close

News WrapGet Handpicked Stories from our editors directly to your mailbox

VIDEO: ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸದೇ ಗನ್ ತೋರಿಸಿ ವ್ಯಕ್ತಿ ಪರಾರಿ!

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Updated: May 16, 2019 , 12:53 PM IST
VIDEO: ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸದೇ ಗನ್ ತೋರಿಸಿ ವ್ಯಕ್ತಿ ಪರಾರಿ!

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿನ ಟೋಲ್ ಪ್ಲಾಜಾವೊಂದರಲ್ಲಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಟೋಲ್ ಸಿಬ್ಬಂದಿಗೆ ಗನ್ ತೋರಿಸಿ ಟೋಲ್ ಶುಲ್ಕ ಪಾವತಿಸದೇ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.

ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಟೋಲ್ ಪ್ಲಾಜಾ ಬಳಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಅಲ್ಲಿದ್ದ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಟೋಲ್ ಗೇಟ್ ತೆಗೆದು ತೆರಿಗೆ ಪಾವತಿಸದೇ ಪರಾರಿಯಾಗಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ.