VIDEO: ಪತಿ ಪ್ರೀತಿಯಿಂದ ಗುಲಾಬಿ ನೀಡಿದರೆ ಪತ್ನಿ ನೀಡಿದ ಉತ್ತರವೇ ಬೇರೆ, ಕೇಳಿದರೆ ನಗು ತಡೆಯುವುದು ಸಾಧ್ಯವೇ ಇಲ್ಲ

ಮಾಹಿತಿಯ ಪ್ರಕಾರ, ಈ ವಿಡಿಯೋ ಬಿಲಾಲ್ ಖಾನ್  ಎಂಬವರದ್ದು. ಬಿಲಾಲ್ ಖಾನ್ ಖುದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

Written by - Ranjitha R K | Last Updated : Oct 13, 2021, 09:17 PM IST
  • ಸಾಮಾಜಿಕ ಮಾಧ್ಯಮದಲ್ಲಿ ರೊಮ್ಯಾಂಟಿಕ್ ವಿಡಿಯೋ
  • ರೋಮ್ಯಾಂಟಿಕ್ ಪತಿಯ ಸರ್ಪ್ರೈಜ್ ಗೆ ಪತ್ನಿಯ ಉತ್ತರ
  • ವಿಡಿಯೋಗೆ ಸೋಶಿಯಲ್ ಮೀಡಿಯಾ ದಲ್ಲಿ ಮೆಚ್ಚುಗೆ
VIDEO: ಪತಿ ಪ್ರೀತಿಯಿಂದ ಗುಲಾಬಿ ನೀಡಿದರೆ ಪತ್ನಿ ನೀಡಿದ ಉತ್ತರವೇ ಬೇರೆ, ಕೇಳಿದರೆ ನಗು ತಡೆಯುವುದು ಸಾಧ್ಯವೇ ಇಲ್ಲ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ತುಂಬಾ ರೋಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ ಜನರು ಕೂಡಾ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ವೈರಲ್ (Viral video) ಆಗಿರುವ ವಿಡಿಯೋದಲ್ಲಿ, ಪತಿಯು ತನ್ನ ಪತ್ನಿಗೊಂದು ಸರ್ಪ್ರೈಜ್ ನೀಡಲು ಬಯಸುತ್ತಾನೆ. ಆದರೆ ಪತಿ ನೀಡಿದ ಸರ್ಪ್ರೈಜ್  ನೋಡಿ, ಪತ್ನಿ ಕೊಟ್ಟ ಉತ್ತರ ಮಾತ್ರ ಬಹಳ ತಮಾಷೆಯಾಗಿತ್ತು. ಪತ್ನಿ ನೀಡಿದ ಉತ್ತರ ವಿಡಿಯೋ ನೋಡಿದವರಿಗೆ ಬಹಳ ಇಷ್ಟವಾಗಿದೆ. 

ಮಾಹಿತಿಯ ಪ್ರಕಾರ, ಈ ವಿಡಿಯೋ (Video) ಬಿಲಾಲ್ ಖಾನ್  ಎಂಬವರದ್ದು. ಬಿಲಾಲ್ ಖಾನ್ ಖುದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ, ಅವೃ ತಮ್ಮ ಪತ್ನಿ , ದುವಾ ಸಿದ್ದಿಕಿ ಅವರಿಗೆ ಗುಲಾಬಿ ನೀಡುವ  ಮೂಲಕ ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Viral News: ಪ್ರವಾಹಕ್ಕೆ ಸಿಲುಕಿದ್ದ ಮರಿ ರಕ್ಷಿಸಲು ಈ ಶ್ವಾನ ಏನು ಮಾಡಿದೆ ನೋಡಿ…

ವೈರಲ್ ಆದ ವೀಡಿಯೋದಲ್ಲಿ, (Viral video) ವ್ಯಕ್ತಿ ಕಾರಿನಲ್ಲಿ ಕುಳಿತಿರುವುದು ಕಂಡುಬರುತ್ತದೆ. ಆಗ ತಾನೇ ಮಾರುಕಟ್ಟೆಯಿಂದ ಬಂದಿರುವ ವ್ಯಕ್ತಿ, ಮಾರುಕಟ್ಟೆಯಿಂದ ತಂದಿರುವ ಸಾಮಗ್ರಿಗಳನ್ನು ನೀಡಲು, ಪತ್ನಿಯನ್ನು ಮನೆಯ ಹೊರಗೆ ಕರೆಸಿಕೊಳ್ಳುತ್ತಾನೆ. ಅದನ್ನು ತೆಗೆದುಕೊಳ್ಳಲು ಪತ್ನಿ ಕಾರಿನ ಹತ್ತಿರ ಬರುತ್ತಿದ್ದಂತೆಯೇ, ಪತಿ ಅವರ ಕೈಗೆ ಗುಲಾಬಿ ಹೂವನ್ನು ನೀಡುತ್ತಾನೆ. ಗುಲಾಬಿ ನೋಡುತ್ತಿದ್ದಂತೆ ನಾಚುವ ಪತ್ನಿ, 'ಒಲೆ ಮೇಲೆ ಕೀಮಾ ಇದೆ ನಿಮ್ಮ ಪ್ರೀತಿ ಮುಗಿಯುವುದೇ ಇಲ್ಲ 'ಎನ್ನುತ್ತಾರೆ.    

 
 
 
 

 
 
 
 
 
 
 
 
 
 
 

A post shared by Bilal Khan (@bilalkhan228)

 

 ವೈರಲ್ ಆಗಿದೆ ವಿಡಿಯೋ :
ಬಿಲಾಲ್ ಈ ವಿಡಿಯೋವನ್ನು ಸೆಪ್ಟೆಂಬರ್ 23 ರಂದು ಪೋಸ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ ಈ ವೀಡಿಯೊವನ್ನು 178,462 ಜನರು ವೀಕ್ಷಿಸಿದ್ದಾರೆ. ಇದನ್ನು 35 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ವೀಡಿಯೋ ಕುರಿತು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೊ ತುಂಬಾ ತಮಾಷೆಯ ಜೊತೆಗೆ ರೋಮ್ಯಾಂಟಿಕ್ ಆಗಿದೆ.

ಇದನ್ನೂ ಓದಿ: Viral Video : 2 ಮೀಟರ್ ಉದ್ದದ ಹಾವಿನೊಂದಿಗೆ ಹಗ್ಗದಂತೆ ಆಡುತ್ತಿರುವ 2 ವರ್ಷದ ಮುದ್ದು ಕಂದ..! ಎಲ್ಲರನ್ನೂ ಆಕರ್ಷಿಸುತ್ತಿದೆ ಈ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News