ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಉಗ್ರರು (Terrorist)ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಹಾಡುಹಗಲಲ್ಲೇ ಆತಂಕವಾದಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಇಂದು ಜಮ್ಮು ಕಾಶ್ಮೀರದ (Jammu Kashmir) ಮೂರು ಕಡೆಗಳಲ್ಲಿ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಉಗ್ರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂದು ಮುಂಜಾನೆ ಶೋಫಿಯಾದಲ್ಲೂ ಸುರಕ್ಷಾ ದಳ ಮತ್ತು ಆತಂಕವಾದಿಗಳ (Terrorist) ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. ಉಗ್ರ ಬಳಿಯಿದ್ದ ಬಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದಿವರೆದಿತ್ತು. ಇದೇ ವೇಳೆ ಈ ಘಟನೆಗೆ ಪ್ರತೀಕಾರವೆಂಬಂತೆ ಬಾರ್ಜುಲ್ಲಾದಲ್ಲಿ ಪೊಲೀಸ್ ತುಕಡಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಹಾಡುಹಗಲ್ಲೇ ಶಸ್ತ್ರಧಾರಿಗಳಾಗಿ ಬಂದಿದ್ದ ಆತಂಕವಾದಿಗಳು, ಬಾರ್ಜುಲ್ಲಾದಲ್ಲಿ ಅಂಗಡಿ ಬಳಿ ನಿಂತಿದ್ದ ಪೊಲೀಸರ ಮೇಲೆ ಗುಂಡಿನ (Firing) ಮಳೆಗರೆದಿದ್ದಾರೆ.
Jammu and Kashmir: Unidentified people fire bullets at security forces in Baghat Barzulla of Srinagar district in Kashmir. More details awaited.
(Visuals deferred by unspecified time) pic.twitter.com/wQUDW9zWBE
— ANI (@ANI) February 19, 2021
ಇದನ್ನೂ ಓದಿ : Senior Citizen: ಹಿರಿಯ ನಾಗರಿಕರಿಗೆ ಶಾಕಿಂಗ್ ನ್ಯೂಸ್: ಜುಲೈನಿಂದ ಟಿಡಿಎಸ್ ದರ ಹೆಚ್ಚಳ..!
ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುವ ವೇಳೆ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ಆದರೂ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳುವಲ್ಲಿ ಆತಂಕವಾದಿಗಳು ಯಶಸ್ವಿಯಾಗಿದ್ದಾರೆ. ಇನ್ನು ಸ್ಥಳದಲ್ಲಿದ್ದ ಯಾರೂ ಈ ಉಗ್ರರನ್ನು ಹಿಡಿಯುವ ಪ್ರಯತ್ನವನ್ನು ಕೂಡಾ ಮಾಡಲಿಲ್ಲ ಎನ್ನಲಾಗಿದೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.
#WATCH Terrorist opens fire in Baghat Barzulla of Srinagar district in Kashmir today
( CCTV footage from police sources) pic.twitter.com/FXYCvQkyAb
— ANI (@ANI) February 19, 2021
ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪೊಲೀಸರನ್ನು ಕೂಡಲೆ ಆಸ್ಪತ್ರೆಗೆ (Hospital) ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಬೆಳಗಿನ ಜಾವ, ಬಡಗಾಮ್ ನಲ್ಲೂ ಪೊಲೀಸರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು, ಈ ಘಟನೆಯಲ್ಲಿ ಒಬ್ಬ ಪೊಲೀಸ ಹುತಾತ್ಮರಾಗಿದ್ದಾರೆ. ಸ್ಥಳದಲ್ಲಿ ಹೈಅಲರ್ಟ್ (High alert) ಘೋಷಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಮತ್ತು ಸೇನೆ ಕಾರ್ಯಾಚರಣೆ ಆರಂಭಿಸಿದೆ.
ಇದನ್ನೂ ಓದಿ : Baba Ramdev: ಕೊರೊನಾ ನಿಗ್ರಹಕ್ಕೆ ಔಷಧಿ ಅಭಿವೃದ್ಧಿಪಡಿಸಿದ 'ಪತಂಜಲಿ'..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.