ವಲಸೆ ಕಾರ್ಮಿಕರ ಕರುಣಾಜನಕ ಸ್ಥಿತಿ ನೋಡಿ ಕಣ್ಣೀರನ್ನು ತಡೆಯಲಾಗುತ್ತಿಲ್ಲ-ಮದ್ರಾಸ್ ಹೈಕೋರ್ಟ್

"ವಲಸೆ ಕಾರ್ಮಿಕರ ಕರುಣಾಜನಕ ಸ್ಥಿತಿ...ಇದು ಮನುಷ್ಯನ ದುರಂತವಲ್ಲದೆ ಮತ್ತೇನಲ್ಲ' ಎಂದು ಮದ್ರಾಸ್ ಹೈಕೋರ್ಟ್ ಮಾನವೀಯ ಬಿಕ್ಕಟ್ಟಿನ ಸ್ಥಿತಿಯನ್ನು ಕಠಿಣ ಪದಗಳಲ್ಲಿ ಬಣ್ಣಿಸಿದೆ.

Last Updated : May 16, 2020, 04:04 PM IST
ವಲಸೆ ಕಾರ್ಮಿಕರ ಕರುಣಾಜನಕ ಸ್ಥಿತಿ ನೋಡಿ ಕಣ್ಣೀರನ್ನು ತಡೆಯಲಾಗುತ್ತಿಲ್ಲ-ಮದ್ರಾಸ್ ಹೈಕೋರ್ಟ್  title=
file photo

ನವದೆಹಲಿ: "ವಲಸೆ ಕಾರ್ಮಿಕರ ಕರುಣಾಜನಕ ಸ್ಥಿತಿ...ಇದು ಮನುಷ್ಯನ ದುರಂತವಲ್ಲದೆ ಮತ್ತೇನಲ್ಲ' ಎಂದು ಮದ್ರಾಸ್ ಹೈಕೋರ್ಟ್ ಮಾನವೀಯ ಬಿಕ್ಕಟ್ಟಿನ ಸ್ಥಿತಿಯನ್ನು ಕಠಿಣ ಪದಗಳಲ್ಲಿ ಬಣ್ಣಿಸಿದೆ.

ವಲಸಿಗರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಕ್ಕಾಗಿ ಕೇಂದ್ರ ಮತ್ತು ತಮಿಳುನಾಡು ಸರ್ಕಾರ ಎರಡನ್ನೂ ಎಳೆದ ನ್ಯಾಯಾಲಯವು ಪರಿಸ್ಥಿತಿಯನ್ನು ಪರಿಹರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು. ವಲಸೆ ಬಿಕ್ಕಟ್ಟನ್ನು ರಾಜ್ಯವಾರು ಡೇಟಾ ಆಧಾರದ ಮೇಲೆ ನೋಡಬೇಕೆಂದು ಒತ್ತಾಯಿಸಿತು.

'ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ಸ್ಥಳಗಳನ್ನು ತಲುಪಲು ಒಟ್ಟಿಗೆ ದಿನಗಟ್ಟಲೆ ನಡೆದುಕೊಂಡು ಹೋಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಅವರಲ್ಲಿ ಕೆಲವರು ಅಪಘಾತಗಳಿಂದ ಪ್ರಾಣ ಕಳೆದುಕೊಂಡಿದ್ದರು. ಎಲ್ಲಾ ರಾಜ್ಯಗಳು ತಮ್ಮ ವಲಸೆ ಕಾರ್ಮಿಕರಿಗೆ ತಮ್ಮ ಮಾನವ ಸೇವೆಗಳನ್ನು ವಿಸ್ತರಿಸಬೇಕಾಗಿತ್ತು" ಎಂದು ನ್ಯಾಯಮೂರ್ತಿಗಳು ಎನ್ ಕಿರುಬಕರನ್ ಮತ್ತು ಆರ್ ಹೇಮಲತಾ ಹೇಳಿದರು.

'ಕಳೆದ ತಿಂಗಳು ಮಾಧ್ಯಮಗಳಲ್ಲಿ ತೋರಿಸಿದ ವಲಸೆ ಕಾರ್ಮಿಕರ ಕರುಣಾಜನಕ ಸ್ಥಿತಿಯನ್ನು ನೋಡಿದ ನಂತರ ಕಣ್ಣೀರನ್ನು ನಿಯಂತ್ರಿಸಲಾಗುತ್ತಿಲ್ಲ. ಇದು ಮಾನವ ದುರಂತವಲ್ಲದೆ ಮತ್ತೇನಲ್ಲ" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.ಇದೇ ವೇಳೆ ಔರಂಗಾಬಾದ್ ನಲ್ಲಿ ವಲಸೆ ಕಾರ್ಮಿಕರ ಮೇಲೆ ಹರಿದು ಹೋದ ರೈಲಿನ ಘಟನೆ ಕುರಿತಾಗಿಯೂ ಕೋರ್ಟ್ ಉಲ್ಲೇಖಿಸಿದೆ.

ನ್ಯಾಯಾಲಯದ ಟೀಕೆಯ ನಂತರ, ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಲಸಿಗರಿಗೆ ಶಿಬಿರಗಳಲ್ಲಿ ಇರಿ ಮತ್ತು ಸರ್ಕಾರವು ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು. "ನಿಮ್ಮನ್ನು ರೈಲುಗಳ ಮೂಲಕ ವಾಪಸ್ ಕಳುಹಿಸಲು ನಾವು ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಅಲ್ಲಿಯವರೆಗೆ ಶಿಬಿರಗಳಲ್ಲಿ ಇರಿ' ಎಂದು ಅವರು ಹೇಳಿದರು.

Trending News