ಮೂಲ ಕೋರ್ಟ್ ಗಳನ್ನು ವರ್ಚುವಲ್ ಕೋರ್ಟ್ ಗಳು ಬದಲಿಸಲು ಸಾಧ್ಯವಿಲ್ಲ -ನ್ಯಾ.ಡಿ.ವೈ.ಚಂದ್ರಚೂಡ್

ಕೋವಿಡ್ -19 ಸಾಂಕ್ರಾಮಿಕ ರೋಗವು ಹಠಾತ್ತನೆ ವಕೀಲರು, ದಾವೆ ಹೂಡುವವರು ಮತ್ತು ಮಾಧ್ಯಮ ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವರ್ಚುವಲ್ ಕೋರ್ಟ್ ವಿಚಾರಣೆಗೆ ಆಶ್ರಯಿಸಲು ಒತ್ತಾಯಿಸಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಭಾನುವಾರ ಹೇಳಿದ್ದಾರೆ.

Last Updated : May 24, 2020, 09:35 PM IST
 ಮೂಲ ಕೋರ್ಟ್ ಗಳನ್ನು ವರ್ಚುವಲ್ ಕೋರ್ಟ್ ಗಳು ಬದಲಿಸಲು ಸಾಧ್ಯವಿಲ್ಲ -ನ್ಯಾ.ಡಿ.ವೈ.ಚಂದ್ರಚೂಡ್ title=

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗವು ಹಠಾತ್ತನೆ ವಕೀಲರು, ದಾವೆ ಹೂಡುವವರು ಮತ್ತು ಮಾಧ್ಯಮ ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವರ್ಚುವಲ್ ಕೋರ್ಟ್ ವಿಚಾರಣೆಗೆ ಆಶ್ರಯಿಸಲು ಒತ್ತಾಯಿಸಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಭಾನುವಾರ ಹೇಳಿದ್ದಾರೆ.

ಆದರೆ ವರ್ಚುವಲ್ ಕೋರ್ಟ್ ವಿಚಾರಣೆಗಳು ಭೌತಿಕ ನ್ಯಾಯಾಲಯಗಳಿಗೆ ಬದಲಿಯಾಗಿರುವುದಿಲ್ಲ ಎಂದು ಹೈದರಾಬಾದ್ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ ನ ನ್ಯಾಯಾ ಫೋರಮ್ ಆಯೋಜಿಸಿರುವ ವೆಬ್ನಾರ್ನಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.

'ವರ್ಚುವಲ್ ಕೋರ್ಟ್ ವಿಚಾರಣೆಗಳು ಒಂದು ರೀತಿಯ ರಾಮಬಾಣ ಎಂಬ ಕಲ್ಪನೆಯಿಂದ ಹೊರ ಬರಬೇಕೆಂದು ಜನರಿಗೆ  ಬಯಸುತ್ತೇನೆ. ಭೌತಿಕ ನ್ಯಾಯಾಲಯದ ವಿಚಾರಣೆಗಳನ್ನು ಬದಲಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ನಾವು ವರ್ಚುವಲ್ ಕೋರ್ಟ್ ವಿಚಾರಣೆಗಳನ್ನು ಆಶ್ರಯಿಸಬೇಕಾಗಿತ್ತು, ಏಕೆಂದರೆ ಕೋವಿಡ್ -19 ಯಾವುದೇ ಎಚ್ಚರಿಕೆ ಇಲ್ಲದೆ ಬಂದಿತು  ಮತ್ತು ನಮಗೆ ಬೇರೆ ಆಯ್ಕೆಗಳಿರಲ್ಲ. ನ್ಯಾಯಾಲಯಕ್ಕೆ ಬರುವ ವಕೀಲರು, ದಾವೆ ಹೂಡುವವರು, ಮಾಧ್ಯಮ ಸಿಬ್ಬಂದಿ, ಪ್ಯಾರಾ-ಲೀಗಲ್, ಇಂಟರ್ನಿಗಳನ್ನು ನಾವು ರಕ್ಷಿಸಬೇಕಾಗಿತ್ತು' ಎಂದು ಅವರು ಹೇಳಿದರು.

ಕೊರೊನಾವೈರಸ್ ದಿಂದಾಗಿ ಸಂಪೂರ್ಣ ಸ್ಥಗಿತಗೊಂಡಿರುವ ಸುಪ್ರೀಂ ಕೋರ್ಟ್, ಮಾರ್ಚ್ 23 ರಿಂದ ವಕೀಲರ ಉಪಸ್ಥಿತಿಯಿಲ್ಲದೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅತ್ಯಂತ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸುತ್ತಿದೆ.

Trending News