ಉ.ಪ್ರದೇಶ ಕೋರ್ಟ್ ನಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಮೇಲೆ ದೂರು

 ಫೇಸ್ಬುಕ್ ತನ್ನ ಸೈಟ್ ನಲ್ಲಿ ಯಾವುದೇ ಅನುಮತಿಯಿಲ್ಲದೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಲೆಟರ್ ಹೆಡ್ ಮತ್ತು ರಾಷ್ಟ್ರೀಯ ಚಿನ್ಹೆಗಳನ್ನು ಬಳಸಿದ್ದಕ್ಕೆ ಈಗ ಅದರ ಸಂಸ್ಥಾಪಕ ಮಾರ್ಕ್ ಜ್ಯೂಕರ್ಬರ್ಗ್ ಮೇಲೆ ಉತ್ತರ ಪ್ರದೇಶದ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.

Last Updated : Oct 18, 2018, 04:10 PM IST
ಉ.ಪ್ರದೇಶ ಕೋರ್ಟ್ ನಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್ ಬರ್ಗ್ ಮೇಲೆ ದೂರು  title=

ಲಖನೌ:  ಫೇಸ್ಬುಕ್ ತನ್ನ ಸೈಟ್ ನಲ್ಲಿ ಯಾವುದೇ ಅನುಮತಿಯಿಲ್ಲದೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರ ಲೆಟರ್ ಹೆಡ್ ಮತ್ತು ರಾಷ್ಟ್ರೀಯ ಚಿನ್ಹೆಗಳನ್ನು ಬಳಸಿದ್ದಕ್ಕೆ ಈಗ ಅದರ ಸಂಸ್ಥಾಪಕ ಮಾರ್ಕ್ ಜ್ಯೂಕರ್ಬರ್ಗ್ ಮೇಲೆ ಉತ್ತರ ಪ್ರದೇಶದ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ನ್ಯಾಯಾಲಯದ ವಿಚಾರಣೆ ನವೆಂಬರ್ 12 ರಂದು ನಡೆಯಲಿದೆ ಎಂದು ಮುಖ್ಯ ನ್ಯಾಯಾಧೀಶ ಮ್ಯಾಜಿಸ್ಟ್ರೇಟ್ ಆನಂದ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.ಆಗ ಅರ್ಜಿದಾರರ ವಕೀಲ ಓಂಕಾರ್ ಅವರ ಹೇಳಿಕೆ ದಾಖಲಿಸಲಾಗುವುದು ಎಂದು ಹೇಳಲಾಗಿದೆ. ಫೇಸ್ಬುಕ್ ಸಿಒಒ ಶೆರಿಲ್ ಸ್ಯಾಂಡ್ಬರ್ಗ್, ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್, ಫೇಸ್ಬುಕ್ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ ಅವರ ಹೆಸರುಗಳನ್ನು ಸಹಿತ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ

ಫೇಸ್ ಬುಕ್ ಅನುಮತಿಯಿಲ್ಲದೆ ಕೆಲವು ರಾಷ್ಟ್ರೀಯ ಚಿಹ್ನೆಗಳನ್ನು ಬಳಸುವ ಅಪ್ಲಿಕೇಶನ್ ನ್ನು ನಡೆಸುತ್ತಿದೆ ಎಂದು ಅರ್ಜಿದಾರರು ಮತ್ತಷ್ಟು ಆರೋಪಿಸಿದ್ದಾರೆ.ಇದಕ್ಕೆ ಸ್ಕ್ರೀನ್ ಶಾಟ್ ಗಳನ್ನು ಪುರಾವೆಯಾಗಿ ಸಲ್ಲಿಸಿದ್ದಾರೆ.

ಫೇಸ್ ಬುಕ್ ಇಂತಹ ಕೃತ್ಯದ ಮೂಲಕ ಸಂಕೇತಗಳನ್ನು ಬಳಸುವುದರೊಂದಿಗೆ ಅಗ್ಗದ ಜನಪ್ರಿಯತೆಯನ್ನು ಪಡೆಯುತ್ತಿರುವುದಲ್ಲದೆ ಸಾಕಷ್ಟು ಹಣವನ್ನು ಗಳಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ .

Trending News