮಾಡಿದ್ದಾರೆ.ಜನರ ಜೀವನವನ್ನು ಉಳಿಸಲು COVID-19 ಸಾಂಕ್ರಾಮಿಕದ ಮಧ್ಯೆ ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷವು ಸೆಂಟ್ರಲ್ ವಿಸ್ಟಾ ಯೋಜನೆ ಕೈಬಿಟ್ಟು ಮತ್ತು ದೇಶದ ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ಆದ್ಯತೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣ ಕಾರ್ಯದ ಪ್ರಕಾರ “ಅಗತ್ಯ ಸೇವೆಗಳು” ಎಂಬ ಟ್ಯಾಗ್ ಅನ್ನು ವಿರೋಧ ಪಕ್ಷವು ಟೀಕಿಸಿದೆ.ಮತ್ತೊಂದು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ "ನಗರಗಳ ನಂತರ, ಈಗ ಹಳ್ಳಿಗಳು ಸಹ ದೇವರ ಮೇಲೆ ಅವಲಂಬಿತವಾಗಿವೆ" ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆಮ್ಲಜನಕ ಸರಬರಾಜಿಗೆ ಕರ್ನಾಟಕ ಅಡ್ಡಿಯಾಗಿದೆ ಎಂದ ಮಹಾರಾಷ್ಟ್ರ ಸಚಿವ ..!
ಭಾನುವಾರ, ಭಾರತವು 4,03,738 ಕೊರೊನಾ ಪ್ರಕರಣಗಳನ್ನು ದಾಖಲಿಸಿದ್ದು, ಇದು 2,22,96,414 ಕ್ಕೆ ತಲುಪಿದೆ ಮತ್ತು 4,092 ಸಾವುನೋವುಗಳು ಸಂಭವಿಸುವ ಮೂಲಕ ಒಟ್ಟು ಸಂಖ್ಯೆ 2,42,362 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.