ಪ್ರಧಾನಿ ಮೋದಿಯಿಂದ ಮನೆ ಬೀಗ ಹಸ್ತಾಂತರ: ಇಂದು ಈ ರಾಜ್ಯದಲ್ಲಿ ಗೃಹ ಪ್ರವೇಶ ಮಾಡಲಿದ್ದಾರೆ 1.75 ಕೋಟಿ ಜನ

ಮಧ್ಯಪ್ರದೇಶದಲ್ಲಿ ಇಂದು 1.75 ಕೋಟಿ ಜನರು ತಮ್ಮ ಮನೆಗಳಿಗೆ ಪ್ರವೇಶಿಸಲಿದ್ದಾರೆ. ಈ ಮನೆಗಳನ್ನು ರಾಜ್ಯದ ಕಾರ್ಮಿಕ ವರ್ಗದವರಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ನಿರ್ಮಿಸಲಾಗಿದೆ.

Last Updated : Sep 12, 2020, 08:31 AM IST
  • ಪಿಎಂ ನರೇಂದ್ರ ಮೋದಿ ಅವರು 20 ನವೆಂಬರ್ 2016ರಂದು ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಪ್ರಾರಂಭಿಸಿದರು.
  • ಈ ಯೋಜನೆಯಡಿ ದೇಶಾದ್ಯಂತ ಈವರೆಗೆ ಸುಮಾರು 1.14 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.
  • ಮಧ್ಯಪ್ರದೇಶ ರಾಜ್ಯ ಒಂದರಲ್ಲೇ ಈವರೆಗೆ ಸ್ವಂತ ಸೂರು ಇಲ್ಲದ 17 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಕ್ಕಿದೆ.
ಪ್ರಧಾನಿ ಮೋದಿಯಿಂದ ಮನೆ ಬೀಗ ಹಸ್ತಾಂತರ: ಇಂದು ಈ ರಾಜ್ಯದಲ್ಲಿ ಗೃಹ ಪ್ರವೇಶ ಮಾಡಲಿದ್ದಾರೆ 1.75 ಕೋಟಿ ಜನ title=

ಭೋಪಾಲ್: ಮಧ್ಯಪ್ರದೇಶದಲ್ಲಿ 1.75 ಕೋಟಿ ಜನರು ಇಂದು ಗೃಹ ಪ್ರವೇಶ ಮಾಡಲಿದ್ದಾರೆ. ಈ ಮನೆಗಳನ್ನು ರಾಜ್ಯದ ಕಾರ್ಮಿಕ ವಿಭಾಗಗಳಿಗಾಗಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ನಿರ್ಮಿಸಲಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಈ ಕಾರ್ಯಕ್ರಮಕ್ಕೆ ಸೇರುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮನೆಗಳ ಕೀಲಿಗಳನ್ನು ಜನರಿಗೆ ಹಸ್ತಾಂತರಿಸಲಿದ್ದಾರೆ.

ಮಧ್ಯಪ್ರದೇಶದ 1.75 ಕೋಟಿ ಜನರ 'ಗೃಹ ಪ್ರವೇಶ' ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು, ಇದರಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan) ಅವರು ಪ್ರಧಾನಿ ಮೋದಿಯವರೊಂದಿಗೆ ಹಾಜರಾಗಲಿದ್ದಾರೆ.

2022ರ ಹೊತ್ತಿಗೆ ಎಲ್ಲಾ ಅಗತ್ಯವಿರುವವರಿಗೆ ಮನೆಗಳನ್ನು ಒದಗಿಸುವುದಾಗಿ ಘೋಷಿಸಿ ಪಿಎಂ ನರೇಂದ್ರ ಮೋದಿ ಅವರು 20 ನವೆಂಬರ್ 2016ರಂದು ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣವನ್ನು ಪ್ರಾರಂಭಿಸಿದರು. 

ಈ ಯೋಜನೆಯಡಿ ದೇಶಾದ್ಯಂತ ಈವರೆಗೆ ಸುಮಾರು 1.14 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಮಧ್ಯಪ್ರದೇಶ ರಾಜ್ಯ ಒಂದರಲ್ಲೇ ಈವರೆಗೆ ಸ್ವಂತ ಸೂರು ಇಲ್ಲದ 17 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಕ್ಕಿದೆ. 

ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ 1.20 ಲಕ್ಷ ರೂ.ಗಳ ಸರ್ಕಾರದ ಅನುದಾನ ಸಿಗುತ್ತದೆ. ಇದರಲ್ಲಿ 60 ಪ್ರತಿಶತ ಕೇಂದ್ರದಿಂದ ಮತ್ತು 40 ಪ್ರತಿಶತವನ್ನು ರಾಜ್ಯದಿಂದ ನೀಡಲಾಗುತ್ತದೆ. ಈ ಯೋಜನೆಯಡಿ ದೇಶಾದ್ಯಂತ 2022ರ ವೇಳೆಗೆ 2.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ನಿಗದಿಪಡಿಸಲಾಗಿದೆ. 
 

Trending News