ಉತ್ತಮ ಆಡಳಿತ ಮತ್ತು ವಿಕಾಸಕ್ಕೆ ಸಿಕ್ಕ ಗೆಲುವು -ಪ್ರಧಾನಿ ಮೋದಿ

      

Last Updated : Dec 18, 2017, 04:56 PM IST
ಉತ್ತಮ ಆಡಳಿತ ಮತ್ತು ವಿಕಾಸಕ್ಕೆ ಸಿಕ್ಕ ಗೆಲುವು -ಪ್ರಧಾನಿ ಮೋದಿ  title=

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ವಿಕಾಸಕ್ಕೆ ದೊರಕಿದ ಗೆಲುವು ಎಂದು ಎರಡು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವುದಕ್ಕೆ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಇದು ಮೋದಿ ಮಾದರಿಯ ಅಭಿವೃದ್ದಿಗೆ  ಸಿಕ್ಕಂತ ಗೆಲವು ಎಂದು  ಹೇಳಿದ್ದಾರೆ. 182 ವಿಧಾನಸಭಾ ಕ್ಷೇತ್ರಗಳಲ್ಲಿ  ಬಿಜೆಪಿ ಬಹುಮತದ ಮೂಲಕ ಜಯಸಾಧಿಸುವ ಮೂಲಕಸತತ ಆರು ಬಾರಿಗೆ ಬಿಜೆಪಿ ತನ್ನ ಗೆಲುವಿನ ವಿಜಯಯಾನವನ್ನು ಮುಂದುವರೆಸಿದೆ.
 
ಇದರ ಜೊತೆಗೆ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಸೋತರು ಕೂಡ ಉತ್ತಮ ಸಾಧನೆ ಮಾಡಿದೆ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಗಮನಾರ್ಹ ಪ್ರದರ್ಶನವನ್ನು ಕಂಡಿರುವ ಕಾಂಗ್ರೆಸ್ಸ್ ಮತಗಳಿಕೆಯಲ್ಲಿ ಮೊದಲಿಗಿಂತ ಉತ್ತಮ ಸಾಧನೆ ಮಾಡಿದೆ. ಗುಜರಾತ್ ಚುನಾವಣೆಯಲ್ಲಿ ಒಂದರ್ಥದಲ್ಲಿ ಇದು ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ಗೆ ಉತ್ತಮ ಆತ್ಮವಿಶ್ವಾಸವನ್ನು ಮೂಡಿಸಿದೆ. 

 

Trending News