Tamil Nadu: ಪೊಲೀಸರು 10 ಸಾವಿರ ದಂಡ ವಿಧಿಸಿದ್ದಕ್ಕೆ, ತನ್ನನ್ನು ತಾನೇ ಹೊತ್ತಿಸಿಕೊಂಡ ಲಾರಿ ಚಾಲಕ

Tamil Nadu: ಟ್ರಾಫಿಕ್ ಪೋಲೀಸ್ (Traffic Police) 10 ಸಾವಿರ ರೂ. ದಂಡ ವಿಧಿಸಿದ್ದಕ್ಕಾಗಿ ಲಾರಿ ಚಾಲಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.  

Written by - Nitin Tabib | Last Updated : Mar 14, 2022, 01:47 PM IST
  • ಪಾನಮತ್ತ ಲಾರಿ ಡ್ರೈವರ್ ಗೆ ದಂಡ ವಿಧಿಸಿದ ತಮಿಳು ನಾಡು ಪೊಲೀಸಲು
  • ತನ್ನನ್ನು ತಾನೇ ಹೊತ್ತಿಸಿಕೊಂಡ ಲಾರಿ ಚಾಲಕ.
  • ಮುಂದೇನಾಯ್ತು ತಿಳಿಯಲು ಈ ಸುದ್ದಿ ಓದಿ
Tamil Nadu: ಪೊಲೀಸರು 10 ಸಾವಿರ ದಂಡ ವಿಧಿಸಿದ್ದಕ್ಕೆ, ತನ್ನನ್ನು ತಾನೇ ಹೊತ್ತಿಸಿಕೊಂಡ ಲಾರಿ ಚಾಲಕ title=
Driver Sets Self Fire (Representational Image)

Tamil Nadu: Driver Sets Self Fire - ನಿಯಮ ಉಲ್ಲಂಘನೆಗಾಗಿ ಸಂಚಾರಿ ಪೊಲೀಸರು ಚಲನ್ ಕಡಿತಗೊಳಿಸುವುದು (Challen)  ಅವರ ಕರ್ತವ್ಯದ ಒಂದು ಭಾಗ, ತಮಿಳುನಾಡಿನಲ್ಲಿ ಚಲನ್ ಕಡಿತಗೊಳಿಸುವ ಘಟನೆ ಬೆಳಕಿಗೆ ಬಂದಿರುವುದು ಅಚ್ಚರಿ ಮೂಡಿಸಿದೆ. ಶನಿವಾರ ರಾತ್ರಿ ಲಾರಿ ಚಾಲಕ ಸಂತೋಷ್ ಕುಮಾರ್ (Santosh Kumar) ಲಾರಿಯಲ್ಲಿ ಕೊಂಡ್ಲಂಪಟ್ಟಿ (Kodlampatti) ಕ್ರಾಸ್ ಕಡೆಗೆ ಹೋಗುತ್ತಿದ್ದರು. ಆಗ ಅಲ್ಲಿ ವಾಹನದ ಹುಡುಕಾಟದಲ್ಲಿ ನಿರತರಾಗಿದ್ದ ಪೊಲೀಸರು ಅವನ ವಾಹನವನ್ನು ನಿಲ್ಲಿಸಿ ಪರಿಶೀಲನೆ (Crime News)  ನಡೆಸಿದ್ದಾರೆ.

ಇದನ್ನೂ ಓದಿ-ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಂಡ ವಿಫಲಾಧ್ಯಕ್ಷ: ಬಿಜೆಪಿ ಟೀಕೆ 

ತನಿಖೆ ವೇಳೆ ಪೊಲೀಸರು ಸಂತೋಷ್‌ ಕುಮಾರ್‌ ಪಾನಮತ್ತನಾಗಿದ್ದ ಎಂದು ಆರೋಪಿಸಿ, ವಾಹನ ಜಪ್ತಿ ಮಾಡುವುದರ ಜತೆಗೆ ಹತ್ತು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದ ವಿಚಲಿತನಾದ ಸಂತೋಷ್ ಬಂಕ್‌ನಿಂದ ಪೆಟ್ರೋಲ್ ಖರೀದಿಸಿ ಬೆಂಕಿ ಹಚ್ಚಿಕೊಂಡಿದ್ದಾನೆ. ಸಂತೋಷ್ ಕಿರುಚಾಡುವ ಸದ್ದು ಕೇಳಿದಾಗ ಅಲ್ಲೇ ಇದ್ದ ಪೊಲೀಸರು ಧಾವಿಸಿ ಸಂತೋಷ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ-ಕೇವಲ ರೂ.4,999 ಪಾವತಿಸಿ 100 Kmpl ಮೈಲೇಜ್ ಇರುವ ಈ ಬೈಕ್ ಅನ್ನು ಇಂದೇ ಮನೆಗೆ ತನ್ನಿ

ವರದಿಯ ಪ್ರಕಾರ, 25 ವರ್ಷದ ಲಾರಿ ಚಾಲಕ ಸಂತೋಷ್ ತಮಿಳುನಾಡಿನ ಅಮಾನಿ ಕೊಂಡ್ಲಂಪಟ್ಟಿ ಪ್ರದೇಶದ ನಿವಾಸಿಯಾಗಿದ್ದಾನೆ. ಪ್ರಸ್ತುತ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಪೂರ್ಣ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಸಂತೋಷ್ ಕುಮಾರ್ ಬೆಂಕಿ ಹಚ್ಚಿಕೊಂಡಿರುವ  ಸಿಸಿಟಿವಿ ದೃಶ್ಯಾವಳಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ-ST Somashekar: ‘ಗರಡಿ’ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಸಹಕಾರ ಸಚಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News