ನವದೆಹಲಿ : ಗ್ರೇಟಾ ಥಂಬರ್ಗ್ (Greata Thumburg) ಟೂಲ್ ಕಿಟ್ ಪ್ರಕರಣದಲ್ಲಿ ಇನ್ನೂ ಇಬ್ಬರ ಬಂಧನಕ್ಕೆ ದೆಹಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಈಗಾಗಲೇ ಜಾಮೀನುರಹಿತ ವಾರೆಂಟ್ (NBW) ಜಾರಿ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಭಾನುವಾರ ಬೆಂಗಳೂರಿನಲ್ಲಿ ದಿಶಾ ರವಿ (Disha Ravi) ಎಂಬವರನ್ನು ಅರೆಸ್ಟ್ ಮಾಡಲಾಗಿತ್ತು.
ಶಂತನು ಮತ್ತು ನಿಕಿತಾ ಜಾಕೋಬ್ ಗಾಗಿ ತಲಾಶ್..!
ಟೂಲ್ ಕಿಟ್ (tool kit case) ಪ್ರಕರಣದಲ್ಲಿ ಶಂತನು (Shantanu) ಮತ್ತು ನಿಕಿತಾ ಜಾಕೋಬ್ (Nikita Jacob) ಎಂಬ ಇಬ್ಬರು ಆರೋಪಿಗಳಿಗಾಗಿ ಶೋಧ ತೀವ್ರಗೊಳಿಸಲಾಗಿದೆ. ಈ ಇಬ್ಬರ ಶೋಧಕ್ಕಾಗಿ ದೆಹಲಿ ಪೊಲೀಸರು (police) ಮುಂಬಯಿಯಲ್ಲಿ ಮತ್ತು ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ಈಗಾಗಲೇ ಇಬ್ಬರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ : Greta Thunberg toolkit ಕೇಸಿಗೂ ಬೆಂಗಳೂರಿಗೂ ನಂಟು ? ಹೋರಾಟಗಾರ್ತಿ ದಿಶಾ ರವಿ ಬಂಧನ
ಯಾರೀಕೆ ನಿಕಿತಾ ಜಾಕೋಬ್..?
ನಿಕಿತಾ ಜಾಕೋಬ್ ವೃತ್ತಿಯಲ್ಲಿ ವಕೀಲೆ. ಪರಿಸರ ಸಂಬಂಧಿ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ನಿಕಿತಾ ಜಾಕೋಬ್ ಮನೆಗೆ ಸ್ಪೆಷಲ್ ಸೆಲ್ (Special Cell) ಪೊಲೀಸರು ಭೇಟಿ ಕೊಟ್ಟಿದ್ದರು. ಅವರಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳ ತಪಾಸಣೆ ನಡೆಸಿದ್ದರು. ಸಂಜೆಯಾದ ಕಾರಣ ತಪಾಸಣೆ ಅರ್ಧದಲ್ಲೇ ಮುಗಿಸಿ, ಮತ್ತೆ ನಾಳೆ ಬರುವುದಾಗಿ ಹೇಳಿ ಪೊಲೀಸರು ಹಿಂದಿರುಗಿದ್ದರು. ಆದರೆ, ಮರುದಿನ ಪೊಲೀಸ್ ಟೀಂ ಅವರ ಮನೆಗೆ ತೆರಳಿದಾಗ ನಿಕಿತಾ ನಾಪತ್ತೆಯಾಗಿದ್ದರು. ಈಗ ಎಲ್ಲಿದ್ದಾರೆ ಎಂಬುದು ಪತ್ತೆಯಾಗಿಲ್ಲ.
ಕೆಂಪುಕೋಟೆ ದಾಳಿಗೂ ಮೊದಲು ನಡೆದಿತ್ತು ಝೂಂ ಮೀಟಿಂಗ್ :
ಮೂಲಗಳ ಪ್ರಕಾರ ಕೆಂಪುಕೋಟೆ ದಾಳಿಗೂ (Red fort attack) ಮೊದಲು ಒಂದು ಝೂಂ ಮೀಟಿಂಗ್ (Zoom Meeting) ನಡೆದಿತ್ತು. ಅದರಲ್ಲಿ ಎಂಒ ಧಲಿವಾಲ್, ನಿಕಿತಾ, ದಿಶಾ ಅಲ್ಲದೇ ಇನ್ನೂ ಹಲವರು ಪಾಲ್ಗೊಂಡಿದ್ದರು. ಕೃಷಿ ಆಂದೋಲನವನ್ನು (Farmer Protest) ದೊಡ್ಡ ಅಂದೋಲನವನ್ನಾಗಿ ರೂಪಿಸುವುದು ಧಲಿವಾಲ್ ಯೋಜನೆಯಾಗಿತ್ತು. ರೈತರ ನಡುವೆ ಅಸಮಾಧಾನ ಸೃಷ್ಟಿಸುವುದು, ತಪ್ಪು ಮಾಹಿತಿ ರವಾನಿಸುವುದು ಅವನ ಉದ್ದೇಶವಾಗಿತ್ತು. ಟ್ರಾಕ್ಟರ್ ಜಾಥಾ (Tractor parade) ವೇಳೆ ಯುವಕನ ಸಾವಿಗೆ ಕಾರಣ ಪೊಲೀಸ್ ಬುಲೆಟ್ ಎಂಬಂತೆ ಬಿಂಬಿಸುವುದು ಅವನ ಉದ್ದೇಶವಾಗಿತ್ತು. ಇದೇ ವೇಳೆ, ರೈತರ ಆಂದೋಲನಕ್ಕೆ ವಿದೇಶಿ ಸೆಲೆಬ್ರಿಟಿಗಳನ್ನು ಸಂಪರ್ಕಿಸಲಾಗಿತ್ತು. ದಿಶಾ ರವಿಗೆ ಮೊದಲು ಗ್ರೇಟಾ ಥಂಬರ್ಗ್ ಪರಿಚಯವಿತ್ತು. ಹಾಗಾಗಿ ಗ್ರೇಟಾ ಥಂಬರ್ಗ್ ನೆರವು ಪಡೆಯಲಾಗಿತ್ತು.
ಇದನ್ನೂ ಓದಿ : Narendra Modi: ಇಂಡಿಯನ್ ಆರ್ಮಿಗೆ ಆನೆ ಬಲ: ಪ್ರಧಾನಿಯಿಂದ 'ಅರ್ಜುನ್ ಯುದ್ಧ ಟ್ಯಾಂಕ್' ಹಸ್ತಾಂತರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.