ನವದೆಹಲಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆ (Unnao case) ಹತ್ಯೆಗೆ ಸಂಬಂಧಿಸಿದಂತೆ ಕುಲ್ದೀಪ್ ಸಿಂಗ್ ಸೆಂಗಾರ್(Kuldeep singh sengar) ಸೇರಿದಂತೆ 7 ಆರೋಪಿಗಳಿಗೆ ದೆಹಲಿ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಎಲ್ಲಾ ಆರೋಪಿಗಳಿಗೆ 10 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ.
ಇದಕ್ಕೂ ಮುನ್ನ ಗುರುವಾರ, ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ವಿಧಿಸಲು ನ್ಯಾಯಾಲಯವು ತನ್ನ ಆದೇಶವನ್ನು ಮಾರ್ಚ್ 13 ರವರೆಗೆ ಕಾಯ್ದಿರಿಸಿತ್ತು. ಗುರುವಾರ ನಡೆದ ವಿಚಾರಣೆಯ ವೇಳೆ ಸಿಬಿಐ ಏಳು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿತ್ತು.
ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ, "ಮುಗ್ಧ ವ್ಯಕ್ತಿಯನ್ನು ಹೊಡೆದು ಸಾಯಿಸಿದ ಕಾರಣ ಅವರಿಗೆ ಗರಿಷ್ಠ ಶಿಕ್ಷೆ ನೀಡಬೇಕು. ಅವರು ಘೋರ ಅಪರಾಧ ಮಾಡಿದ್ದಾರೆ" ಎಂದು ಹೇಳಿದರು. ಅದೇ ಸಮಯದಲ್ಲಿ, ಅಪರಾಧಿಗಳಿಗೆ ಶಿಕ್ಷೆ ಕಡಿಮೆ ಮಾಡುವಂತೆ ಅವರ ಪರ ವಕೀಲರು ವಿನಂತಿಸಿದರು.
ಈ ಪ್ರಕರಣವು 9 ಏಪ್ರಿಲ್ 2018 ರಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದೆ. ಇದರಲ್ಲಿ ಸೆಂಗಾರ್ ಮತ್ತು ಅವರ ಸಹೋದರ ಸೇರಿದಂತೆ ಏಳು ಮಂದಿ ಶಿಕ್ಷೆಗೊಳಗಾಗಿದ್ದಾರೆ. 2017 ರಲ್ಲಿ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಮೃತ ವ್ಯಕ್ತಿಯ ಮಗಳ ಮೇಲೆ ಸೆಂಗಾರ್ ಅತ್ಯಾಚಾರ ಎಸಗಿದ್ದು, ಕಳೆದ ವರ್ಷ ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು.