ಸತಾರ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಎರಡು ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 4.8 ಮತ್ತು 3.0 ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೊದಲ ಭೂಕಂಪನವು ಬೆಳಿಗ್ಗೆ 7:47 ರ ಸುಮಾರಿಗೆ 10 ಕಿ.ಮೀ ಆಳದೊಂದಿಗೆ, ಎರಡನೆಯದು ಬೆಳಿಗ್ಗೆ 8:27 ಕ್ಕೆ ಸಂಭವಿಸಿದೆ. ಈವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.