Electric Shock: ನೀರು ತುಂಬಿದ್ದ ಗದ್ದೆಗೆ ಇಳಿದಿದ್ದ ನಾಯಿಯನ್ನು ಹೊರತರಲು ಆಶ್ನಿ ಶೆಟ್ಟಿ ಗದ್ದೆಗೆ ಕಾಲಿಟ್ಟ ವೇಳೆ ವಿದ್ಯುತ್ ಆಘಾತ (Electric Shock) ಸಂಭವಿಸಿ ಆಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ಪಬ್ ವೊಂದರಲ್ಲಿ ಪಾರ್ಟಿ ಮಾಡಿದ್ದ ನಾಲ್ವರು ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಕುಡಿದ ಮತ್ತಿನಲ್ಲಿ ಕಾರು ಓಡಿಸಿದ್ದಾರೆ.. ನ್ಯೂ ಬಿಇಎಲ್ ರಸ್ತೆ ಮೇಲೆ ಅತಿ ವೇಗವಾಗಿ ಹೋಗ್ತಿದ್ದ ಕಾರು ರಸ್ತೆ ಬದಿ ಕೆಲಸ ಮುಗಿಸಿಕೊಂಡು ಹೋಗ್ತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದಿದೆ..
ಗೂಡ್ಸ್ ರೈಲು ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಕದ್ರಿ ಅಗ್ನಿಶಾಮಕ ದಳದವರು ಮೂರು ಎಮ್ಮೆಗಳನ್ನು ರಕ್ಷಿಸಿದ್ದು, ಸತತ ನಾಲ್ಕೈದು ಗಂಟೆಗಳಿಂದ ಎಮ್ಮೆಗಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
Madhuri Dixit : ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ನಿಧನರಾಗಿದ್ದಾರೆ. ಅವರ ವಯಸ್ಸು 90. ಈ ಕುರಿತು ಜಂಟಿ ಹೇಳಿಕೆಯಲ್ಲಿ, ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ನೆನೆ, "ನಮ್ಮ ಪ್ರೀತಿಯ ಆಯಿ (ತಾಯಿ) ಸ್ನೇಹಲತಾ ಅವರು ಇಂದು ಬೆಳಿಗ್ಗೆ ಅವರ ಪ್ರೀತಿಪಾತ್ರರ ಸುತ್ತಲೂ ಶಾಂತಿಯುತವಾಗಿ ನಿಧನರಾದರು." ಎಂದು ಹೇಳಿಕೊಂಡಿದ್ದು, ಸ್ನೇಹಲತಾ ದೀಕ್ಷಿತ್ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 3:00 ಗಂಟೆಗೆ ವರ್ಲಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಮಾದ್ಯಮ ಮೂಲಗಳು ತಿಳಿಸಿವೆ.
ಶ್ರೀಧರ್ (34) ಎಂಬಾತನನ್ನ ಕೊಚ್ಚಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿತ್ತು. ಸದ್ಯ ಆರೋಪಿಗಳಾದ ಆಂಧ್ರಪ್ರದೇಶ ಮೂಲದ ವೀರಾಂಜನೇಯಲು, ಗೋವರ್ಧನ್ ಹಾಗೂ ಬುಡ್ಡಪ್ಪ ಎಂಬಾತನನ್ನ ಬಂಧಿಸಲಾಗಿದೆ. ಫೆಬ್ರುವರಿ 4ರಂದು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಸುಟ್ಟ ಸ್ಥಿತಿಯಲ್ಲಿ ಶ್ರೀಧರ್ ಶವ ಪತ್ತೆಯಾಗಿತ್ತು.
ಬಸ್ - ಕಾರು(KSRTC Bus and Car) ಮುಖಾಮುಖಿ ಡಿಕ್ಕಿ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ರೆ, ಆಸ್ಪತ್ರೆಗೆ ಸಾಗಿಸೋ ಮಾರ್ಗಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತಪರಿಹಾರಕ್ಕೆ ಸಂಬಂಧಿಕರು ಆಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.