Tripura CM Resignation : ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ!

ಇದೀಗ ತ್ರಿಪುರಾ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಹಾಗೂ ತ್ರಿಪುರಾದ ಮೊದಲ ಕೇಂದ್ರ ಸಚಿವೆ ಎಂದೇ ಖ್ಯಾತಿ ಪಡೆದಿರುವ ಪ್ರತಿಮಾ ಭೌಮಿಕ್ ಹೆಸರು ಸಿಎಂ ರೇಸ್ ನಲ್ಲಿ ಕೇಳಿ ಬರುತ್ತಿದೆ.

Written by - Channabasava A Kashinakunti | Last Updated : May 14, 2022, 05:12 PM IST
  • ಸಿಎಂ ಬಿಪ್ಲಬ್ ಕುಮಾರ್ ದೇಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ
  • ತೀವ್ರಗೊಂಡ ಹೊಸ ಸಿಎಂ ಆಯ್ಕೆ ಕಸರತ್ತು
  • ಈಗಾಗಲೇ ಪುನರ್ ರಚನೆಯ ಊಹಾಪೋಹ ಇತ್ತು
Tripura CM Resignation : ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ! title=

Tripura CM submitted resignation : ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು  ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ದೇಬ್ ಅವರು 7 ಜನವರಿ 2016 ರಿಂದ ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಕಾರಿಣಿ ಕರ್ತರಾಗಿದ್ದರೆ. ಈ ಚುನಾವಣೆಯಲ್ಲಿ ಅವರು ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ 25 ವರ್ಷಗಳ ಕಾಲ ಆಡಳಿತ ನಡೆಸುತ್ತಿದ್ದ ಎಡಪಂತೀಯರ  ಸರ್ಕಾರವನ್ನು ಕಿತ್ತೆಸೆದಿದ್ದರು. ಇದೀಗ ತ್ರಿಪುರಾ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಹಾಗೂ ತ್ರಿಪುರಾದ ಮೊದಲ ಕೇಂದ್ರ ಸಚಿವೆ ಎಂದೇ ಖ್ಯಾತಿ ಪಡೆದಿರುವ ಪ್ರತಿಮಾ ಭೌಮಿಕ್ ಹೆಸರು ಸಿಎಂ ರೇಸ್ ನಲ್ಲಿ ಕೇಳಿ ಬರುತ್ತಿದೆ.

ತೀವ್ರಗೊಂಡ ಹೊಸ ಸಿಎಂ ಆಯ್ಕೆ ಕಸರತ್ತು 

ಬಿಪ್ಲಬ್ ಕುಮಾರ್ ದೇವ್ ರಾಜೀನಾಮೆ ಬಳಿಕ ನೂತನ ಸಿಎಂ ಆಯ್ಕೆಗೆ ಕಸರತ್ತು ತೀವ್ರಗೊಂಡಿದೆ. ಈ ಸಂದರ್ಭದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು ಅಂದರೆ ಶನಿವಾರವೇ ನಡೆಯಬಹುದು. ಶಾಸಕಾಂಗ ಪಕ್ಷದ ಸಭೆಯಲ್ಲಿ ತ್ರಿಪುರಾದ ನೂತನ ಸಿಎಂ ಆಯ್ಕೆ ನಡೆಯಲಿದೆ.

ಇದನ್ನೂ ಓದಿ : ವಿವಾಹ ದಿನ ವರ ಮಾಡಿದ ಈ ಒಂದು ತಪ್ಪಿನಿಂದ ಮುರಿದು ಬಿತ್ತು ಮದುವೆ ..!

ಈಗಾಗಲೇ ಪುನರ್ ರಚನೆಯ ಊಹಾಪೋಹ ಇತ್ತು

ತ್ರಿಪುರಾದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಯಿಂದ 2023 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಮತ್ತು ಅದರ ಸಂಬಂಧಿತ ಸಂಘಟನೆಗಳಲ್ಲಿ ಪುನರ್ರಚನೆಯ ಊಹಾಪೋಹಗಳು ಈಗಾಗಲೇ ಹೊರಹೊಮ್ಮುತ್ತಿವೆ. ರಾಜ್ಯ ಬಿಜೆಪಿ ಈ ಮಾಹಿತಿ ನೀಡಿದೆ. ಹಿರಿಯ ಬುಡಕಟ್ಟು ನಾಯಕ ಬಿಕಾಶ್ ದೆಬ್ಬರ್ಮಾ ಅವರನ್ನು ಪಕ್ಷದ ಪರಿಶಿಷ್ಟ ಪಂಗಡಗಳ ಫ್ರಂಟ್‌ನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಸಂಸದ ರೆಬಾಟಿ ತ್ರಿಪುರಾ ಸ್ಥಾನಕ್ಕೆ ಬಂದಿದ್ದಾರೆ. ಇದರೊಂದಿಗೆ ಪಕ್ಷವು ರಾಮಪಾದ ಜಮಾತಿಯಾವನ್ನು ಮುಂಭಾಗದ ವೀಕ್ಷಕರನ್ನಾಗಿ ಮಾಡಿದೆ.

ವಿಧಾನ ಸಭಾ ಚುನಾವಣೆಯತ್ತ ಸಂಪೂರ್ಣ ಗಮನ ಹರಿಸಲಾಗಿದೆ

ರಾಜ್ಯ ಘಟಕವು 12 ಜಿಲ್ಲಾ ವೀಕ್ಷಕರು ಮತ್ತು ಸಹ ಮೇಲ್ವಿಚಾರಕರನ್ನು ನೇಮಿಸಿದೆ ಎಂದು ಪಕ್ಷ ತಿಳಿಸಿದೆ. ಬುಡಕಟ್ಟು ಮೋರ್ಚಾ, ಮಹಿಳಾ ಮೋರ್ಚಾ, ಒಬಿಸಿ ಮೋರ್ಚಾ, ಯುವ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾದಂತಹ ಇತರ ಸಂಘಟನೆಗಳಿಗೆ ಪಕ್ಷವು ಎಂಟು ವೀಕ್ಷಕರನ್ನು ನೇಮಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಮಾಣಿಕ್ ಸಹಾ ಶುಕ್ರವಾರ ಪಿಟಿಐಗೆ ತಿಳಿಸಿದರು, ''ಇದು ಪಕ್ಷದ ನಾಯಕರಿಗೆ ಕೆಲಸ ಹಂಚಲು ನಿತ್ಯದ ಕಸರತ್ತು. ನಿಸ್ಸಂಶಯವಾಗಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ : Mundka Fire Incident : ದೆಹಲಿಯಲ್ಲಿ ಭಾರೀ ಬೆಂಕಿ ಅವಘಡ : 26 ಜನ ಸಜೀವದಹನ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News