Uttarakhand CM: ಉತ್ತರಾಖಂಡ್ ಮುಖ್ಯಮಂತ್ರಿ 'ತ್ರಿವೇಂದ್ರ ಸಿಂಗ್ ರಾವತ್' ಸಿಎಂ ಸ್ಥಾನಕ್ಕೆ ರಾಜೀನಾಮೆ!

ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿರುವಂತ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Last Updated : Mar 9, 2021, 05:03 PM IST
  • ಉತ್ತರಾಖಂಡ್ ರಾಜ್ಯದಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಸ್ಪೋಟಗೊಂಡಿದೆ.
  • ನಿನ್ನೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯ ಬಳಿಕ,
  • ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿರುವಂತ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Uttarakhand CM: ಉತ್ತರಾಖಂಡ್ ಮುಖ್ಯಮಂತ್ರಿ 'ತ್ರಿವೇಂದ್ರ ಸಿಂಗ್ ರಾವತ್' ಸಿಎಂ ಸ್ಥಾನಕ್ಕೆ ರಾಜೀನಾಮೆ! title=

ಉತ್ತರಾಖಂಡ್: ರಾಜ್ಯದಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಸ್ಪೋಟಗೊಂಡಿದೆ. ನಿನ್ನೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯ ಬಳಿಕ, ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿರುವಂತ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ ನಾಯಕ ತ್ರಿವೇಂದ್ರ ಸಿಂಗ್ ರಾವತ್(Trivendra Singh Rawat) ಮಂಗಳವಾರ ರಾಜೀನಾಮೆ ನೀಡಿದ್ದಾರೆ. 2017ರ ಆರಂಭದಲ್ಲಿ ಬಿಜೆಪಿ ಗೆಲುವು ಪಡೆದ ನಂತರ ಸಿಎಂ ಆದ ರಾವತ್, ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ.

ಫಿಟ್ ಆಗಿರಲು Pushups ಮಾಡಿದ Tiger, ನಂಬಿಕೆ ಇಲ್ಲ ಅಂದ್ರೆ ನೀವೇ ನೋಡಿ ಈ ವೈರಲ್ ವೀಡಿಯೊ

ರಾವತ್ ಅವರು ತಮ್ಮ 'ಆಡಳಿತ ವೈಖರಿ' ಬಗ್ಗೆ ಉತ್ತರಾಖಂಡ್ ನ ಬಿಜೆಪಿ(BJP) ಶಾಸಕರ ಒಂದು ವರ್ಗದೂರು ಗಳ ನಡುವೆ ದೆಹಲಿಯಲ್ಲಿ ಸೋಮವಾರ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿದರು. ಮಂಗಳವಾರ ಬೆಳಗ್ಗೆ ರಾಜ್ಯ ರಾಜಧಾನಿ ಡೆಹ್ರಾಡೂನ್ ಗೆ ಮರಳಿದ ಅವರನ್ನು ಅವರ ಬೆಂಬಲಿಗರು ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನಾಯಕ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್ ನಿನ್ನೆ ಭೇಟಿಯಾಗಿದ್ದರು.

Kisan Samman : ಶೀಘ್ರದಲ್ಲೇ ರಿಲೀಸ್ ಆಗಲಿದೆ ಕಿಸಾನ್ ಸಮ್ಮಾನ್ ಯೋಜನೆಯ ದುಡ್ಡು.!

ಆದರೆ, ರಾವತ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂದು ಬಿಜೆಪಿಯ ರಾಜ್ಯ ಘಟಕ ನಿರಾಕರಿಸಿತ್ತು. 'ಸಿಎಂ ಸ್ಥಾನ ಪಲ್ಲಟದ ವರದಿಗಳು ತಪ್ಪು. ಅವರು ರಾಜ್ಯದ ಸಿಎಂ(CM) ಆಗಲಿದ್ದು, 2022ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ' ಎಂದು ಹೇಳಿರುವ ಪಕ್ಷದ ಅಧ್ಯಕ್ಷ ಬನ್ಸಿಧರ್ ಭಗತ್, ಮಾರ್ಚ್ 18ರಂದು ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸಿದ್ಧತೆಗಳ ಬಗ್ಗೆ ಚರ್ಚಿಸಲು ರಾವತ್ ದೆಹಲಿಗೆ ತೆರಳಿದ್ದಾರೆ ಎಂದು ಹೇಳಿದರು.

HAL Recruitment 2021: HALನಲ್ಲಿ ಬಂಪರ್ ಉದ್ಯೋಗಾವಕಾಶ, ಶೀಘ್ರದಲ್ಲೇ ಅಪ್ಲೈ ಮಾಡಿ

ಈ ಎಲ್ಲರ ನಡುವೆ, ಇಂದು ರಾಜ್ಯಪಾಲೆ ಬೇಬಿ ರಾಣಿ ಮೌರ್ಯ(Baby Rani Maurya) ಅವರನ್ನು ಭೇಟಿಯಾದಂತ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಈಗ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Petrol-Diesel Price Hike ಚಿಂತೆ ಬಿಡಿ, ಬರಲಿದೆ ಹೊಸ ರೀತಿಯ ಪೆಟ್ರೋಲ್ E20! ಇದರ ಲಾಭ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News