ಅಂತರಾಷ್ಟ್ರೀಯ ಮಾರ್ಗಕ್ಕೂ 'ಉಡಾನ್' ಲಗ್ಗೆ !

    

Last Updated : Aug 22, 2018, 07:02 PM IST
ಅಂತರಾಷ್ಟ್ರೀಯ ಮಾರ್ಗಕ್ಕೂ 'ಉಡಾನ್' ಲಗ್ಗೆ ! title=

ನವದೆಹಲಿ: ಕಡಿಮೆ ವೆಚ್ಚದಲ್ಲಿ ಇನ್ನು ಮುಂದೆ ವಿದೇಶ ಪ್ರವಾಸಕೈಗೊಳ್ಳುವ ಯಾತ್ರಿಕರಿಗೆ ಭಾರತ ಸರ್ಕಾರ ಹೊಸ ಯೋಜನೆಯನ್ನು ರೂಪಿಸುತ್ತಿದೆ.

ಈಗಾಗಲೇ ದೇಶಿಯ ಮಟ್ಟದಲ್ಲಿ ಕಡಿಮೆ ವೆಚ್ಚದ ವಿಮಾನಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಉಡಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈಗ ಇದೇ ಯೋಜನೆಯನ್ನೇ ಸರ್ಕಾರ ಅಂತರಾಷ್ಟ್ರೀಯ ಮಾರ್ಗಗಳಿಗೂ ಅನ್ವಯಿಸುವ ಕಾರ್ಯಕ್ಕ್ಕೆಮುಂದಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಒಟ್ಟು 8 ಮಾರ್ಗಗಳಿಗೆ ಈ ಯೋಜನೆಯನ್ನು ವಿಸ್ತರಿಸಲಿದೆ ಎಂದು ತಿಳಿದುಬಂದಿದೆ.

ಇವುಗಳಲ್ಲಿ ಪ್ರಮುಖವಾಗಿ ಢಾಕಾ, ಕಟ್ಮಂಡು, ಯಾಂಗೂನ್, ಕೌಲಾಲಂಪುರ, ಸಿಂಗಾಪುರ್, ಬ್ಯಾಂಕಾಂಕ್  ಮಾರ್ಗಗಳು  ಗೌಹಾತಿಯಿಂದ  ಇನ್ನುಳಿದ ಎರಡು ಮಾರ್ಗಗಳು ವಿಜಯವಾಡದಿಂದ ಸಿಂಗಾಪುರ್ ಮತ್ತು ದುಬೈಗೆ ಎಂದು ತಿಳಿದುಬಂದಿದೆ.

ಈ ವಿಚಾರವನ್ನು ವಿಮಾನಯಾನ ಸಚಿವ ಸುರೇಶ ಪ್ರಭು ಟ್ವೀಟ್ ಮೂಲಕ ತಿಳಿಸಿದ್ದಾರೆ.ಒಂದು ವೇಳೆ ಈ ಯೋಜನೆ ಜಾರಿಗೆ ಬಂದದ್ದೆ ಆದಲ್ಲಿ ವಿದೇಶಿ ಪ್ರವಾಸದ ಕನಸು ಕಾಣುತ್ತಿರುವವರಿಗೆ ಈ ಯೋಜನೆ ನಿಜಕ್ಕೂ ಸಂತಸದ ಸುದ್ದಿಯಾಗಲಿದೆ. 

Trending News