Unlock-4: ಮೆಟ್ರೋದಲ್ಲಿ ಈಗ ಯಾವುದೇ ಟೋಕನ್ ಕೆಲಸ ಮಾಡಲ್ಲ, ತಿಳಿಯಿರಿ ಹೊಸ ನಿಯಮ

ದೇಶದಲ್ಲಿ ಪ್ರತಿದಿನ ಹೊಸ ದಾಖಲೆ ಬರೆಯುತ್ತಿರುವ ಕರೋನಾ ಸೋಂಕಿನ ಪ್ರಕರಣಗಳ ಮಧ್ಯೆ ದೆಹಲಿಯಲ್ಲಿ ಮೆಟ್ರೋ ಚಲಿಸಲು ಸರ್ಕಾರ ನಿರ್ಧರಿಸಿದೆ.

Last Updated : Aug 31, 2020, 10:50 AM IST
  • ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ
  • ಮೆಟ್ರೋದಲ್ಲಿ ಪ್ರಯಾಣಿಸಲು ಟೋಕನ್ ವ್ಯವಸ್ಥೆ ಕೊನೆಗೊಳಿಸಲಾಗಿದೆ.
  • ಸ್ಮಾರ್ಟ್ ಕಾರ್ಡ್‌ನೊಂದಿಗೆ ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತದೆ.
Unlock-4: ಮೆಟ್ರೋದಲ್ಲಿ ಈಗ ಯಾವುದೇ ಟೋಕನ್  ಕೆಲಸ ಮಾಡಲ್ಲ, ತಿಳಿಯಿರಿ ಹೊಸ ನಿಯಮ title=

ನವದೆಹಲಿ: ದೇಶದಲ್ಲಿ ಪ್ರತಿದಿನ ಹೊಸ ದಾಖಲೆ ಬರೆಯುತ್ತಿರುವ ಕರೋನಾ ಸೋಂಕಿನ ಪ್ರಕರಣಗಳ ಮಧ್ಯೆ ದೆಹಲಿಯಲ್ಲಿ ಮೆಟ್ರೋ (Dehli Metro) ಚಲಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ನೀವೂ ಸಹ ಮೆಟ್ರೋದಲ್ಲಿ ಪ್ರಯಾಣಿಸುವ ಬಗ್ಗೆ ಯೋಚಿಸುತ್ತಿದ್ದರೆ ಮೊದಲು ನೀವು ಈ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಬೇಕು.

ಮೆಟ್ರೊದಲ್ಲಿ ಪ್ರಯಾಣಿಸಲು ಮಾರ್ಗಸೂಚಿಗಳು:
1. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಲು ಹೆಚ್ಚಿನ ಟೋಕನ್‌ಗಳು ಲಭ್ಯವಿರುವುದಿಲ್ಲ. ಎಲ್ಲಾ ಪ್ರಯಾಣಿಕರು ಪ್ರಯಾಣಕ್ಕಾಗಿ ಮೆಟ್ರೋ ಕಾರ್ಡ್ ಪಡೆಯಬೇಕಾಗುತ್ತದೆ. ಟೋಕನ್‌ನಿಂದ ವೈರಸ್ ಹರಡುವ ಅಪಾಯವಿದೆ.
2. ಸ್ಮಾರ್ಟ್ ಕಾರ್ಡ್ ರೀಚಾರ್ಜ್, ಪಾವತಿಯನ್ನು ಸಹ ಡಿಜಿಟಲ್ ರೀತಿಯಲ್ಲಿ ಮಾಡಬಹುದು, ನಗದು ಕೆಲಸ ಮಾಡುವುದಿಲ್ಲ.
3. ಮೆಟ್ರೋ ನಿಲ್ದಾಣ ಮತ್ತು ಕೋಚ್ ಒಳಗೆ ಮಾಸ್ಕ್ ಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ, ಇಲ್ಲದಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.
4. ಪ್ರಯಾಣಿಕರು ಪರಸ್ಪರ 1 ಮೀಟರ್ ದೂರದಲ್ಲಿರಬೇಕು.
5. ಮೆಟ್ರೋ ಕೋಚ್ ಒಳಗೆ ಎಸಿಯ ತಾಪಮಾನವನ್ನು ನಿಯಮಿತವಾಗಿ ನಿಯಂತ್ರಿಸಲಾಗುತ್ತದೆ.
6. ಎಲ್ಲಾ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲುವುದಿಲ್ಲ, ಮೆಟ್ರೋವನ್ನು ಆಯ್ದ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಲಾಗುತ್ತದೆ, ಕಂಟ್ರೋನ್‌ಮೆಂಟ್ ವಲಯ ಮತ್ತು ಮುಚ್ಚಿದ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲುವುದಿಲ್ಲ.
7. ಮೆಟ್ರೋ ಬೋಗಿಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಇದರಿಂದ ಜನಸಮೂಹ ಸೇರುವುದನ್ನು ತಪ್ಪಿಸಬಹುದು.
8. ಮೆಟ್ರೋ ಕೋಚ್ ಒಳಗೆ ಆಸನ ವ್ಯವಸ್ಥೆ ಇರುತ್ತದೆ.
9. ಮೆಟ್ರೋ ನಿಲ್ದಾಣದ ಹೊರಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜರ್ ಮಾಡುವ ವ್ಯವಸ್ಥೆ ಇರುತ್ತದೆ, ಪ್ರಯಾಣಿಕರ ಉಷ್ಣತೆಯು ಅಧಿಕವಾಗಿದ್ದರೆ, ಅವರಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ.
10. ಮೆಟ್ರೋ ನಿಲ್ದಾಣಗಳಲ್ಲಿ ಸಾಮಾಜಿಕ ದೂರವಿರಲು ಗುರುತು ಹಾಕಲಾಗುವುದು, ಇದರಿಂದಾಗಿ ಸರದಿಯಲ್ಲಿ ನಿಂತಿರುವ ಜನರ ನಡುವಿನ ಅಂತರವು ಉಳಿಯುತ್ತದೆ.

ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ ಸೆ.1 ರಿಂದ ಬದಲಾಗಲಿರುವ ಈ ನಿಯಮಗಳು

ದೆಹಲಿ ಮೆಟ್ರೋದ ಸೇವೆಗಳು ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುತ್ತಿವೆ. ಆದ್ದರಿಂದ ಪ್ರಯಾಣಿಸುವ ಮೊದಲು, ರೈಲು ನಿಲ್ಲುತ್ತದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೇಹದ ತಾಪಮಾನ ಹೆಚ್ಚಿದ್ದರೆ ಅಂದರೆ ಜ್ವರ ಇರುವವರಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ.

Trending News