ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ, 75 ಸಾವಿರ ವೇತನದ ಹುದ್ದೆ, ಪರೀಕ್ಷೆ ಬರೆಯುವ ಅಗತ್ಯವೂ ಇಲ್ಲ..!

ದಕ್ಷಿಣ ರೈಲ್ವೆಯು  ಹಲವು ಹುದ್ದೆಗಳ ನೇಮಕಕ್ಕೆ  ಅಧಿಸೂಚನೆ ಜಾರಿ ಮಾಡಿದೆ. ರೈಲ್ವೆಯ ಡಾಕ್ಟರ್ಸ್ ಮತ್ತು ನರ್ಸಿಂಗ್ ಸ್ಟಾಫ್ ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದೆ.   

Written by - Ranjitha R K | Last Updated : May 12, 2021, 06:03 PM IST
  • ಕರೋನಾ ಕಾಲದಲ್ಲಿ ದಕ್ಷಿಣ ರೈಲ್ವೆಯಲ್ಲಿ ಹುದ್ದೆಗಳಿಗೆ ನೇಮಕಾತಿ
  • ಮೇ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • ರೈಲ್ವೆಯ ಅಧಿಕೃತ ವೆಬ್ ಸೈಟಿನಲ್ಲಿ ವಿವರ ಲಭ್ಯ
ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ, 75 ಸಾವಿರ ವೇತನದ ಹುದ್ದೆ, ಪರೀಕ್ಷೆ ಬರೆಯುವ ಅಗತ್ಯವೂ ಇಲ್ಲ..! title=
ಮೇ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (file photo)

ನವದೆಹಲಿ : ದಕ್ಷಿಣ ರೈಲ್ವೆಯು (Railway) ಹಲವು ಹುದ್ದೆಗಳ ನೇಮಕಕ್ಕೆ  ಅಧಿಸೂಚನೆ ಜಾರಿ ಮಾಡಿದೆ. ರೈಲ್ವೆಯ ಡಾಕ್ಟರ್ಸ್ ಮತ್ತು ನರ್ಸಿಂಗ್ ಸ್ಟಾಫ್ ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದೆ.  ಇದು ಗುತ್ತಿಗೆ ಆಧಾರದ ಹುದ್ದೆಯಾಗಿದೆ. sr.indianrailways.gov.in ಈ ಅಧಿಕೃತ ವೆಬ್ ಸೈಟಿಗೆ ಹೋಗಿ ಈ ಹುದ್ದೆಗಳಿಗೆ ಆನ್ ಲೈನ್ ಅರ್ಜಿ (Online application) ಸಲ್ಲಿಸಬಹುದಾಗಿದೆ. ನೆನಪಿಡಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ಮೇ 2021. ಗುರುವಾರ ಸಂಜೆ ಐದು ಗಂಟೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಗಡುವು ಮುಗಿಯಲಿದೆ. 

ಹುದ್ದೆಗಳ ವಿವರ :
1. ಡಾಕ್ಟರ್ಸ್ (ಕಂಟ್ರಾಕ್ಟ್ ಮೆಡಿಕಲ್ ಪ್ರಾಕ್ಟಿಶನರ್ಸ್) - 16 ಹುದ್ದೆ
2. ನರ್ಸಿಂಗ್ ಸ್ಟಾಫ್ - 16 ಹುದ್ದೆ

ಇದನ್ನೂ ಓದಿ : ಸುಪ್ರೀಂಕೋರ್ಟ್ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರಿಗೆ ಕೊರೊನಾ ಧೃಢ

ವೇತನ :
1. ಡಾಕ್ಟರ್ಸ್ (ಕಂಟ್ರಾಕ್ಟ್ ಮೆಡಿಕಲ್ ಪ್ರಾಕ್ಟಿಶನರ್ಸ್) - 75,000/ತಿಂಗಳು
2. ನರ್ಸಿಂಗ್ ಸ್ಟಾಫ್ - 44900 (ಡಿಎ ಮತ್ತು ಇತರ ಭತ್ಯೆಗಳು)

ಶೈಕ್ಷಣಿಕ ವಿದ್ಯಾರ್ಹತೆ :
ನರ್ಸಿಂಗ್ ಸ್ಟಾಫ್ (Nursing staff) ಹುದ್ದೆಗಳಿಗಾಗಿ ಭಾರತೀಯ ನರ್ಸಿಂಗ್ ಪರಿಷತ್ ಅಥವಾ  BSc(ನರ್ಸಿಂಗ್) ಮೂಲಕ ಮಾನ್ಯತೆ ಪಡೆದಿರುವ ಸ್ಕೂಲ್ ಆಫ್ ನರ್ಸಿಂಗ್ (Nursing) ಅಥವಾ ಇತರ ಸಂಸ್ಥೆಗಳ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿಯಲ್ಲಿ ಮೂರು ವರ್ಷಗಳ ಕೋರ್ಸ್ ಮಾಡಿರುವ ರಿಜಿಸ್ಟರ್ಡ್ ನರ್ಸ್ ಅಥವಾ ಮಿಡ್ ವೈಫ್ ಸರ್ಟಿಫಿಕೇಟ್ ಪಡೆದಿರಬೇಕು.

ಇದನ್ನೂ ಓದಿ : 'ಯಜ್ಞ ಮಾಡಿ ಕೊರೋನಾದ ಮೂರನೇ ಅಲೆ ಓಡಿಸಿ' ಎಂದ ಬಿಜೆಪಿ ಸಚಿವೆ

ಡಾಕ್ಟರ್ಸ್ ಗಾಗಿ ಅಭ್ಯರ್ಥಿಯು ಮಾನ್ಯತೆ ಪಡೆದ ವಿವಿಯಿಂದ MBBS ಪದವಿ ಪಡೆದಿರಬೇಕು.
ವಯೋಮಾನ :
- ನರ್ಸಿಂಗ್ ಸ್ಟಾಫ್ 20 ರಿಂದ 40 ವರ್ಷಕರೋನಾ ಕಾಲದಲ್ಲಿ ದಕ್ಷಿಣ ರೈಲ್ವೆಯಲ್ಲಿ ಹುದ್ದೆಗಳಿಗೆ ನೇಮಕಾತಿ
ಮೇ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ರೈಲ್ವೆಯ ಅಧಿಕೃತ ವೆಬ್ ಸೈಟಿನಲ್ಲಿ ವಿವರ ಲಭ್ಯ
- ಡಾಕ್ಟರ್ (Doctor)  - ಗರಿಷ್ಟ 53 ವರ್ಷ

ತಡಮಾಡಬೇಡಿ ಕೂಡಲೇ ಅರ್ಜಿ ಸಲ್ಲಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News