ಜೂನ್ 1 ರಿಂದ Samsung ಮೊಬೈಲ್ ಗಳಲ್ಲಿ ಈ ವಾಯ್ಸ್ ಅಸಿಸ್ಟೆಂಟ್ ಸೇವೆ ಸ್ಥಗಿತಗೊಳ್ಳಲಿದೆ

ದಕ್ಷಿಣ ಕೊರಿಯಾದ ಟೆಕ್ ಕಂಪನಿ ಸ್ಯಾಮ್‌ಸಂಗ್ ತನ್ನ ಎಸ್ ವಾಯ್ಸ್ ಅಸಿಸ್ಟೆಂಟ್ ಅನ್ನು ನಿಲ್ಲಿಸಲು ನಿರ್ಧರಿಸಿದೆ. ಈ ಧ್ವನಿ ಸಹಾಯಕವನ್ನು ಕಂಪನಿಯು 2012 ರಲ್ಲಿ ಪ್ರಾರಂಭಿಸಿತ್ತು.

Last Updated : Apr 13, 2020, 09:47 PM IST
ಜೂನ್ 1 ರಿಂದ Samsung ಮೊಬೈಲ್ ಗಳಲ್ಲಿ ಈ ವಾಯ್ಸ್ ಅಸಿಸ್ಟೆಂಟ್ ಸೇವೆ ಸ್ಥಗಿತಗೊಳ್ಳಲಿದೆ title=

ದಕ್ಷಿಣ ಕೊರಿಯಾದ ಟೆಕ್ ಕಂಪನಿ ಸ್ಯಾಮ್‌ಸಂಗ್ ತನ್ನ ಎಸ್ ವಾಯ್ಸ್ ಅಸಿಸ್ಟೆಂಟ್ ಅನ್ನು ನಿಲ್ಲಿಸಲು ನಿರ್ಧರಿಸಿದೆ. ಈ ಧ್ವನಿ ಸಹಾಯಕವನ್ನು ಕಂಪನಿಯು 2012 ರಲ್ಲಿ ಪ್ರಾರಂಭಿಸಿತ್ತು. ಆದರೆ, ಅಂದಿನಿಂದ ಇದು ಆಪಲ್ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಸ್ಪರ್ಧಿಸಲು ವಿಫಲವಾಗಿದೆ.

ಸ್ಯಾಮ್‌ ಮೊಬೈಲ್‌ನ ವರದಿಯ ಪ್ರಕಾರ, ಈ ವರ್ಷದ ಜೂನ್‌ನಿಂದ ಎಸ್ ವಾಯ್ಸ್ ಲಭ್ಯವಿರುವುದಿಲ್ಲ. ವಿಶೇಷವೆಂದರೆ, 2012 ರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 3 ಜೊತೆಗೆ ಎಸ್ ವಾಯ್ಸ್ ಅನ್ನು ಬಿಡುಗಡೆ ಮಾಡಲಾಗಿತ್ತು.

ಆದರೆ, ಜನರು ಸ್ಯಾಮ್ಸಂಗ್ ನ ಈ ಧ್ವನಿ ಸಹಾಯಕ ಸೇವೆಯನ್ನು ಹೆಚ್ಚು ಇಷ್ಟಪಟ್ಟಿಲ್ಲ. ಕಾರಣವೆಂದರೆ ಸರಳ ರೀತಿಯಲ್ಲಿ ಪ್ರತಿಕ್ರಿಯಿಸುವಲ್ಲಿ ಇದು ನಿಖರವಾಗಿಲ್ಲ, ಅಥವಾ ಬಳಕೆದಾರರೊಂದಿಗೆ ಸರಳ ಸಂವಹನ ನಡೆಸುವಲ್ಲಿ ಇದು ವಿಫಲವಾಗಿದೆ ಎಂದೂ ಕೂಡ ಹೇಳಬಹುದು.

ವಿಶೇಷವೆಂದರೆ, ಸ್ಯಾಮ್‌ಸಂಗ್ ಈಗ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್ ಸಿರಿ ಜೊತೆ ಸ್ಪರ್ಧಿಸಲು Bixbyಯನ್ನು ನೀಡುತ್ತಿದೆ, ಆದರೆ, ಇದು ಕೂಡ ಗೂಗಲ್ ಅಸಿಸ್ಟೆಂಟ್‌ಗೆ ಹೋಲಿಕೆಯಲ್ಲಿ ಆಂಡ್ರಾಯ್ಡ್ ಬಳಕೆದಾರರನ್ನುಆಕರ್ಷಿಸುವಲ್ಲಿ ಅಷ್ಟೊಂದು ಸಫಲವಾಗಿಲ್ಲ ಎನ್ನಲಾಗಿದೆ.

ಸ್ಯಾಮ್‌ಸಂಗ್ ಎಸ್ ವಾಯ್ಸ್‌ನ ಸೇವೆ ಸ್ಥಗಿತತೆ  ಸ್ಯಾಮ್‌ಸಂಗ್ ಬಳಕೆದಾರರಿಗೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಏಕೆಂದರೆ ಈಗ ಕಂಪನಿಯು ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಎಸ್ ವಾಯ್ಸ್ ಅನ್ನು ಬದಲಿಸುವ ಮೂಲಕ ಬಿ ವಾಯ್ಸ್ ಅನ್ನು ನೀಡುತ್ತಿದೆ.

ಆದರೆ, ಕೆಲ ಸ್ಯಾಮ್‌ಸಂಗ್ ಪರಿಕ್ಕರಗಳಲ್ಲಿ ಕಂಪನಿ ಇನ್ನೂ ಎಸ್ ವಾಯ್ಸ್ ಸೇವೆ ನೀಡುತ್ತಿದ್ದು,  ಜೂನ್ 1 ರಿಂದ ಈ ವಿಯರೆಬಲ್ಸ್ ಗಳಲ್ಲಿ ಎಸ್ ವಾಯ್ಸ್ ಜಾಗದಲ್ಲಿ  Bixby ಸ್ಥಾನ ಪಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ..

Trending News