VIDEO: ಉದ್ಯೋಗಿಗಳಿಗೆ 1 ಕೋಟಿ ರೂ. ಮೌಲ್ಯದ ಕಾರು ಉಡುಗೊರೆ ನೀಡಿದ ಉದ್ಯಮಿ

ದೇಶ-ವಿದೇಶಗಳಲ್ಲಿ ಹರೇ ಕೃಷ್ಣ ಡೈಮಂಡ್ ಎಕ್ಸ್ಪೋರ್ಟ್ ಕಂಪನಿ ಪ್ರಸಿದ್ಧವಾಗಿದೆ.

Updated: Sep 29, 2018 , 09:04 AM IST
VIDEO: ಉದ್ಯೋಗಿಗಳಿಗೆ 1 ಕೋಟಿ ರೂ. ಮೌಲ್ಯದ ಕಾರು ಉಡುಗೊರೆ ನೀಡಿದ ಉದ್ಯಮಿ

ಸೂರತ್: ಪ್ರತಿಯೊಬ್ಬ ವ್ಯಕ್ತಿಗೂ ಮರ್ಸಿಡಿಸ್ ನಂತಹ ಕಾರು ಖರೀದಿಸುವ ಆಸೆ, ಕನಸು ಇದ್ದೇ ಇರುತ್ತದೆ. ಆದರೆ ಆ ಕಾರು ಉಡುಗೊರೆಯಾಗಿ ಸಿಕ್ಕರೆ...! ಅದನ್ನು ಬೇರೆಯವರು ನಂಬುವುದಿರಲಿ ಸ್ವತಃ ಉಡುಗೊರೆ ಪಡೆದ ವ್ಯಕ್ತಿಗೇ ಇದು ಕನಸೋ? ನನಸೋ? ಎಂಬ ಗೊಂದಲ ಆ ಕ್ಷಣಕ್ಕಾದರೂ ಕಾಡುತ್ತದೆ. ಆದರೆ ಗುಜರಾತ್ನ ಸೂರತ್ನ ದೊಡ್ಡ ವಜ್ರ ಉದ್ಯಮಿಯಾಗಿರುವ ಸವ್ಜೀ ಭಾಯ್ ಧೋಲಾಕಿಯಾ ತಮ್ಮ ಮೂವರು ನೌಕರರಿಗೆ ಮೂರು ಕೋಟಿ ರೂಪಾಯಿ ಮೌಲ್ಯದ(ಒಂದು ಕಾರಿಗೆ 1 ಕೋಟಿ) ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ದೇಶ-ವಿದೇಶಗಳಲ್ಲಿ ಹರೇ ಕೃಷ್ಣ ಡೈಮಂಡ್ ಎಕ್ಸ್ಪೋರ್ಟ್ ಕಂಪನಿ ಹೆಸರಿನಲ್ಲಿ ಸವ್ಜೀ ಭಾಯ್ ಅವರ ಕಂಪನಿ ಪ್ರಸಿದ್ಧವಾಗಿದೆ. ಅವರ ಕಂಪನಿಯ ವಹಿವಾಟು 6000 ಕೋಟಿಗಿಂತಲೂ ಹೆಚ್ಚು. ಭಾರತದ 5 ಅಗ್ರ ವಜ್ರ ಕಂಪನಿಗಳಲ್ಲಿ ಅವರ ಕಂಪೆನಿಯು ಒಂದಾಗಿದೆ.

ಈ ಮೊದಲೂ ತನ್ನ ನೌಕರರಿಗೆ ದುಬಾರಿ ಉಡುಗೊರೆ ನೀಡಿದ್ದ ಉದ್ಯಮಿ:
ಸವ್ಜೀ ಯಾವಾಗಲೂ ತನ್ನ ಔದಾರ್ಯಕ್ಕಾಗಿ ಮುಖ್ಯಾಂಶಗಳಲ್ಲಿದ್ದಾರೆ. ಅವರು ಈಗಾಗಲೇ ತಮ್ಮ ನೌಕರರಿಗೆ ಕಾರುಗಳು, ಮನೆಗಳು ಮತ್ತು ಆಭರಣಗಳಂತಹ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ. 

ಕಂಪೆನಿಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಮೂರು ನೌಕರರಿಗೆ Mercedes-Benz GLS 350d SUV ಕಾರ್ ಉಡುಗೊರೆಗಳನ್ನು ಅವರು ನೀಡಿದರು. ಮಧ್ಯಪ್ರದೇಶದ ಗವರ್ನರ್ ಮತ್ತು ಗುಜರಾತ್ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ನಿಂದ ನೌಕರರು ಈ ಮರ್ಸಿಡಿಸ್ ಕಾರು ಪಡೆದರು. ಕಂಪನಿಯಿಂದ ಮರ್ಸಿಡಿಸ್ ಕಾರ್ ಉಡುಗೊರೆಯಾಗಿ ಪಡೆದ ಮುಖೇಶ್ ಭಾಯಿ ಚಂದ್ರಪಾ, ನಿಲೇಶ್ ಭಾಯಿ ಜಡ ಮತ್ತು ಮಹೇಶ್ ಭಾಯಿ ಕಳೆದ 20-25 ವರ್ಷಗಳಿಂದ ಇವರ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ.

ತಿಂಗಳಿಗೆ ಈ ಉದ್ಯೋಗಿಗಳ ಸಂಬಳ 3 ಲಕ್ಷ:
ಈ ಮೂವರು ನೌಕರರು ಚಿಕ್ಕ ವಯಸ್ಸಿನಲ್ಲೇ ಕಂಪೆನಿಯೊಂದಿಗೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಹಿತಿಯ ಪ್ರಕಾರ, ಈ ನೌಕರರ ವೇತನವು ತಿಂಗಳಿಗೆ 3 ಲಕ್ಷ ರೂ. ಗಿಫ್ಟ್ನಲ್ಲಿ ಮರ್ಸಿಡಿಸ್ ಕಾರು ಪಡೆದ ನಂತರ, ನೌಕರರಿಗೆ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸುಮಾರು 5,500 ಉದ್ಯೋಗಿಗಳು ಈ ಡೈಮಂಡ್ ಎಕ್ಸ್ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ ಸವ್ಜೀ ಒಂದು ಕೋಟಿ ರೂ. ಚೆಕ್ ನೀಡಿದ್ದಾರೆ.