ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ ಸಾಧ್ಯತೆ!

ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray)  ಮಹಾರಾಷ್ಟ್ರದ(Maharashtra)  ಮುಖ್ಯಮಂತ್ರಿಯಾಗಬಹುದು ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಒಪ್ಪಂದದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ (Ajit Pawar) ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವ ನಿರೀಕ್ಷೆಯಿದ್ದು, ಜಯಂತ್ ಪಾಟೀಲ್ ಅವರಿಗೆ ಗೃಹ ಸಚಿವ ಸ್ಥಾನವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

Last Updated : Nov 11, 2019, 06:56 AM IST
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ ಸಾಧ್ಯತೆ! title=

ಮುಂಬೈ: ಮಹಾರಾಷ್ಟ್ರದ (Maharashtra) ರಾಜಕೀಯ ಅಸ್ಥಿರತೆ ಇನ್ನೇನು ಕೊನೆಯ ಹಂತಕ್ಕೆ ಬಂದು ತಲುಪಿದೆ.  ಸೋಮವಾರ ಶಿವಸೇನೆ ಸರ್ಕಾರ ರಚಿಸುವುದಾಗಿ ಹಕ್ಕು ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸರ್ಕಾರದಲ್ಲಿ ಎನ್‌ಸಿಪಿ ಸಹ ಪಾಲುದಾರನಾಗಲಿದೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್ ಬಾಹ್ಯ ಬೆಂಬಲ ವ್ಯಕ್ತಪಡಿಸುವ ನಿರೀಕ್ಷೆಯಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray)  ಮಹಾರಾಷ್ಟ್ರದ ಮುಖ್ಯಮಂತ್ರಿ(Maharashtra Chief Minister)ಯಾಗಬಹುದು ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಒಪ್ಪಂದದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ (Ajit Pawar) ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವ ನಿರೀಕ್ಷೆಯಿದ್ದು, ಜಯಂತ್ ಪಾಟೀಲ್ ಅವರಿಗೆ ಗೃಹ ಸಚಿವ ಸ್ಥಾನವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

ಈ ಸರ್ಕಾರವನ್ನು ಬೆಂಬಲಿಸಿದ ಪ್ರತಿಯಾಗಿ, ಕಾಂಗ್ರೆಸ್ಗೆ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ನೀಡಬಹುದು ಎನ್ನಲಾಗಿದೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಡುವಿನ ಸಂವಾದದಲ್ಲಿ ಸಂಪುಟದ ಸ್ವರೂಪವನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರೇ ಆಗಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ತಿಳಿಸಿರುವುದಾಗಿ ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರೌತ್ ಭಾನುವಾರ ಸಂಜೆ ಹೇಳಿದ್ದಾರೆ.

ಒಂದೊಮ್ಮೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ, ಠಾಕ್ರೆ ಕುಟುಂಬದ ಸದಸ್ಯರೊಬ್ಬರು ಸರ್ಕಾರದಲ್ಲಿ ಸ್ಥಾನ ಪಡೆಯುತ್ತಿರುವುದು ಇದೇ ಮೊದಲು. ವಾಸ್ತವವಾಗಿ, ಶಿವಸೇನೆ ಸಂಸ್ಥಾಪಕ ಬಾಲಾಸಾಹೇಬ್ ಠಾಕ್ರೆ ಅವರು ಮತ್ತು ಅವರ ಕುಟುಂಬದಿಂದ ಯಾರೂ ಸರ್ಕಾರಕ್ಕೆ ಸೇರುವುದಿಲ್ಲ ಎಂದಿದ್ದರು. ಆದರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಉದ್ಧವ್ ಅವರು ಆದಿತ್ಯ ಠಾಕ್ರೆ ಅವರನ್ನು ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಕುಟುಂಬದ ಈ ಸಂಪ್ರದಾಯವನ್ನು ಮುರಿದಿದ್ದಾರೆ.

ನೀವು ಸರ್ಕಾರ ರಚಿಸಲು ಸಮರ್ಥರಾಗಿದ್ದೀರಾ? ಶಿವಸೇನೆಗೆ ರಾಜ್ಯಪಾಲ ಕೊಶಿಯಾರಿ:
ಶಿವಸೇನೆ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಪಕ್ಷ  ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿಗೆ ಮಾಹಿತಿ ನೀಡಿದೆ. ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿದ್ದರಿಂದ ಸರ್ಕಾರ ರಚಿಸಲು ಬಿಜೆಪಿಗೆ ಮೊದಲ ಆಹ್ವಾನವನ್ನು ಕಳುಹಿಸಿದರು. ಬಿಜೆಪಿ ನಿರಾಕರಿಸಿದ ನಂತರ ರಾಜ್ಯಪಾಲ ಕೊಶ್ಯರಿ ಅವರು ಶಿವಸೇನೆ ಮುಖಂಡ ಏಕನಾಥ ಶಿಂಧೆ ಅವರನ್ನು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಾಮರ್ಥ್ಯ ಹೊಂದಿರುವಿರೇ ಎಂದು ಕೇಳಿದ್ದಾರೆ. ಶಿವಸೇನೆ ಸರ್ಕಾರ ರಚಿಸಲು ಬಯಸಿದರೆ ರಾಜ್ ಭವನಕ್ಕೆ ಮಾಹಿತಿ ನೀಡುವಂತೆ ರಾಜ್ಯಪಾಲರು ತಿಳಿಸಿದ್ದಾರೆ ಎನ್ನಲಾಗಿದೆ.

Trending News