ಬಾಲಾಕೋಟ್ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಅಂದಾಜಿಗೆ ಸಿಗುತ್ತಿಲ್ಲ-ನಿರ್ಮಲಾ ಸೀತಾರಾಮನ್

ಬಾಲಾಕೋಟ್ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಅಂದಾಜಿಗೆ ಸಿಗುತ್ತಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಹೇಳಿದ್ದಾರೆ.

Last Updated : Apr 1, 2019, 04:38 PM IST
ಬಾಲಾಕೋಟ್ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಅಂದಾಜಿಗೆ ಸಿಗುತ್ತಿಲ್ಲ-ನಿರ್ಮಲಾ ಸೀತಾರಾಮನ್  title=

ನವದೆಹಲಿ: ಬಾಲಾಕೋಟ್ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಅಂದಾಜಿಗೆ ಸಿಗುತ್ತಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಹೇಳಿದ್ದಾರೆ.

ಇಂಡಿಯಾ ಕಾ ಡಿಎನ್ಎ 2019 ಸಮಾವೇಶದಲ್ಲಿ ಜೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ನಡೆಸಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾ ಸಿತಾರಾಮನ್" ಬಾಲಾಕೊಟ್ ದಾಳಿಯಲ್ಲಿ ಸತ್ತ ಉಗ್ರರ ಬಗ್ಗೆ ಯಾವುದೇ ಅಂದಾಜಿಗೆ ಸಿಗುತ್ತಿಲ್ಲ.ಬಾಲಾಕೊಟ್ ನಲ್ಲಿ ಉಗ್ರರು ತರಬೇತಿ ಶಿಬಿರಗಳನ್ನು ಹೊಂದಿದ್ದು,ಈ ಶಿಬಿರಕ್ಕೆ ಹಲವಾರು ತರಬೇತಿದಾರರಿಗೆ ಆಹ್ವಾನ ನೀಡಲಾಗಿತ್ತು.ಅಲ್ಲಿ ಮೃತಪಟ್ಟಿರುವವರ ವಿವರಣೆಗಳು ಪಾಕಿಸ್ತಾನದ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾದಲ್ಲಿವೆ ಎಂದು ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಅವರು ಚುನಾವಣಾ ಹೊರತಾಗಿಯೂ ಬಾಲಾಕೊಟ್ ವಾಯುದಾಳಿಯನ್ನು ಕೈಗೊಳ್ಳಲಾಗಿದೆ,ನಮ್ಮ ಉದ್ದೇಶ ಉಗ್ರರ ವಿರುದ್ದ ಕ್ರಮ ತೆಗೆದುಕೊಳ್ಳುವ ಮೂಲಕ ದೇಶವನ್ನು ರಕ್ಷಿಸುವುದು ಎಂದರು.ಯುಪಿಎ ವಿರುದ್ಧ ವಾಗ್ದಾಳಿ ನಡೆಸಿ 2008 ರಲ್ಲಿ ಚುನಾವಣೆ ಇಲ್ಲದ ವೇಳೆಯಲ್ಲಿಯೂ ಕೂಡ ಅವರು ಉಗ್ರರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ದೂರಿದರು.ಅಲ್ಲದೇ ದಾಳಿಯ ವಿಚಾರವಾಗಿ ಪ್ರತಿಪಕ್ಷಗಳು ಪ್ರೂಫ್ ಕೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್ "2016 ರಲ್ಲಿಯೂ ಕೂಡ ಪ್ರತಿಪಕ್ಷಗಳು ಪ್ರೂಫ್ ಕೇಳಿದ್ದವು.ಈ ತರದ ಮಾಹಿತಿಗಳನ್ನು ಸರ್ಕಾರ ಬಿಡುಗಡೆ ಮಾಡಬೇಕೆ ?ಎಂದು ಪ್ರಶ್ನಿಸಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೇಶಕ್ಕಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
 

Trending News