ನೂತನವಾಗಿ ರಚಿಸಿರುವ ಸಹಕಾರ ಸಚಿವಾಲಯದ ಬಗ್ಗೆ ಶರದ್ ಪವಾರ್ ಕಳವಳ

ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು.

Written by - Zee Kannada News Desk | Last Updated : Jul 17, 2021, 03:54 PM IST
  • ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
  • ಸುಮಾರು 50 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ಹೊಸದಾಗಿ ರೂಪುಗೊಂಡ ಸಹಕಾರ ಸಚಿವಾಲಯ ಮತ್ತು ರೈತರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ.
ನೂತನವಾಗಿ ರಚಿಸಿರುವ ಸಹಕಾರ ಸಚಿವಾಲಯದ ಬಗ್ಗೆ ಶರದ್ ಪವಾರ್ ಕಳವಳ  title=
Photo Courtesy: Twitter

ನವದೆಹಲಿ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು.

ಸುಮಾರು 50 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ಹೊಸದಾಗಿ ರೂಪುಗೊಂಡ ಸಹಕಾರ ಸಚಿವಾಲಯ ಮತ್ತು ರೈತರ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಎನ್‌ಸಿಪಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Param Bir Sing Letter Controversy- ರಾಜೀನಾಮೆ ನೀಡುತ್ತಾರೆಯೇ ಅನಿಲ್ ದೇಶ್ಮುಖ್? ಶರದ್ ಪವಾರ್ ಹೇಳಿದ್ದೇನು?

'ರಾಜ್ಯಸಭಾ ಸಂಸದ ಶ್ರೀ ಶರದ್ ಪವಾರ್ (Sharad Pawar) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು" ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

ಪಿಎಂ ಮೋದಿಯವರನ್ನು ಭೇಟಿಯಾಗುವುದರ ಹೊರತಾಗಿ, 80 ವರ್ಷದ ಶ್ರೀ ಪವಾರ್ ಅವರು ಇಂದು ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಸಹಕಾರ ಸಚಿವಾಲಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರವು ರಾಜ್ಯ ವಿಷಯವಾಗಿದೆ ಈ ವಿಚಾರದಲ್ಲಿ ಕೇಂದ್ರದ ಯಾವುದೇ ಹಸ್ತಕ್ಷೇಪದ ಪ್ರಯತ್ನವು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪರ್ಯಾಯ ರಂಗದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗೆ ಇಡುವುದು ಅಸಾಧ್ಯ-ಶರದ್ ಪವಾರ್

ಈ ವಾರದ ಆರಂಭದಲ್ಲಿ, ರಾಜ್ಯಸಭಾ ಸದಸ್ಯ ಪವಾರ್ ಪಿಎಂ ಮೋದಿಯವರ ಸಂಪುಟದ ಮೆಗಾ ಪುನರ್ರಚನೆಗೆ ಒಂದು ದಿನ ಮೊದಲು ಹೊಸ ಸಹಕಾರ ಸಚಿವಾಲಯದ ರಚನೆ ಕುರಿತು ಪ್ರತಿಕ್ರಿಯಿಸಿದ್ದರು.ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಕಾನೂನು ರೂಪಿಸಲಾಗಿದೆ ಮತ್ತು ರಾಜ್ಯವು ರಚಿಸಿದ ಶಾಸನಗಳಲ್ಲಿ ಹಸ್ತಕ್ಷೇಪ ಮಾಡಲು ಕೇಂದ್ರಕ್ಕೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದರು.

ಈ ವಾರದ ಆರಂಭದಲ್ಲಿ ಪವಾರ್ ಅವರು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗುವುದನ್ನು ನಿರಾಕರಿಸಿದರು "ನಾನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಎಂದು ಹೇಳುವುದು ತಪ್ಪು, 2024 ರ ಚುನಾವಣೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ರಾಜಕೀಯ ಪರಿಸ್ಥಿತಿ ಬದಲಾಗುತ್ತಲೇ ಇದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ನಾವು ತೃತೀಯ ರಂಗದ ಸಭೆ ನಡೆಸುತ್ತಿಲ್ಲ -ಶರದ್ ಪವಾರ್ ಸ್ಪಷ್ಟನೆ

ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯಸಭೆಯ ಹೊಸದಾಗಿ ನೇಮಕಗೊಂಡ ನಾಯಕ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ನಡೆಸಿದ ಸಭೆಯಲ್ಲಿ ಶರದ್ ಪವಾರ್ ಭಾಗವಹಿಸಿದ್ದರು.ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಕೂಡ ಇದಕ್ಕೆ ಹಾಜರಿದ್ದರು.

ಇದನ್ನೂ ಓದಿ-Rape ಅಲ್ಲ Relationship ಎಂದ 'ಮಹಾ' ಸಚಿವನ ಬಗ್ಗೆ ಶರದ್ ಪವಾರ್ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News