ಉತ್ತರಾಖಂಡ್: ರೈಲು ಅಪಘಾತದಲ್ಲಿ 2 ಆನೆಗಳ ಮೃತ್ಯು

ರೈಲ್ವೇ ಹಳಿಗಳಿಂದ ಸುಮಾರು 20-25 ಮೀಟರ್ ದೂರದಲ್ಲಿ ಸತ್ತು ಬಿದ್ದಿದ್ದ ಆನೆಗಳು.

Last Updated : Apr 20, 2019, 10:36 AM IST
ಉತ್ತರಾಖಂಡ್: ರೈಲು ಅಪಘಾತದಲ್ಲಿ 2 ಆನೆಗಳ ಮೃತ್ಯು title=
Pic Courtesy: ANI

ಹರಿದ್ವಾರ (ಉತ್ತರಾಖಂಡ): ಹರಿದ್ವಾರ ಅರಣ್ಯ ಪ್ರದೇಶದ ಜಮಾಲ್ಪುರ್ ಕಲಾನ್ ಪ್ರದೇಶದಲ್ಲಿ ರೈಲಿಗೆ ಸಿಲುಕಿ ಎರಡು ಆನೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಘಟನೆಯು ಬೆಳಿಗ್ಗೆ ಸುಮಾರು 4 ಗಂಟೆಗೆ ನಡೆದಿದ್ದು, ಎರಡೂ ಆನೆಗಳನ್ನು ಗಂಡು ಆನೆಗಳೆಂದು ಪತ್ತೆ ಹಚ್ಚಲಾಗಿದೆ. ರೈಲು ಅಪಘಾತದ ಪರಿಣಾಮದಿಂದಾಗಿ ಆನೆಗಳು ಮೃತಪಟ್ಟಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ರೈಲ್ವೇ ಹಳಿಗಳಿಂದ ಸುಮಾರು 20-25 ಮೀಟರ್ ದೂರದಲ್ಲಿ ಎರಡೂ ಆನೆಗಳು ಸತ್ತಿ ಬಿದ್ದಿದ್ದವು. ಅಪಘಾತದ ಪರಿಣಾಮದಿಂದ ಆನೆಗಳು ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಎರಡೂ ಆನೆಗಳ ಮರಣೋತ್ತರ ತಯಾರಿ ಮಾಡುತ್ತಿದ್ದೇವೆ". ಘಟನೆಯ ವಿವರಗಳನ್ನು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿ ಹೇಳಿದರು.

Trending News