LIC ಪ್ರಿಮಿಯಂ, SCHOOL FEES ಚಿಂತೆ ಬೇಡ, POST OFFICEನ ಈ ಯೋಜನೆ ನಿಮ್ಮ ಟೆನ್ಶನ್ ದೂರಮಾಡಲಿದೆ

ಒಂದುವೇಳೆ ನೀವೂ ಕೂಡ ವಿಮೆ, ಸ್ಕೂಲ್ ಫೀ ಅಥವಾ ಬೇರೆ ಯಾವುದೇ ಕೆಲಸಕ್ಕಾಗಿ ನಿಮ್ಮ ಫಂಡ್ ಅನ್ನು ನಿರ್ವಹಿಸಲು ಕಷ್ಟಪಡುತ್ತಿದ್ದರೆ, ಅಂಚೆ ಕಚೇರಿಯ ಒಂದು ಯೋಜನೆ ನಿಮಗೆ ಸಹಾಯ ಮಾಡಲಿದೆ.

Last Updated : Apr 17, 2020, 10:09 PM IST
LIC ಪ್ರಿಮಿಯಂ, SCHOOL FEES ಚಿಂತೆ ಬೇಡ, POST OFFICEನ ಈ ಯೋಜನೆ ನಿಮ್ಮ ಟೆನ್ಶನ್ ದೂರಮಾಡಲಿದೆ title=

ವಿಮೆ, ಶಾಲಾ ಶುಲ್ಕಗಳು ಅಥವಾ ಇನ್ನಾವುದೇ ಪ್ರಮುಖ ಕೆಲಸಗಳಿಗಾಗಿ ನಿಮ್ಮ ಹಣಕಾಸನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗದಿದ್ದರೆ, ಪೋಸ್ಟ್ ಆಫೀಸ್ ನ ಒಂದು ಉಳಿತಾಯ ಯೋಜನೆ ನಿಮಗೆ ತುಂಬಾ ಸಹಕಾರಿಯಾಗಲಿದೆ. ಪೋಸ್ಟ್ ಆಫೀಸ್‌ನ ಎಲ್ಲಾ ಉಳಿತಾಯ ಯೋಜನೆಗಳಲ್ಲಿ ಆರ್‌ಡಿಯನ್ನು ಸಣ್ಣ ಹೂಡಿಕೆದಾರರು ಹೆಚ್ಚಾಗಿ ಇಷ್ಟಪಡುತ್ತಾರೆ. ಸಣ್ಣ ಹೂಡಿಕೆದಾರರಲ್ಲಿ ಆರ್‌ಡಿಯ ಜನಪ್ರಿಯತೆ ಮತ್ತು ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಆರ್‌ಡಿ ಮಾಸಿಕ ಕಂತುಗಳನ್ನು ಆನ್‌ಲೈನ್‌ನಲ್ಲಿ ಪಾವತಿಸುವ ಅವಕಾಶವನ್ನು ಅಂಚೆ ಇಲಾಖೆ ಒದಗಿಸಲು ಮುಂದಾಗಿದೆ. ನೀವು ಅದನ್ನು ಯಾವುದೇ ಅಂಚೆ ಕಚೇರಿ ಅಥವಾ ಪೋಸ್ಟ್ ಆಫೀಸ್ ನ ಆನ್‌ಲೈನ್‌ನಲ್ಲಿ ಇದನ್ನು ತೆರೆಯಬಹುದು.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಜೊತೆ ಸೇರಿ ಅಂಚೆ ಇಲಾಖೆ RD ಕಂತುಗಳನ್ನು ಆನ್ಲೈನ್ ನಲ್ಲಿ ಪಾವತಿಸುವ ಈ ಸೌಲಭ್ಯವನ್ನು ಒದಗಿಸಿದೆ. ಅಂಚೆ ಕಚೇರಿ ನೀಡುತ್ತಿರುವ ಈ ಸೌಲಭ್ಯವನ್ನು ಬಳಸಲು ಗ್ರಾಹಕರು ಒಮ್ಮೆ ತಮ್ಮ ಹೋಮ್ ಬ್ರಾಂಚ್ ಗೆ ಭೇಟಿ ನೀಡಿ ತಮ್ಮ RD ಖಾತೆಯನ್ನು IPPB ಖಾತೆಯ ಜೊತೆಗೆ ಜೋಡಿಸಬೇಕು. ಈ ಪ್ರಕ್ರಿಯೆಯ ಬಳಿಕ ನೀವು ನಿಮ್ಮ IPPB ಖಾತೆಯಿಂದ ಹಣವನ್ನು ಆನ್ಲೈನ್ ಮೂಲಕ ಅಥವಾ IPPB ಮೊಬೈಲ್ ಆಪ್ ಬಳಸಿ RD ಕಂತನ್ನು ಪ್ರತಿ ತಿಂಗಳು ಪಾವತಿಸಬಹುದಾಗಿದೆ.

ಇದಕ್ಕಾಗಿ ಏನು ಮಾಡಬೇಕು?

  • ಇದಕ್ಕಾಗಿ, ಗ್ರಾಹಕರು ಮೊದಲು ತಮ್ಮ ಬ್ಯಾಂಕ್ ಖಾತೆಯಿಂದ ಐಪಿಪಿಬಿ ಖಾತೆಗೆ ಹಣವನ್ನು ವರ್ಗಾಯಿಸಬೇಕು.
  • ಖಾತೆಗೆ ಹಣವನ್ನು ಸೇರಿಸಿದ ನಂತರ, ಡಿಒಪಿ ಉತ್ಪನ್ನಗಳಿಗೆ ಹೋಗಿ ಮತ್ತು ಅಲ್ಲಿ RD ಠೇವಣಿ ಆಯ್ಕೆಮಾಡಿ
  • RDಖಾತೆ ಸಂಖ್ಯೆ ಮತ್ತು ಗ್ರಾಹಕ ID ನಮೂದಿಸಿ
  • ಕಂತು ಮೊತ್ತ ಮತ್ತು ದಿನಾಂಕವನ್ನು ಆಯ್ಕೆ ಮಾಡಿ.
  • ಕಂತು ಠೇವಣಿ ಮಾಡಿದ ನಂತರ, ಮಾಹಿತಿ ತಕ್ಷಣವೇ IPPB ಮೊಬೈಲ್ ಅಪ್ಲಿಕೇಶನ್‌ನಲ್ಲಿ ಬರಲಿದೆ.

Trending News