Viral News: ₹400 ದುಡಿಯುವ ದಿನಗೂಲಿಗೆ 14 ಕೋಟಿ ತೆರಿಗೆ ಕಟ್ಟುವಂತೆ ಐಟಿ ಅಧಿಕಾರಿಗಳ ನೋಟಿಸ್!

ಬ್ಯಾಂಕ್ ದಾಖಲೆಗಳ ಪ್ರಕಾರ ಮನೋಜ್ ಯಾದವ್ ಹೆಸರಿನಲ್ಲಿ ಅನೇಕ ಕಂಪನಿಗಳ ವ್ಯಹವಾರ ನಡೆಯುತ್ತಿವೆಯಂತೆ. ಹೀಗಾಗಿ ಅವುಗಳ ಒಟ್ಟು 14 ಕೋಟಿ ರೂ. ತೆರಿಗೆ ಹಣ ಬಾಕಿ ಇದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಕೇಳಿ ಮನೋಜ್‍ ಮತ್ತು ಆತನ ಕುಟುಂಬಸ್ಥರಿಗೆ ದಿಗ್ಭ್ರಮೆಯಾಗಿದೆ.  

Written by - Puttaraj K Alur | Last Updated : Dec 20, 2022, 09:39 PM IST
  • 400 ರೂ. ದುಡಿಯುವ ದಿನಗೂಲಿಯ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ
  • ಬಾಕಿ ಇರುವ 14 ಕೋಟಿ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ
  • ದಿನಗೂಲಿ ವ್ಯಕ್ತಿಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವ ಅನೇಕ ಕಂಪನಿಗಳು
Viral News: ₹400 ದುಡಿಯುವ ದಿನಗೂಲಿಗೆ 14 ಕೋಟಿ ತೆರಿಗೆ ಕಟ್ಟುವಂತೆ ಐಟಿ ಅಧಿಕಾರಿಗಳ ನೋಟಿಸ್!  title=
ದಿನಗೂಲಿ ನೌಕರನ ಮನೆ ಮೇಲೆ ಐಟಿ ದಾಳಿ!

ನವದೆಹಲಿ: ಕೋಟ್ಯಧಿಪತಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡುವುದು ಮತ್ತು ನೋಟಿಸ್ ಜಾರಿ ಮಾಡುವುದನ್ನು ನೀವು ಕೇಳಿದ್ದೀರಿ. ಆದರೆ ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದಿನಕ್ಕೆ 400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ಅಧಿಕಾರಿಗಳು 14 ಕೋಟಿ ರೂ. ರಿಟರ್ನ್ಸ್ ಬಾಕಿ ಅಂತಾ ನೋಟಿಸ್ ನೀಡಿದ್ದಾರೆ.

ಐಟಿ ಅಧಿಕಾರಿಗಳ ನೋಟಿಸ್ ನೋಡಿ ದಿನಗೂಲಿ ನೌಕರ ಹೌಹಾರಿದ್ದಾನೆ. ಬಿಹಾರದ ರೋಹ್ಟಸ್ ಜಿಲ್ಲೆಯ ಕರ್ಗರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮನೋಜ್ ಯಾದವ್ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದಾನೆ. ಈತನ ಮನೆ ಮೇಲೆ ದಿಢೀರ್ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು, ಆತನಿಗೆ 14 ಕೋಟಿ ರೂ. ರಿಟರ್ನ್ಸ್​ ಬಾಕಿ ಇದೆ ಪಾವತಿಸು ಎಂದು ನೋಟಿಸ್ ಕೊಟ್ಟಿದ್ದಾರೆ.

ಇದನ್ನೂ ಓದಿWATCH: ಯುನಿಫಾರ್ಮ್ ನಲ್ಲಿಯೇ ಭರ್ಜರಿ ಡ್ಯಾನ್ಸ್ ಮಾಡಿದ ಪೋಲಿಸ್ ಅಧಿಕಾರಿ...ನೆಟಿಜನ್ಸ್ ಎನ್ ಅಂದ್ರು..!

ದೊಡ್ಡ ಮೊತ್ತದ ಐಟಿ ರಿಟರ್ನ್ಸ್ ಬಾಕಿ ಪಾವತಿಸುವಂತೆ ಹೇಳಿದ ಐಟಿ ಅಧಿಕಾರಿಗಳ ನಡೆಯಿಂದ ಮನೋಜ್ ಯಾದವ್, ಆತನ ಕುಟುಂಬಸ್ಥರು ಮತ್ತು ಊರಿನವರಿಗೆ ಶಾಕ್ ಆಗಿದೆ. ನನ್ನಲ್ಲಿರುವ ಎಲ್ಲಾ ಆಸ್ತಿ ಮಾರಿದ್ರೂ ಲಕ್ಷ ದಾಟಲ್ಲ. ಇನ್ನೆಲ್ಲಿಂದ ನಾನು 14 ಕೋಟಿ ರೂ. ಐಟಿ ರಿಟರ್ನ್ಸ್ ಪಾವತಿಸಬೇಕು ಅಂತಾ ಮನೋಜ್ ಯಾದವ್ ಆತಂಕದಿಂದಲೇ ಪ್ರಶ್ನಿಸಿದ್ದಾರೆ.

ಆದರೆ ಮನೋಜ್ ಯಾದವ್ ತನ್ನ ಪರಿಸ್ಥಿತಿಯ ಬಗ್ಗೆ ಹೇಳಿದರೂ ಐಟಿ ಅಧಿಕಾರಿಗಳು ನಂಬಿಲ್ಲ. ಹೀಗಾಗಿ ನೀವು 14 ಕೋಟಿ ರೂ. ಐಟಿ ರಿಟರ್ನ್ಸ್ ಪಾವತಿಸಲೇಬೇಕು ಅಂತಾ ಪಟ್ಟು ಹಿಡಿದ್ದಾರಂತೆ. ಬ್ಯಾಂಕ್ ದಾಖಲೆಗಳ ಪ್ರಕಾರ ಮನೋಜ್ ಯಾದವ್ ಹೆಸರಿನಲ್ಲಿ ಅನೇಕ ಕಂಪನಿಗಳ ವ್ಯಹವಾರ  ನಡೆಯುತ್ತಿವೆಯಂತೆ. ಹೀಗಾಗಿ ಅವುಗಳ ಒಟ್ಟು 14 ಕೋಟಿ ರೂ. ತೆರಿಗೆ ಹಣ ಬಾಕಿ ಇದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಇದನ್ನು ಕೇಳಿ ಮನೋಜ್‍ ಮತ್ತು ಆತನ ಕುಟುಂಬಸ್ಥರಿಗೆ ದಿಗ್ಭ್ರಮೆಯಾಗಿದೆ.  

ಇದನ್ನೂ ಓದಿ: Bank Holidays, January 2023: ಜನವರಿಯಲ್ಲಿ 14 ದಿನಗಳ ಕಾಲ ಬ್ಯಾಂಕ್ ಗಳು ಬಂದ್..!

ಈ ಹಿಂದೆ ಮನೋಜ್ ಯಾದವ್ ದೆಹಲಿ, ಹರಿಯಾಣ ಹಾಗೂ ಪಂಜಾಬ್‍ನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದನಂತೆ. ಕೊರೊನಾ ಲಾಕ್​ಡೌನ್​ ಹಿನ್ನೆಲೆ 2020ರಲ್ಲಿ ಬಿಹಾರಕ್ಕೆ ಮರಳಿ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನಂತೆ. ತಾನು ಹಿಂದೆ ಕೆಲಸ ಮಾಡಿದ್ದ ಕಂಪನಿಗಳ ಅಧಿಕಾರಿಗಳು ನನ್ನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿರಬಹುದು. ಕೆಲಸಕ್ಕೆ ಸೇರುವ ವೇಳೆ ಕಂಪನಿಯವರು ನನ್ನ ಪಾನ್ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಪಡೆದಿದ್ದರು ಅಂತಾ ಮನೋಜ್ ಹೇಳಿದ್ದಾನಂತೆ.

ಇದೀಗ ಐಟಿ ಅಧಿಕಾರಿಗಳು 14 ಕೋಟಿ ರೂ. ಐಟಿ ರಿಟರ್ನ್ಸ್ ಪಾವತಿಸುವಂತೆ ಕೇಳುತ್ತಿರುವುದರಿಂದ ಮನೋಜ್‍ಗೆ ದಿಕ್ಕು ತೋಚದಂತಾಗಿದೆ. ಹೀಗಾಗಿ ಮುಂದೆ ಏನು ಮಾಡಬೇಕು ಅನ್ನೋದು ಆತನಿಗೆ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡು ಅಂತಾ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಮನೋಜ್‍ಗೆ ಧೈರ್ಯ ತುಂಬಿದ್ದಾರಂತೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News