ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲೇ ದೆಹಲಿ ಮುಖ್ಯ ಕಾರ್ಯದರ್ಶಿ ಅನ್ಷು ಪ್ರಕಾಶ್ ಮೇಲೆ ಎಎಪಿ(ಆಪ್) ಶಾಸಕರು ಹಲ್ಲೆ ನಡೆಸಿದ್ದಾರೆ.
ಅನ್ಷು ಪ್ರಕಾಶ್ ಮೇಲಿನ ಹಲ್ಲೆಯನ್ನು ಖಂಡಿಸಿರುವ ಅಧಿಕಾರಿಗಳು ಮುಷ್ಕರ ನಡೆಸಿದ್ದಾರೆ. ಮುಖ್ಯ ಕಾರ್ಯದರ್ಶಿ ಮೇಲೆ ದೌರ್ಜನ್ಯ ನಡೆಸಿದ ಶಾಸಕರನ್ನು ಕೂಡಲೇ ಬಂಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಅದೇ ಸಮಯದಲ್ಲಿ ಅವರು ದೆಹಲಿಯ 'ಎಎಪಿ' ಸರ್ಕಾರವನ್ನು ವಜಾಗೊಳಿಸುವಂತೆ ಸಹ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸ್ವತಃ ಅನ್ಷು ಪ್ರಕಾಶ್ ಮಾತನಾಡಿದ್ದು, ಸೋಮವಾರ ರಾತ್ರಿ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿದ್ದ ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
We have urged LG to take legal action be taken against those responsible. This is like a constitutional crisis, never seen such a thing happen in the past many years:DN Singh, Delhi Administrative Subordinate Services President on alleged assault of Delhi Chief Secy Anshu Prakash pic.twitter.com/3AsJSgzs9s
— ANI (@ANI) February 20, 2018
ಆಪ್ ಶಾಸಕರು ಅನ್ಷು ಪ್ರಕಾಶ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ
#WATCH Earlier visuals of the scuffle which broke out at Delhi Secretariat between AAP Minister Imran Hussain's PS Himanshu Singh and unidentified persons pic.twitter.com/cJhnMHypQx
— ANI (@ANI) February 20, 2018