Viral News: ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಆತ್ಮಹತ್ಯೆಗೆ ಶರಣು!

Today Viral News: ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪ್ರಶಾಂತ್ ಗೆ ಚಿಕಿತ್ಸೆ ನೀಡಿದ ವೈದ್ಯರು ಹಾರ್ಮೋನ್ ಅಸಮತೋಲನದಿಂದ ಕೂದಲು ಉದುರುತ್ತಿದೆ ಎಂದು ಹೇಳಿದ್ದಾರೆ. ಈತ ತಾಮರಸ್ಸೆರಿಯ ವಾಹನ ಶೋರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಪ್ರಶಾಂತ್ ತನ್ನ ಡೆತ್ ನೋಟ್ ನಲ್ಲಿ, ಕೂದಲು ಉದುರುತ್ತಿರುವುದರಿಂದ ಎಲ್ಲಾ ಮದುವೆ ಪ್ರಸ್ತಾಪಗಳು ಹಿಂದೆ ಸರಿದಿವೆ.

Written by - Bhavishya Shetty | Last Updated : Nov 10, 2022, 10:24 AM IST
    • ಕೂದಲು ಉದುರುತ್ತಿದೆ ಎಂದು ಯುವಕ ಆತ್ಮಹತ್ಯೆ
    • ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಅಥೋಲಿಯಲ್ಲಿ ಘಟನೆ
    • ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
Viral News: ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಆತ್ಮಹತ್ಯೆಗೆ ಶರಣು!  title=
hair loss

Today Viral News: ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಅಥೋಲಿಯಲ್ಲಿ 29 ವರ್ಷದ ಯುವಕನೊಬ್ಬ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದನ್ನು ವಶಪಡಿಸಿಕೊಂಡು ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Viral Video: ಇನ್ನೊಬ್ಬ ಸವಾರನನ್ನು ಒದ್ದು ಉರುಳಿಸಲು ಹೋಗಿ ಬೈಕಿಂದ ಬಿದ್ದ ಯುವತಿ: ಕರ್ಮ ರಿಟರ್ನ್ಸ್ ಅಂದ್ರೆ ಇದೇ

ಪ್ರಕರಣದ ತನಿಖಾಧಿಕಾರಿ ಪಿ.ಕೆ.ಮುರಳಿ ಮಾತನಾಡಿ, ಕೇರಳದ ಅಥೋಲಿ ಮೂಲದ ಪ್ರಶಾಂತ್ 2014ರಿಂದ ಕೋಯಿಕ್ಕೋಡ್‌ನ ಖಾಸಗಿ ಕ್ಲಿನಿಕ್‌ನಲ್ಲಿ ಕೂದಲು ಉದುರುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಕೊಟ್ಟ ಔಷಧಗಳನ್ನು ಸೇವಿಸಿದರೂ ದಿನಕಳೆದಂತೆ ಕೂದಲು ಮತ್ತಷ್ಟು ಉದುರಲು ಪ್ರಾರಂಭಿಸಿತು. ಕೊನೆಯಲ್ಲಿ, ಇದರ ಪರಿಣಾಮ ತಲೆ ಸೇರಿದಂತೆ ಹುಬ್ಬುಗಳ ಮೇಲೆ ಬೀರಿತು. ಇದರಿಂದ ತೀವ್ರ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

ಕೋಝಿಕ್ಕೋಡ್ ಜಿಲ್ಲೆಯಲ್ಲಿ ಪ್ರಶಾಂತ್ ಗೆ ಚಿಕಿತ್ಸೆ ನೀಡಿದ ವೈದ್ಯರು ಹಾರ್ಮೋನ್ ಅಸಮತೋಲನದಿಂದ ಕೂದಲು ಉದುರುತ್ತಿದೆ ಎಂದು ಹೇಳಿದ್ದಾರೆ. ಈತ ತಾಮರಸ್ಸೆರಿಯ ವಾಹನ ಶೋರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಪ್ರಶಾಂತ್ ತನ್ನ ಡೆತ್ ನೋಟ್ ನಲ್ಲಿ, ಕೂದಲು ಉದುರುತ್ತಿರುವುದರಿಂದ ಎಲ್ಲಾ ಮದುವೆ ಪ್ರಸ್ತಾಪಗಳು ಹಿಂದೆ ಸರಿದಿವೆ. ಅಷ್ಟೇ ಅಲ್ಲದೆ ಈ ಸಮಸ್ಯೆಯಿಂದ ಸಮಾರಂಭಗಳಿಗೆ ಹಾಜರಾಗುವುದನ್ನು, ಸ್ನೇಹಿತರನ್ನು ಭೇಟಿಯಾಗುವುದನ್ನು ಸಹ ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ವ್ಯಕ್ತಿಯ ಹೇರ್ ಸ್ಟೈಲ್ ಕಂಡು ತಲೆತಿರುಗಿ ಬಿದ್ದೇ ಬಿಡ್ತು ಕೋತಿ: ವಿಡಿಯೋ ನೋಡಿ

ಪ್ರಶಾಂತ್ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಈಗಾಗಲೇ ಅಥೋಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಶಾಂತ್ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ವೈದ್ಯರ ಹೇಳಿಕೆಯನ್ನೂ ಪಡೆಯಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಯಾವುದೇ ವೈದ್ಯಕೀಯ ನಿರ್ಲಕ್ಷ್ಯವಾಗಿಲ್ಲ. ತನಿಖೆ ಚುರುಕುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News