UP Elections 2022: ಫೆಬ್ರುವರಿ 10 ರಿಂದ ಮಾರ್ಚ್ 7ರವರೆಗೆ Exit Poll ಗಳ ಮೇಲೆ ಚುನಾವಣಾ ಆಯೋಗದ ನಿರ್ಬಂಧ

UP Assembly Elections 2022: ರಾಜಕೀಯವಾಗಿ ಸಾಕಷ್ಟು ಮಹತ್ವ ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10ರಂದು ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ  ಸುದ್ದಿ ವಾಹಿನಿಗಳಲ್ಲಿ ತೋರಿಸಲಾಗುತ್ತಿರುವ ಅಭಿಪ್ರಾಯ ಸಂಗ್ರಹಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿ ಅವುಗಳನ್ನು ನಿಲ್ಲಿಸುವಂತೆ ಸಮಾಜವಾದಿ ಪಕ್ಷ ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. 

Written by - Nitin Tabib | Last Updated : Jan 29, 2022, 09:58 PM IST
  • ಉತ್ತರ ಪ್ರದೇಶ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್ ಗಳ ಮೇಲೆ ನಿಷೇಧ
  • ಈ ನಿಷೇಧ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಜಾರಿಯಲ್ಲಿರಲಿದೆ.
  • ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
UP Elections 2022: ಫೆಬ್ರುವರಿ 10 ರಿಂದ ಮಾರ್ಚ್ 7ರವರೆಗೆ Exit Poll ಗಳ ಮೇಲೆ ಚುನಾವಣಾ ಆಯೋಗದ ನಿರ್ಬಂಧ title=
UP Assembly Elections 2022 (File Photo)

ECI Ban On Exit Poll 2022 - ಶನಿವಾರ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗವು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು Exit Polls ಸಮೀಕ್ಷೆಗಳನ್ನು (Exit Polls In UP Elections) ನಿಷೇಧಿಸಿ ಆದೇಶ ಹೊರಡಿಸಿದೆ. ಆಯೋಗ ವಿಧಿಸಿರುವ ಈ ನಿಷೇಧ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಜಾರಿಯಲ್ಲಿರಲಿದೆ. ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (CEO) ಅಜಯ್ ಕುಮಾರ್ ಶುಕ್ಲಾ ಅವರು ಹೊರಡಿಸಿದ ಹೇಳಿಕೆಯಲ್ಲಿ, ಫೆಬ್ರವರಿ 10 ರಂದು ಬೆಳಿಗ್ಗೆ 7 ರಿಂದ ಮಾರ್ಚ್ 7 ರ ಸಂಜೆ 6.30 ರವರೆಗೆ ಯುಪಿ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಗಳನ್ನು ( Exit Poll Banned) ನಿಷೇಧಿಸಲಾಗುವುದು ಎಂದು ಹೇಳಲಾಗಿದೆ.

ಈ ಅವಧಿಯಲ್ಲಿ ಎಕ್ಸಿಟ್ ಪೋಲ್‌ಗಳನ್ನು ಪ್ರಿಂಟ್ ಮಾಧ್ಯಮದ ಮೂಲಕವೆ ಆಗಲಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕವೇ ಆಗಲಿ ಅವುಗಳನ್ನು ಪ್ರಸಾರ ಮಾಡಲು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ನಿಯಮವನ್ನು ಪಾಲಿಸದಿರುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯ ಜೊತೆಗೆ ಭಾರಿ ದಂಡ ಕೂಡ ಬೀಳಲಿದೆ.

ಇದನ್ನ ಓದಿ-ADR Report: ಶ್ರೀಮಂತ ಪಕ್ಷವಾಗುತ್ತಿರುವ ಬಿಜೆಪಿ; ಯಾವ ಪಕ್ಷಕ್ಕೆ ಎಷ್ಟು ಆಸ್ತಿ ಇದೆ ಗೊತ್ತಾ?

ರಾಜಕೀಯವಾಗಿ ಸಾಕಷ್ಟು ಮಹತ್ವ ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10ರಂದು ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ-Retirement Planning : ಸರ್ಕಾರದಿಂದ ವಿವಾಹಿತ ದಂಪತಿಗಳಿಗೆ ಸಿಗಲಿದೆ ಮಾಸಿಕ ₹10 ಸಾವಿರ : ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ! 

Opinion Polls ಗಳನ್ನು ಸ್ಥಗಿತಗೊಳಿಸುವಂತೆ SP ಮನವಿ ಮಾಡಿತ್ತು
ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಂಗ್ರಹಗಳನ್ನು ನಿಲ್ಲಿಸುವಂತೆ ಸಮಾಜವಾದಿ ಪಕ್ಷ (SP) ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಎಸ್‌ಪಿ ಅಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಅವರು ಜನವರಿ 23 ರಂದು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ವಿವಿಧ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅಭಿಪ್ರಾಯ ಸಂಗ್ರಹಗಳ ಪ್ರಸಾರವನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Pension Scheme : ಈಗ ಕಾರ್ಮಿಕರಿಗೂ ಸಿಗಲಿದೆ ಪಿಂಚಣಿ! ಸರ್ಕಾರದ ಯೋಜನೆಯಲ್ಲಿ ₹2 ಠೇವಣಿ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News