ಅಜ್ಮೀರ್, ಅಲ್ವಾರ್ನಲ್ಲಿ ಲೋಕಸಭಾ ಉಪಚುನಾವಣೆಗೆ ಮತದಾನ, ಕಾಂಗ್ರೇಸ್-ಬಿಜೆಪಿ ನಡುವೆ ನೇರ ಹಣಾಹಣೆ

ರಾಜಸ್ಥಾನದಲ್ಲಿ, ಅಲ್ವಾರ್ ಮತ್ತು ಅಜ್ಮೀರ್ ಲೋಕಸಭಾ ಸ್ಥಾನಗಳ ಜೊತೆಗೆ, ಭಿಲ್ವಾರ ಜಿಲ್ಲೆಯ ಮಂಡಲ್ಗಢ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಉಪಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರ ಮತ್ತು ನವಪಾಡ ವಿಧಾನಸಭೆ ಉಪಚುನಾವಣೆಗೆ ಮತದಾನ ಆರಂಭವಾಗಿದೆ.

Last Updated : Jan 29, 2018, 10:15 AM IST
ಅಜ್ಮೀರ್, ಅಲ್ವಾರ್ನಲ್ಲಿ ಲೋಕಸಭಾ ಉಪಚುನಾವಣೆಗೆ ಮತದಾನ, ಕಾಂಗ್ರೇಸ್-ಬಿಜೆಪಿ ನಡುವೆ ನೇರ ಹಣಾಹಣೆ title=
ಪಿಕ್: ANI

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ರಾಜಸ್ಥಾನದ ಅಜ್ಮೀರ್ ಮತ್ತು ಅಲ್ವಾರ್ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೇಸ್-ಬಿಜೆಪಿ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. 

ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಮಂಡಲ್ಗಢ ವಿಧಾನಸಭಾ ಕ್ಷೇತ್ರ ಮತ್ತು ಉತ್ತರ 24 ಪರ್ಗಾನಸ್ ಜಿಲ್ಲೆಯ ನವಪದಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಮತದಾನ ಆರಂಭವಾಗಿದೆ. 

ಮತದಾನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಅಲ್ವಾರ್ ಲೋಕಸಭಾ ಕ್ಷೇತ್ರದಲ್ಲಿ ಡಾ. ಜಸ್ವಂತ್ ಯಾದವ್ (ಬಿಜೆಪಿ), ಡಾ. ಕರಣ್ ಸಿಂಗ್ ಯಾದವ್ (ಕಾಂಗ್ರೆಸ್) ನಡುವೆ ಹಾಗೂ ಅಜ್ಮೀರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಾ. ರಾಡು ಶರ್ಮಾ ಮತ್ತು ಬಿಜೆಪಿಯ ರಾಮ್ ಸ್ವರೂಪ್ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ. ಅದೇ ಸಮಯದಲ್ಲಿ, ಮಂಡಲ್ಗಢ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹೋರಾಟ ನಡೆಯುತ್ತಿದೆ. ಬಿಜೆಪಿಯ ಶಕ್ತಿ ಸಿಂಗ್ ಮತ್ತು ಕಾಂಗ್ರೆಸ್ನ ವಿವೇಕ್ ಧಕಾಡ್ ಕಣದಲ್ಲಿದ್ದಾರೆ.

ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಟಿಎಂಸಿ-ಬಿಜೆಪಿ ನಡುವಿನ ಹೋರಾಟ...
ಪಶ್ಚಿಮ ಬಂಗಾಳದ ಉಲುಬೆರಿಯಾ ಲೋಕಸಭೆ ಮತ್ತು ನವಪದಾ ವಿಧಾನಸಭೆಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ ಮತದಾನ ಆರಂಭವಾಗಿದೆ. ಈ ಎರಡು ಸ್ಥಾನಗಳಲ್ಲಿ ಆಡಳಿತ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಘರ್ಷಣೆ ಇದೆ. ಅದೇ ಸಮಯದಲ್ಲಿ, ಈ ಉಪಚುನಾವಣೆಯಲ್ಲಿ ಸಿಪಿಎಂ ತನ್ನ ಹಳೆಯ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಹೆಣಗಾಡುತ್ತಿದೆ.

Trending News