ಪ್ರಪ್ರಥಮ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ಗೆ ತೆರೆ: ಚಾಂಪಿಯನ್ ಪಟ್ಟ ಅಲಂಕರಿಸಿದ ಅಸಾದ್ ಖಾನ್

ಫೈನಲ್ ರೇಸ್‌ನಲ್ಲಿ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರಾಕೇಶ್ ಎನ್. ಮತ್ತು ಗಿಡ್ಯುನ್ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಮಿಂಚಿದರು.

Written by - Bhavishya Shetty | Last Updated : Nov 9, 2022, 12:18 PM IST
    • ವಿಜೇತರಿಗೆ ಭರ್ಜರಿ ಬಹುಮಾನ: XPULSE 200 4V ಮತ್ತು ರೂ. 10 ಲಕ್ಷ ಮೌಲ್ಯದ ಪ್ರಾಯೋಜಕತ್ವ ಒಪ್ಪಂದ
    • ಅತ್ಯುತ್ತಮ ಮಹಿಳಾ ಆಫ್-ರೋಡ್ ರೈಡರ್ ಆಗಿ ಹೊರಹೊಮ್ಮಿದ ಓಲೆಸ್ಯಾ ಡಯಾಸ್
    • ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್
ಪ್ರಪ್ರಥಮ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ಗೆ ತೆರೆ: ಚಾಂಪಿಯನ್ ಪಟ್ಟ ಅಲಂಕರಿಸಿದ ಅಸಾದ್ ಖಾನ್  title=
Bike Race

ಬೆಂಗಳೂರು: ಮೋಟಾರು ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಹಲವು ಕ್ರೀಡೆಗಳು ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸುವ ತನ್ನ ಬದ್ಧತೆಗೆ ಅನುಗುಣವಾಗಿ ಈಗ ಆಫ್-ರೋಡ್ ರೈಡಿಂಗ್ ಚಾಂಪಿಯನ್‌ಗಳನ್ನು ಘೋಷಿಸಿದೆ. ಭಾರತ ದೇಶದೆಲ್ಲೆಡೆ ನಾಲ್ಕು ತಿಂಗಳಿಗೂ ಹೆಚ್ಚು ಅವಧಿಯ ಕಠಿಣ ಸ್ಪರ್ಧೆಯಲ್ಲಿ ಉತ್ಸಾಹಿ ರೈಡರ್‌ಗಳು ಭಾಗವಹಿಸಿದ್ದರು.

ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC), ಅಂತಿಮ ರೇಸ್‌ನಲ್ಲಿ ಟಾಪ್-20 ಸವಾರರು ಚಾಂಪಿಯನ್ ಆಗಲು ಸೆಣಸುವುದರೊಂದಿಗೆ ಮುಕ್ತಾಯವಾಯಿತು.

ಇದನ್ನೂ ಓದಿ: Viral Video: ವ್ಯಕ್ತಿಯ ಹೇರ್ ಸ್ಟೈಲ್ ಕಂಡು ತಲೆತಿರುಗಿ ಬಿದ್ದೇ ಬಿಡ್ತು ಕೋತಿ: ವಿಡಿಯೋ ನೋಡಿ

ಫೈನಲ್ ರೇಸ್‌ನಲ್ಲಿ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ರಾಕೇಶ್ ಎನ್. ಮತ್ತು ಗಿಡ್ಯುನ್ ಅವರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಮಿಂಚಿದರು.

ವಿಜೇತರು, ಮೊದಲ ಮತ್ತು ಎರಡನೇ ರನ್ನರ್‌ ಅಪ್‌ಗಳು ಜನಪ್ರಿಯ Hero Xpulse 200 4V ಮೋಟಾರ್‌ ಸೈಕಲ್ ಜತೆಗೆ ಕ್ರಮವಾಗಿ ರೂ. 10 ಲಕ್ಷ, ರೂ. 6 ಲಕ್ಷ ಹಾಗೂ ರೂ. 4 ಲಕ್ಷ ಮೌಲ್ಯದ ಪ್ರಾಯೋಜಕತ್ವಗಳ ಒಪ್ಪಂದಗಳನ್ನು ಸ್ವೀಕರಿಸಿದರು.

ಎಲ್ಲ ಸುತ್ತುಗಳಲ್ಲಿ ರೋಚಕ ಪ್ರದರ್ಶನ ನೀಡಿದ ಒಲೆಸ್ಯಾ ಡಯಾಸ್ ಅವರನ್ನು ಅತ್ಯುತ್ತಮ ಮಹಿಳಾ ಆಫ್-ರೋಡ್ ರೈಡರ್ ಎಂದು ಗೌರವಿಸಲಾಯಿತು. HDBC ಯನ್ನು MTV ಪ್ರಸಾರ ಮಾಡಿತು ಹಾಗೂ ವೂಟ್ (Voot) ನಲ್ಲಿ ಅದನ್ನು ಸ್ಟ್ರೀಮ್ ಮಾಡಲಾಯಿತು.

ಜೈಪುರದಲ್ಲಿರುವ ಹೀರೋ ಮೋಟೋಕಾರ್ಪ್‌ನ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಬ್, ನಾವೀನ್ಯ ಮತ್ತು ತಂತ್ರಜ್ಞಾನದ ಕೇಂದ್ರ (CIT)ದ ಪರಿಸರದಲ್ಲಿ ಅಂತಿಮ ವಾರದ ಸ್ಪರ್ಧೆಗಳನ್ನು ನಡೆಸಲಾಯಿತು. ಉನ್ನತ ಅನುಭವಕ್ಕಾಗಿ ಅಂತಾರಾಷ್ಟ್ರೀಯ ಇವೆಂಟ್‌ಗಳಿಗೆ ಸಮಾನವಾಗಿ ಈ ಸ್ಪರ್ಧೆಯನ್ನು ವಿನ್ಯಾಸಗೊಳಿಸಲಾಗಿತ್ತು. ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿ ಅಂತಿಮ ವಾರದ ಪೂರ್ಣ ಸ್ಪರ್ಧೆಯನ್ನು ಸಂಯೋಜಿಸಿತ್ತು.

ದೇಶವ್ಯಾಪಿಯಾಗಿ ನಾಲ್ಕು ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ HDBC ಗಾಗಿ 1,00,000 ಸ್ಪರ್ಧಿಗಳು ನೋಂದಾಯಿಸಿದ್ದರು. 41 ನಗರಗಳಲ್ಲಿ 120ಕ್ಕಿಂತ ಹೆಚ್ಚು ದಿನಗಳಿಗೆ ಈ ಸ್ಪರ್ಧೆಯು ವಿಸ್ತರಿಸಿತ್ತು. ಟಾಪ್-20 ಸ್ಪರ್ಧಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.

HDBC ಕುರಿತು ಪ್ರತಿಕ್ರಿಯಿಸಿದ ಹೀರೋ ಮೋಟೋಕಾರ್ಪ್ ಸಂಸ್ಥೆಯ ಚೀಫ್ ಗ್ರೋಥ್ ಆಫೀಸರ್ ರಂಜಿವ್ಜಿತ್ ಸಿಂಗ್ ಅವರು, “ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್‌ನಲ್ಲಿ ಸ್ಪರ್ಧಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದರು, ದೇಶದಲ್ಲಿ ಆಫ್-ರೋಡ್ ರೈಡಿಂಗ್ ವಿಭಾಗವು ಬೆಳೆಯುತ್ತಿರುವುದಕ್ಕೆ ಇದು ಪುರಾವೆಯಾಗಿದೆ. ಈ ಸಂಸ್ಕೃತಿಯನ್ನು ಪ್ರಚಾರ ಮಾಡುವಲ್ಲಿ ಹೀರೋ ಮೋಟೋಕಾರ್ಪ್ ತನ್ನ Hero Xpulse 200 4V ಮೂಲಕ ಮುಂಚೂಣಿಯಲ್ಲಿದೆ. ಎಕ್ಸ್‌ಪಲ್ಸ್ ರೈಡರ್‌ಗಳು, ವೃತ್ತಿಪರರು, ಹವ್ಯಾಸಿಗಳು ಮತ್ತು ದೈನಂದಿನ ಬಳಕೆದಾರರ ನೆಚ್ಚಿನ ಬೈಕ್ ಆಗಿದೆ. HDBC ದೇಶದ ಉತ್ಸಾಹಿ ರೈಡರ್‌ಗಳಿಗೆ ತಮ್ಮ ಕೌಶಲಗಳನ್ನು ಸಾರಲು ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ ಮತ್ತು ಭಾರತಕ್ಕೆ ಭವಿಷ್ಯದ ಚಾಂಪಿಯನ್‌ಗಳನ್ನು ಒದಗಿಸಿದೆ. ವಿಜೇತರನ್ನು ಅಭಿನಂದಿಸುತ್ತೇವೆ ಮತ್ತು ಅಂತಿಮ ಸುತ್ತಿನಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ” ಎಂದರು.

ದೇಶದ ಪ್ರತಿಭೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಹೀರೋ ಮೋಟೋಕಾರ್ಪ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಅರುಣ್ ಜೌರಾ ಅವರು, “ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿಯು ಜಾಗತಿಕವಾಗಿ ಭಾರತೀಯ ಆಫ್-ರೋಡ್ ರೇಸಿಂಗ್‌ನ ಮುಂಚೂಣಿಯಲ್ಲಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಲು ದೇಶದ ಹವ್ಯಾಸಿಗಳು ಮತ್ತು ವೃತ್ತಿಪರರನ್ನು ಪ್ರೇರೇಪಿಸುತ್ತಿದೆ. ಉನ್ನತ ತಂತ್ರಜ್ಞಾನ ಮತ್ತು ನಾವೀನ್ಯಗಳೊಂದಿಗೆ, Xpulse 200 4V ಸವಾರರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು, ತಮ್ಮ ಮಿತಿಗಳನ್ನು ಮೀರಿ ಸಾಧಿಸಲು ಸೂಕ್ತವಾದ ಬೈಕ್ ಎನಿಸಿಕೊಂಡಿದೆ. ನಮ್ಮ ಪ್ರಯತ್ನಗಳು ಫಲ ನೀಡುತ್ತಿರುವುದನ್ನು ಕಂಡು ನಮಗೆ ಖುಷಿಯಾಗಿದೆ. ಈ ಕ್ರೀಡೆಯು ಇನ್ನಷ್ಟು ವೇಗವಾಗಿ ಬೆಳೆಯುತ್ತದೆ ಎಂಬ ವಿಶ್ವಾಸವಿದೆ. ವಿಜೇತರಿಗೆ ಅಭಿನಂದನೆಗಳು. ರಾಷ್ಟ್ರೀಯ ಪ್ರತಿಭೆಗಳಿಗೆ ಭವಿಷ್ಯದಲ್ಲಿ ಬೆಂಬಲ ನೀಡುವುದನ್ನು ಹೀರೊ ಮೋಟೋಸ್ಪೋರ್ಟ್ಸ್ ಮುಂದುವರಿಸುತ್ತದೆ” ಎಂದು ಹೇಳಿದರು.

ನಗರ ಮತ್ತು ಪ್ರಾದೇಶಿಕ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದ 90 ರೈಡರ್‌ಗಳು ವಲಯ ಸುತ್ತನ್ನು ತಲುಪಿದ್ದರು. ವಲಯ ಸುತ್ತು 4-ದಿನಗಳ ಕಾಲ ನಡೆಯಿತು. ಅಲ್ಲಿ ದಿ ಹೀರೋ ಮೋಟೋಸ್ಪೋರ್ಟ್ಸ್ ರಾಷ್ಟ್ರೀಯ ತಂಡದಿಂದ ತರಬೇತಿ ಪಡೆದ ಟಾಪ್-20 ಡರ್ಟ್-ಬೈಕಿಂಗ್ ಹೀರೋಗಳು ಅಂತಿಮ ಹಂತಕ್ಕೆ ತಲುಪಿದರು.

ಅಗ್ರ ಅಂತಾರಾಷ್ಟ್ರೀಯ ತಂಡಗಳಲ್ಲಿ ಒಂದಾಗಿರುವ ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿ, ಹೀರೋ ಮೋಟೋಕಾರ್ಪ್‌ನ ರ‍್ಯಾಲಿ-ರೇಸಿಂಗ್ ತಂಡ ಮತ್ತು ಡಕಾರ್ ರ‍್ಯಾಲಿಯಲ್ಲಿ ಪ್ರಮುಖ ಸ್ಥಾನವನ್ನು ಸಂಪಾದಿಸಿದ ಏಕೈಕ ಭಾರತೀಯ ತಂಡವೂ ಆಗಿದೆ. ತಂಡದ ರೈಡರ್‌ಗಳಾದ ರಾಸ್ ಬ್ರಾಂಚ್, ಜೋಕ್ವಿಮ್ ರಾಡ್ರಿಗಸ್, ಸೆಬಾಸ್ಟಿಯನ್ ಬುಹ್ಲರ್ ಮತ್ತು ಫ್ರಾಂಕೊ ಕೈಮಿ ಅವರು ಫೈನಲ್ ತಲುಪಿದ ರೈಡರ್‌ಗಳೊಂದಿಗೆ ಮಾತನಾಡಿದರು. ವಸತಿಯುತ ಬೂಟ್‌ಕ್ಯಾಂಪ್‌ನಲ್ಲಿ ಅವರಿಗೆ ಅಮೂಲ್ಯವಾದ ತರಬೇತಿಯನ್ನು ಒದಗಿಸಿದರು.

ಇದನ್ನೂ ಓದಿ: Fact Check: ಪ್ಯಾನ್ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಕ್ಲೋಸ್ ಆಗುತ್ತಾ?

ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ OEM (ಮೂಲ ಉಪಕರಣ ತಯಾರಕ) ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಮೊದಲ ಪ್ರತಿಭಾ ಶೋ ಕಾರ್ಯಕ್ರಮವಾಗಿದೆ. ಆಫ್-ರೋಡ್ ರೇಸಿಂಗ್‌ನಲ್ಲಿ ಉತ್ಸಾಹದಿಂದ ಮುಂದುವರಿದು, ಖ್ಯಾತಿ ಗಳಿಸಲು ಬಯಸುವ ಉದಯೋನ್ಮುಖ ಸವಾರರು, ಉತ್ಸಾಹಿಗಳು ಮತ್ತು ಹವ್ಯಾಸಿಗಳಿಗೆ ಹೆಚ್ಚು ಅಗತ್ಯವಿರುವ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News