ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಅಧಿಕಾರ ವಶಪಡಿಸಿಕೊಳ್ಳಲು ಬಿಜೆಪಿ ವಿಶೇಷ ಪ್ಲಾನ್!

ಪಶ್ಚಿಮ ಬಂಗಾಳದಲ್ಲಿ  ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ.

Last Updated : Sep 16, 2019, 08:40 AM IST
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಅಧಿಕಾರ ವಶಪಡಿಸಿಕೊಳ್ಳಲು ಬಿಜೆಪಿ ವಿಶೇಷ ಪ್ಲಾನ್! title=

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್(Trinamool Congress) ಅನ್ನು ಉಚ್ಚಾಟಿಸಲು ಬಿಜೆಪಿ ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಪಕ್ಷದ ಗುರಿಯಾಗಿದೆ. 2021 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿ ಪಕ್ಷವು ತನ್ನ ನೆಲೆಯನ್ನು ಹೆಚ್ಚಿಸಲು ಸಾಕಷ್ಟು ಸಮಯವನ್ನು ಹೊಂದಿದೆ. 

ಪಕ್ಷದ ಮೂಲಗಳ ಪ್ರಕಾರ, ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಬಂಗಾಳ ಬಿಜೆಪಿಯ ಮುಖಂಡರನ್ನು ಭೇಟಿಯಾಗಿ ಪ್ರತಿ ವಿಧಾನಸಭಾ ಸ್ಥಾನಕ್ಕೆ ನಾಲ್ಕು ಜನರ ತಂಡವನ್ನು ರಚಿಸಲು ನಿರ್ಧರಿಸಿದ್ದಾರೆ. ತಂಡವು ಸಂಸದರು, ಶಾಸಕರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಿರುತ್ತದೆ.

"ಇದಲ್ಲದೆ, ನಿರ್ದಿಷ್ಟ ಸ್ಥಾನಕ್ಕೆ ಆಯ್ಕೆಯಾದ ನಾಯಕನಿಗೆ ಆ ಸ್ಥಾನಕ್ಕೆ ಯಾವುದೇ ವಿಶೇಷ ಸಂಪರ್ಕವಿರುವುದಿಲ್ಲ. ಉದಾಹರಣೆಗೆ, ಯಾರಾದರೂ ಹೌರಾ ಸ್ಥಾನದಿಂದ ಬಂದಿದ್ದರೆ ಅವರನ್ನು ಡಾರ್ಜಿಲಿಂಗ್ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ಕಾರಣ ತಂಡ ಸರಿಯಾಗಿ ಮತ್ತು ಪಕ್ಷಪಾತವಿಲ್ಲದ ವರದಿಯನ್ನು ತಯಾರಿಸುವುದಾಗಿದೆ."
 
ನಿಯೋಜಿತ ತಂಡಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಪ್ರತ್ಯೇಕ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಚುನಾವಣೆಗೆ ಇನ್ನೂ ಹೆಚ್ಚು ಸಮಯ ಇರುವುದರಿಂದ ಈ ಹಂತದಲ್ಲಿ ಪ್ರತಿ ಕ್ಷೇತ್ರದ ಬಗೆ ವರದಿ ಸಲ್ಲಿಕೆಯಾದರೆ ಚುನಾವಣೆ ಬಗ್ಗೆ ರೂಪು ರೇಷೆಗಳನ್ನು ಸಿದ್ಧಪಡಿಸಲು ಇದು ಸಹಕಾರಿಯಾಗಲಿದೆ. ಅಕ್ಟೋಬರ್ 8 ರಿಂದ ಎಲ್ಲಾ ತಂಡಗಳು ತಮ್ಮ ಕೆಲಸವನ್ನು ಪ್ರಾರಂಭಿಸಲಿವೆ. ಸಮಿತಿಯ ಮುಖಂಡರು ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ವರದಿ ಸಿದ್ಧಪಡಿಸುತ್ತಾರೆ. "ಈ ವರದಿಯನ್ನು ಬಂಗಾಳ ಬಿಜೆಪಿಯ ಪ್ರಮುಖ ಗುಂಪು ಸಲ್ಲಿಸುತ್ತದೆಯೇ ಹೊರತು ಯಾವುದೇ ವ್ಯಕ್ತಿಯಿಂದ ಅಲ್ಲ" ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನವೆಂಬರ್ 1 ರಂದು ಈ ವರದಿ ಬಗ್ಗೆ ಚರ್ಚಿಸಲಿದ್ದಾರೆ.

ವಿಶೇಷವೆಂದರೆ, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಗಾಳದಲ್ಲಿ 18 ಸ್ಥಾನಗಳನ್ನು ಗೆದ್ದಿದೆ. 2014 ರಲ್ಲಿ ಬಿಜೆಪಿಗೆ ಕೇವಲ 6 ಸ್ಥಾನಗಳು ಸಿಕ್ಕವು. 2019 ರ ದೊಡ್ಡ ವಿಜಯದ ನಂತರ, ಟಿಎಂಸಿಯ ಅನೇಕ ದೊಡ್ಡ ನಾಯಕರು ಬಿಜೆಪಿಗೆ ಸೇರಿದ್ದಾರೆ. ಬಹುಸಂಖ್ಯಾತ ಅಲ್ಪಸಂಖ್ಯಾತ ಮತದಾರರು ಇರುವ 90 ಸ್ಥಾನಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

Trending News