ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ದೆಹಲಿಯ ಮೂವರು ಮೇಯರ್‌ಗಳ ಧರಣಿ, ಕಾರಣ...

ಮೂರು ಮಹಾನಗರ ಪಾಲಿಕೆಗಳ ಮೇಯರ್‌ಗಳು ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಧರಣಿಯಲ್ಲಿ ಕುಳಿತುಕೊಂಡಿದ್ದಾರೆ.

Last Updated : Oct 26, 2020, 02:44 PM IST
  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆ ಮೇಯರ್‌ಗಳ ಧರಣಿ
  • ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಮೇಯರ್‌ಗಳ ಧರಣಿ
ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ದೆಹಲಿಯ ಮೂವರು ಮೇಯರ್‌ಗಳ ಧರಣಿ, ಕಾರಣ...

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆಗಳ ಮೇಯರ್‌ಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಧರಣಿಯಲ್ಲಿ ಕುಳಿತುಕೊಂಡಿದ್ದಾರೆ. ಮೂವರು ಮೇಯರ್‌ಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರೊಂದಿಗೆ ಸಭೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಪಾಲಿಕೆಗಳಿಗೆ ನಿಧಿ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಎಸ್‌ಡಿಎಂಸಿ, ಎನ್‌ಡಿಎಂಸಿ ಮತ್ತು ಇಡಿಎಂಸಿಯ ಮೇಯರ್‌ಗಳು ಪುರಸಭೆ ನೌಕರರ ವೇತನವನ್ನು ಪಾವತಿಸದಿರುವ ಬಗ್ಗೆ ಪ್ರತಿಭಟಿಸುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೋ ನಮಗೆ ಕರೆ ಮಾಡಿ ಅಥವಾ ನಮ್ಮೊಂದಿಗೆ ಮಾತನಾಡಿ. ನೀವು ಬಂದು ಮಾತನಾಡುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳಿದ್ದಾರೆ.

ಪಾಲಿಕೆಯ ನೂರಾರು ವೈದ್ಯರು (Doctors), ದಾದಿಯರು, ನೈರ್ಮಲ್ಯ ಕಾರ್ಮಿಕರು, ಶಿಕ್ಷಕರು ಮತ್ತು ಇತರ ನೌಕರರಿಗೆ ಬಹಳ ದಿನಗಳಿಂದ ವೇತನ ಸಿಕ್ಕಿಲ್ಲ. ಅಕ್ಟೋಬರ್ 25 ರಂದು ಎನ್‌ಡಿಎಂಸಿ ವೈದ್ಯಕೀಯ ಕಾಲೇಜು ಮತ್ತು ಹಿಂದೂ ರಾವ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​ವೇತನ ಪಾವತಿಸದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿತ್ತು.

ವಾಣಿಜ್ಯ ನಗರಿಯಂತೆ ಬದಲಾಗಲಿದೆಯೇ ರಾಷ್ಟ್ರ ರಾಜಧಾನಿ, ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ

ಹಿಂದೂ ರಾವ್ ಆಸ್ಪತ್ರೆಯ ವೈದ್ಯರು ಕೆಲವು ವಾರಗಳಿಂದ ವೇತನ ನೀಡದಿದ್ದನ್ನು ವಿರೋಧಿಸಿ ಪ್ರತಿಭಟನೆ (Protest) ನಡೆಸುತ್ತಿದ್ದರು. ಹಲವಾರು ತಿಂಗಳುಗಳಿಂದ ಬಾಕಿ ಇರುವ ವೇತನವನ್ನು ಶೀಘ್ರದಲ್ಲೇ ಪಾವತಿಸುವಂತೆ ಒತ್ತಾಯಿಸಿ ಅನೇಕ ವೈದ್ಯರು ಆಸ್ಪತ್ರೆಯ ಹೊರಗೆ ಕುಳಿತು ದೆಹಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Unlock 5: ದೆಹಲಿ ಮಾರ್ಕೆಟ್ ಗಳು ಈಗ ಮುಕ್ತ , ಅಕ್ಟೋಬರ್ 15 ರಿಂದ ಸಿನಿಮಾ ಮಂದಿರಗಳು ಆರಂಭ

ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ತಮ್ಮ ನೌಕರರ ವೇತನ ಮತ್ತು ಪಿಂಚಣಿ ಬಾಕಿ ಪಾವತಿಸಲು ಸಹಾಯ ಮಾಡಲು ಮಧ್ಯಪ್ರವೇಶಿಸುವಂತೆ ಕೇಂದ್ರ ಹಣಕಾಸು ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳಿಗೆ ಒತ್ತಾಯಿಸಿತ್ತು. ಎನ್‌ಡಿಎಂಸಿ ವ್ಯಾಪ್ತಿಯ ಐದು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಯಾವುದೇ ಆರೋಗ್ಯ ಕಾರ್ಯಕರ್ತರಿಗೆ ಕನಿಷ್ಠ ಮೂರು ತಿಂಗಳಿನಿಂದ ವೇತನ ಪಾವತಿಸಿಲ್ಲ.

More Stories

Trending News