Viral Video : ಗಸ್ತಿನಲ್ಲಿದ್ದಾಗ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

ಎಂದಿನಂತೆ ನಾಲ್ವರು ಸಿಬ್ಬಂದಿ  ಗಸ್ತು ತಿರುಗುತ್ತಿದ್ದ ವೇಳೆ ಪೊದೆ ಬಳಿ ನಿಂತಿದ್ದ ಕಾಡಾನೆಯೊಂದು ದಿಢೀರನೇ ಪ್ರತ್ಯಕ್ಷವಾಗಿ  ದಾಳಿ ಮಾಡಲು ಮುಂದಾಗಿದೆ‌.  ಈ ವಿಡಿಯೋ ಈಗ ವೈರಲ್ ಆಗುತ್ತಿದೆ. 

Written by - Zee Kannada News Desk | Last Updated : Mar 16, 2022, 11:53 AM IST
  • ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಪ್ರತ್ಯಕ್ಷವಾದ ಕಾಡಾನೆ
  • ಬಂಡೀಪುರ ವಲಯದ ಟೈಗರ್ ರೋಡ್ ನಲ್ಲಿ ಘಟನೆ
  • ವೈರಲ್ ಆಯಿತು ವಿಡಿಯೋ
Viral Video : ಗಸ್ತಿನಲ್ಲಿದ್ದಾಗ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!  title=
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಪ್ರತ್ಯಕ್ಷವಾದ ಕಾಡಾನೆ

ಚಾಮರಾಜನಗರ : ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕಾಡಾನೆಯೊಂದು ಅಟ್ಟಾಡಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಟೈಗರ್ ರೋಡ್ ನಲ್ಲಿ ನಡೆದಿದೆ (Elephant video). 

ಎಂದಿನಂತೆ ನಾಲ್ವರು ಸಿಬ್ಬಂದಿ  ಗಸ್ತು ತಿರುಗುತ್ತಿದ್ದ ವೇಳೆ ಪೊದೆ ಬಳಿ ನಿಂತಿದ್ದ ಕಾಡಾನೆಯೊಂದು (Wild elephant) ದಿಢೀರನೇ ಪ್ರತ್ಯಕ್ಷವಾಗಿ  ದಾಳಿ ಮಾಡಲು ಮುಂದಾಗಿದೆ‌. ಅರಣ್ಯ ಇಲಾಖೆ ಚಾಲಕ ಶ್ರೀಕಂಠ ಎಂಬವರು, ರಿವರ್ಸ್ ಗೇರಿನಲ್ಲೇ ಚಾಕಚಕತ್ಯೆಯಿಂದ ಜೀಪನ್ನು ಚಲಾಯಿಸಿ ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ (wild elephant video).

ಇದನ್ನೂ ಓದಿ : ರಾಜ್ಯಾದ್ಯಂತ 78 ಕಡೆ ಎಸಿಬಿ ದಾಳಿ - 200 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ

ಸಾಮಾನ್ಯವಾಗಿ ಈ ರೀತಿ ಘಟನೆಗಳು ಕಾಡಿನಲ್ಲಿ ನಡೆಯುತ್ತದೆ. ಅಪಾಯದ ಭಯದಿಂದಾಗಿ ಆನೆಗಳು ಹೀಗೆ ಅಟ್ಟಾಡಿಸಿಕೊಂಡು ಬರುತ್ತವೆ. ಸಾಕಷ್ಟು ಬಾರಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಇಂಥಹ ಅನುಭವವಾಗುತ್ತವೆ. ವನ್ಯಜೀವಿ ಹೋರಾಟಗಾರ ಜೋಸೆಫ್ ಹೂವರ್ ಸೇರಿದಂತೆ ಬಹಳಷ್ಟು ನೆಟ್ಟಿಗರು ಚಾಲಕ ಶ್ರೀಕಂಠ ಅವರ  ಚಾಲನಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  (Social media) ವೈರಲ್ ಆಗುತ್ತಿದೆ (Viral video).  ಸಾಕಷ್ಟು ಸಂಖ್ಯೆಯಲ್ಲಿ ಜನ ಕೂಡಾ ಈ ವಿಡಿಯೋ ವೀಕ್ಷಿಸುತ್ತಿದ್ದಾರೆ.  

ಇದನ್ನೂ ಓದಿ : 'ಸಮಗ್ರ ಆರ್ಥಿಕ ಬೆಳಣಿಗೆಯಲ್ಲಿ 2025 ಕ್ಕೆ ಕರ್ನಾಟಕ ನಂಬರ್ ಒನ್ ರಾಜ್ಯವಾಗಲಿದೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News