close

News WrapGet Handpicked Stories from our editors directly to your mailbox

ತಂಗ್‌ಧಾರ್ ಸೆಕ್ಟರ್‌ನಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಭಾರತೀಯ ಯೋಧರು ಹುತಾತ್ಮ

ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಪಾಕ್ ಸೇನೆ, ಭಾರತದ ಗಡಿಯೊಳಗೆ ಭಾರಿ ಗುಂಡಿನ ದಾಳಿ ಆರಂಭಿಸಿದ್ದು ರವಿವಾರ ಮುಂಜಾನೆ ನಾಲ್ಕು ಗಂಟೆಯ ವರೆಗೂ ಮುಂದುವರಿದಿದೆ ಎಂದು ವರದಿಯಾಗಿದೆ.  

Updated: Oct 20, 2019 , 10:37 AM IST
ತಂಗ್‌ಧಾರ್ ಸೆಕ್ಟರ್‌ನಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಭಾರತೀಯ ಯೋಧರು ಹುತಾತ್ಮ

ನವದೆಹಲಿ: ಜಮ್ಮು-ಕಾಶ್ಮೀರದ ಕುಪ್ವಾರಾದ ತಂಗ್‌ಧಾರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾನುವಾರ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋದರು ಹುತಾತ್ಮರಾಗಿದ್ದಾರೆ.

ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಪಾಕ್ ಸೇನೆ, ಭಾರತದ ಗಡಿಯೊಳಗೆ ಭಾರಿ ಗುಂಡಿನ ದಾಳಿ ಆರಂಭಿಸಿದ್ದು ರವಿವಾರ ಮುಂಜಾನೆ 4 ಗಂಟೆಯವರೆಗೂ ಮುಂದುವರಿದಿದೆ ಎಂದು ವರದಿಯಾಗಿದೆ.

ಗಡಿಯುದ್ದಕ್ಕೂ ಅಪ್ರಚೋದಿತ ಉಲ್ಲಂಘನೆಗೆ ಭಾರತೀಯ ಸೇನೆಯು ಬಲವಾಗಿ ಪ್ರತೀಕಾರ ತೀರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 13 ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣದ ಬಳಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯಲ್ಲಿ ಯೋಧನೊಬ್ಬ ಹುತಾತ್ಮನಾಗಿದ್ದನ್ನು ಇಲ್ಲಿ ಸ್ಮರಿಸಬಹುದು.