ಪ್ಯಾನ್ ಕಾರ್ಡ್ ಇಲ್ಲದೆ ಸಾಧ್ಯವಿಲ್ಲ ಈ ಕೆಲಸ

ಇಂದಿನ ಸಮಯದಲ್ಲಿ ಯಾವುದೇ ಹಣಕಾಸು ಮತ್ತು ಬ್ಯಾಂಕಿಂಗ್ ಕೆಲಸಕ್ಕಾಗಿ ನೀವು ಪ್ಯಾನ್ ಸಂಖ್ಯೆಯನ್ನು ಹೊಂದಿರಬೇಕು. ಪ್ಯಾನ್ ಸಂಖ್ಯೆ ಇಲ್ಲದಿದ್ದರೆ ನಿಮ್ಮ ಹಲವು ಕೆಲಸಗಳು ಸ್ಥಗಿತಗೊಳ್ಳಬಹುದು.

Last Updated : Jun 15, 2020, 12:36 PM IST
ಪ್ಯಾನ್ ಕಾರ್ಡ್ ಇಲ್ಲದೆ ಸಾಧ್ಯವಿಲ್ಲ ಈ ಕೆಲಸ  title=

ನವದೆಹಲಿ : ಇಂದಿನ ಸಮಯದಲ್ಲಿ ಯಾವುದೇ ಹಣಕಾಸು ಮತ್ತು ಬ್ಯಾಂಕಿಂಗ್ ಕೆಲಸಕ್ಕಾಗಿ ನೀವು ಪ್ಯಾನ್ ಸಂಖ್ಯೆಯನ್ನು ಹೊಂದಿರಬೇಕು. ಪ್ಯಾನ್ ಸಂಖ್ಯೆ ಇಲ್ಲದಿದ್ದರೆ ನಿಮ್ಮ ಹಲವು ಕೆಲಸಗಳು ಸ್ಥಗಿತಗೊಳ್ಳಬಹುದು. ಇಂದಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (PAN CARD) ನಿಮಗೆ ಯಾವ್ಯಾವ ಕೆಲಸಕ್ಕೆ ಬೇಕು ಎಂದು ಇಂದು ನಾವು ನಿಮಗೆ ಹೇಳುತ್ತೇವೆ. ಇಂದಿನ ಸಮಯದಲ್ಲಿ ಇದು ಪ್ಯಾನ್‌ನಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸಹ ತೋರಿಸುತ್ತದೆ.

ಪ್ಯಾನ್ ಅಥವಾ ಶಾಶ್ವತ ಖಾತೆ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ (PAN) ಕಡ್ಡಾಯವಾಗಿದೆ. ಅದೇ ಸಮಯದಲ್ಲಿ ಇತರ ಕೆಲವು ಪ್ರಮುಖ ಕೆಲಸಗಳಿಗೆ ಪ್ಯಾನ್ ಅನ್ನು ಕಡ್ಡಾಯಗೊಳಿಸಲಾಗಿದೆ. 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸ್ಥಿರ ಆಸ್ತಿಯನ್ನು ಖರೀದಿಸುವಾಗ ಪ್ಯಾನ್ ಅನ್ನು ನಮೂದಿಸುವುದು ಸಹ ಅಗತ್ಯವಾಗಿದೆ. ಅಂತಹ ಎಲ್ಲಾ ನಿಯಮಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ನೀವೂ ಕೂಡ ಪ್ಯಾನ್ ಕಾರ್ಡ್ ಹೊಂದಿದ್ದಲ್ಲಿ ಈ ಪ್ರಮುಖ ನಿಯಮ ತಿಳಿದುಕೊಳ್ಳಿ, ಇಲ್ಲದಿದ್ದರೆ...

ಐಟಿಆರ್‌ಗೆ ಪ್ಯಾನ್ ಅಗತ್ಯ:
ತೆರಿಗೆ ರಿಟರ್ನ್ ಫೈಲಿಂಗ್ ಸಮಯದಲ್ಲಿ ನಿಮ್ಮ ಆಧಾರ್ (Aadhaar) ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ನಿಮ್ಮ ಐಟಿಆರ್ ಅನ್ನು ಪ್ರಕ್ರಿಯೆಗೊಳಿಸುವುದಿಲ್ಲ. ಆದಾಯ ತೆರಿಗೆ ಇಲಾಖೆಯ ಪ್ರಕಾರ ಒಂದು ದಿನದಲ್ಲಿ ಬ್ಯಾಂಕ್ ಡ್ರಾಫ್ಟ್, ಪೇ ಆರ್ಡರ್ ಅಥವಾ ಬ್ಯಾಂಕರ್ ಚೆಕ್ 50,000 ಅಥವಾ ಅದಕ್ಕಿಂತ ಹೆಚ್ಚಿನ ಚೆಕ್ಗಾಗಿ ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ.

ಪ್ಯಾನ್ ಕಾರ್ಡ್‌ಗಿಂತ ಉತ್ತಮ e-PAN!

ಜೀವ ವಿಮಾ ಪ್ರೀಮಿಯಂಗಾಗಿ ಪ್ಯಾನ್:
ಜೀವ ವಿಮಾ ಪ್ರೀಮಿಯಂನಲ್ಲಿ ಸಹ, 50,000 ರೂಪಾಯಿಗಳಿಗಿಂತ ಹೆಚ್ಚಿನ ಪಾವತಿಯ ಮೇರೆಗೆ ನಿಮ್ಮ ಪ್ಯಾನ್ ಸಂಖ್ಯೆಯನ್ನು ನೀವು ಒದಗಿಸಬೇಕು. ಕಂಪನಿಯ ಷೇರುಗಳನ್ನು ಖರೀದಿಸಲು ಪ್ಯಾನ್ ಸಹ ಅಗತ್ಯವಿದೆ. ವಿಶೇಷವಾಗಿ ನೀವು ಷೇರುಗಳಿಗೆ ಬದಲಾಗಿ ಕಂಪನಿಗೆ 50,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಿದಾಗ. ಕಂಪನಿಯ ಡಿಬೆಂಚರ್‌ಗಳು ಮತ್ತು ಬಾಂಡ್‌ಗಳನ್ನು ಖರೀದಿಸಲು ಪ್ಯಾನ್ ಒದಗಿಸುವುದು ಸಹ ಕಡ್ಡಾಯವಾಗಿದೆ.

ಅಂಚೆ ಕಚೇರಿಯಲ್ಲಿ ಹಣವನ್ನು ಠೇವಣಿ ಇರಿಸಲು ಪ್ಯಾನ್ ಅಗತ್ಯ:
ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ 50,000 ರೂ.ಗಿಂತ ಹೆಚ್ಚು ಠೇವಣಿ ಇರಿಸಲು ಪ್ಯಾನ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅರ್ಜಿಗಳಿಗಾಗಿ ಪ್ಯಾನ್ ಕಾರ್ಡ್ ಸಹ ನೀಡಲಾಗುತ್ತದೆ. ಇದರೊಂದಿಗೆ ನಿಮ್ಮ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿಯನ್ನು ಪಡೆಯಲಾಗುತ್ತದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ 25 ಸಾವಿರ ರೂ.ಗಿಂತ ಹೆಚ್ಚಿನ ಬಿಲ್‌ಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

ಕೇವಲ 10 ನಿಮಿಷಗಳಲ್ಲಿ ಸಿದ್ಧವಾಗಲಿದೆ ನಿಮ್ಮ ಪ್ಯಾನ್ ಸಂಖ್ಯೆ

ಮ್ಯೂಚುಯಲ್ ಫಂಡ್‌ಗೆ ಪ್ಯಾನ್ ಅಗತ್ಯ:
ಒಂದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಸೆಕ್ಯುರಿಟೀಸ್ ಮತ್ತು ಮ್ಯೂಚುವಲ್ ಫಂಡ್ ಘಟಕಗಳನ್ನು ಖರೀದಿಸಲು ಪ್ಯಾನ್ ಕಡ್ಡಾಯವಾಗಿದೆ. ಇದರ ಮಿತಿ 50,000 ರೂಪಾಯಿ ಅಥವಾ ಹೆಚ್ಚಿನದನ್ನು ಪಾವತಿಸುವುದರ ಮೇಲೂ ಇರುತ್ತದೆ. 50,000 ರೂ.ಗಿಂತ ಹೆಚ್ಚಿನ ಹಣವನ್ನು  ಠೇವಣಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸ್ಥಿರ ಠೇವಣಿ ಯೋಜನೆಗಳಲ್ಲಿ ಠೇವಣಿ ಇರಿಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
 

Trending News